ಮಂಡ್ಯದಲ್ಲಿ ಅಂಬರೀಶ್ ಗಂಗನಮ್ ಸ್ಟೈಲ್ ಡಾನ್ಸ್

ಜೆಡಿಎಸ್ ನ ಎಂ ಶ್ರೀನಿವಾಸ್ ಅವರು ಅಂಬರೀಶ್ ಅವರಿಗೆ ಪ್ರಬಲ ಸ್ಪರ್ಧಿಯಾಗಿದ್ದರು. ಅಂಬರೀಶ್ ಅವರು ಈ ಹಿಂದೆ ಹಲವಾರು ಸಲ ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ ಮತದಾರ ಅವರ ಕೈಹಿಡಿದಿದ್ದಾನೆ.
ಪ್ರತಿಷ್ಠಿತ ಕಣವೆನೆಸಿದ್ದ ಮಂಡ್ಯದಲ್ಲಿ ನೇರ ಹಣಾಹಣಿ ಇದ್ದದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಅಂಬರೀಶ್ ಅವರು ತಮ್ಮ ಸಮೀಪದ ಸ್ಪರ್ಧಿ ಎಂ.ಶ್ರೀನಿವಾಸ್ ವಿರುದ್ಧ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಕಾಲ್ ಶೀಟನ್ನು ಮುಂದೂಡಿ ಅಂಬರೀಶ್ ಪರ ಪ್ರಚಾರ ಮಾಡಿದ್ದು ಕಡೆಗೂ ಫಲ ಸಿಕ್ಕಿದೆ. ಸುದೀಪ್ ಅವರು ಅಂಬರೀಶ್ ಅವರ ಪ್ರಚಾರ ಮಾಡಿದ್ದರು.
ಎಂ.ಎಚ್.ಅಂಬರೀಶ್ (ಕಾಂಗ್ರೆಸ್) ಮತಗಳು-52864
ಎಂ.ಶ್ರೀನಿವಾಸ್ (ಜೆಡಿಎಸ್) ಮತಗಳು 33865












Click it and Unblock the Notifications