ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷ ಪರಿಚಯ : ಲೋಕ ಸತ್ತಾ ಸಂಕ್ಷಿಪ್ತ ಚಿತ್ರಣ

By Mahesh
|
Google Oneindia Kannada News

ಮಾಜಿ ಐಎಎಸ್ ಅಧಿಕಾರಿ ಡಾ. ಜಯಪ್ರಕಾಶ್ ನಾರಾಯಣ್ ಅವರು 2006ರಲ್ಲಿ ಸ್ಥಾಪಿಸಿದ ಲೋಕಸತ್ತಾ ಪಕ್ಷ ಒಂದು ರಾಷ್ಟ್ರೀಯ ರಾಜಕೀಯ ಪಕ್ಷವಾಗಿದೆ. ಭ್ರಷ್ಟ ರಾಜಕೀಯ ವ್ಯವಸ್ಥೆ ಬದಲಾವಣೆಗಾಗಿ 1996ರಲ್ಲಿ ಆರಂಭವಾದ ಲೋಕಸತ್ತಾ ಜನಾಂದೋಲನ ನಂತರ ರಾಜಕೀಯ ಪಕ್ಷವಾಗಿ ರೂಪುಗೊಂಡಿದೆ.

ಪಕ್ಷದ ಧ್ಯೇಯ: ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಎಲ್ಲರಿಗೂ ಸಮಾನತೆ, ಪ್ರಜೆಗಳೇ ಪ್ರಭುಗಳು, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ. ಚುನಾವಣಾ ಮಿತಿಯಾದ 16 ಲಕ್ಷ ಮೀರಬಾರದು. ಸ್ವಂತ ಹಣ ಬಳಸದೇ, ಜನರಿಂದಲೇ ಹಣ ಸಂಗ್ರಹಿಸಿ ಅದನ್ನು ಚುನಾವಣೆಗೆ ಬಳಸಬೇಕು ಎಂಬುದು ಪಕ್ಷದ ಉದ್ದೇಶ.

ಮಾಹಿತಿ ಹಕ್ಕು ಕಾಯ್ದೆ ಬಲವರ್ಧನೆ, ಕ್ರಿಮಿನಲ್ ಹಿನ್ನೆಲೆಯುಳ್ಳ ರಾಜಕಾರಣಿಗಳ ಅಕ್ರಮ ಆಸ್ತಿ ಬಹಿರಂಗ, ಎನ್ನಾರೈಗಳಿಗೆ ಮತದಾನದ ಹಕ್ಕು ಮುಂತಾದವು ಪ್ರಮುಖ ಚಟುವಟಿಕೆಗಳು

Lok Satta Party Profile

ಪಕ್ಷದ ಪ್ರಮುಖರು: ಐಎಎಸ್ ಮಾಜಿ ಅಧಿಕಾರಿ ಆಂಧ್ರಪ್ರದೇಶದ ಮೂಲದ ಡಾ.ಜಯಪ್ರಕಾಶ್ ನಾರಾಯಣ್ ಅವರು ಲೋಕಸತ್ತಾ ಪಕ್ಷ ಸ್ಥಾಪಕರು. ಮುಂಬೈನ ಸುರೇಂದ್ರ ಶ್ರೀವಾಸ್ತವ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.ಬೆಂಗಳೂರಿನ ಡಾ. ಅಶ್ಚಿನ್ ಮಹೇಶ್ ಅವರು ರಾಷ್ಟ್ರೀಯ ಸಮಿತಿ ಸದಸ್ಯರು

ಕರ್ನಾಟಕ ಸಮಿತಿ ಸದಸ್ಯರು:
ಅಧ್ಯಕ್ಷೆ: ರಾಮಲಕ್ಷ್ಮಿ ಕೆ.
ಪಕ್ಷದ ಕಾರ್ಯದರ್ಶಿ ಸಿ.ಎನ್. ದೀಪಕ್

ಕಾರ್ಯಕಾರಿ ಸಮಿತಿ ಸದಸ್ಯರು:
* ದೀಪಕ್ ಸಿ.ಎನ್'
* ಮಸ್ತಾನಯ್ಯ.ಕೆ
* ರಾಜಶೇಖರ್.ಎಂ
* ರವಿಕೃಷ್ಣಾ ರೆಡ್ಡಿ
* ರೋಹಿಣಿ ಚಂದ್ರಕಾಂತ್
* ಶಾಂತಲಾ ದಾಮ್ಲೆ
* ಶ್ರೀವಾಸುಲು.ಕೆ
* ಯೋಗಯ್ಯ.ವಿ

ಮಾಧ್ಯಮ ಪ್ರಮುಖ್: ಆನಂದ್ .ಆರ್. ಯದವಾಡ್

ಸಲಹಾ ಸಮಿತಿ ಸದಸ್ಯರು:
* ಅಜಿತ್ ಫಡ್ನಿಸ್
* ಶ್ರೀನಿವಾಸ್ ಅಳವಿಲ್ಲಿ
* ತಾರಾ ಕೃಷ್ಣಮೂರ್ತಿ

ಬೆಂಬಲಿಗರು: ಎನ್ನಾರೈಗಳು, ಪಿಐಓಗಳನ್ನು ಹೊಂದಿರುವ People For Lok Satta (PFL) ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ ಲೋಕಸತ್ತಾ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾ ಬಂದಿದೆ. ಅಮೆರಿಕದಲ್ಲಿ ನೋಂದಾಯಿಸಲ್ಪಟ್ಟಿರುವ ಈ ಸಂಸ್ಥೆ ತೆರಿಗೆ ವಿನಾಯತಿಯನ್ನು ಪಡೆದಿದೆ.

ಪಕ್ಷದ ಚಿನ್ಹೆ: Whistle
ವೆಬ್ ಸೈಟ್: http://loksattakarnataka.org/
ಮುಖವಾಣಿ : ಲೋಕ್ ಸತ್ತಾ ಟೈಮ್ಸ್

ಇಮೇಲ್ : [email protected]

ವಿಳಾಸ: ಮನೆ ಸಂಖ್ಯೆ: 8-2-674B/2/9, ಪ್ಲಾಟ್ ಸಂಖ್ಯೆ: 93,
ಹ್ಯಾಪಿ ವ್ಯಾಲಿ, ರಸ್ತೆ ಸಂಖ್ಯೆ: 13-A,
ಬಂಜಾರಾ ಹಿಲ್ಸ್
ಹೈದರಾಬಾದ್
ಆಂಧ್ರಪ್ರದೇಶ
500 034

ದೂರವಾಣಿ: 91-40-2331 1819 / 2331 1817
91-40-2331 0612

* ಫೇಸ್ ಬುಕ್ ಅಧಿಕೃತ ಪುಟ* ಟ್ವಿಟರ್ ನಲ್ಲಿ ಹಿಂಬಾಲಿಸಿ
* ಗೂಗಲ್ ಪ್ಲಸ್ ನಲ್ಲಿ ಲೋಕ ಸತ್ತಾ
* ಲಿಂಕ್ಡ್ ಇನ್ ಖಾತೆ
ಸ್ಕೋರ್ ಕಾರ್ಡ್:
* 2008ರಲ್ಲಿ ಆಂಧ್ರಪ್ರದೇಶ ಅಸೆಂಬ್ಲಿ ಶೇ 10 ರಷ್ಟು ಮತ ಗಳಿಕೆ
* 2009ರ ಆಂಧ್ರಪ್ರದೇಶ ಅಸೆಂಬ್ಲಿ, 294 ಕ್ಷೇತ್ರಗಳ ಪೈಕಿ, ಜಯಪ್ರಕಾಶ್ ನಾರಾಯಣ್ ಅವರಿಗೆ ಕುಕಟ್ ಪಲ್ಲಿ ಕ್ಷೇತ್ರದಲ್ಲಿ ಗೆಲುವು
* 2010ರಲ್ಲಿ ಬಿಬಿಎಂಪಿ 198 ವಾರ್ಡ್ ಗಳಲ್ಲಿ 5 ಕ್ಷೇತ್ರಗಳಲ್ಲಿ ಸ್ಪರ್ಧೆ ಶೇ 7 ರಷ್ಟು ಮತ ಗಳಿಕೆ
* 2011 : ತಮಿಳುನಾಡಿನಲ್ಲಿ 35 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸ್ಪರ್ಧೆ
* 2012 ಬೆಂಗಳೂರು ಪದವೀಧರರ ಕ್ಷೇತ್ರದ ಪರಿಷತ್ ಚುನಾವಣೆ ಶೇ 16ರಷ್ಟು ಮತ ಗಳಿಕೆ

English summary
Know Your Political Party : Lok Satta is a political party in India, founded by Jayaprakash Narayan. Since 1996, the Lok Satta Movement functioned as a non-governmental organization, but on 2 October 2006, the movement was reorganized into a formal political party. K Ramalakshmi and Ashwini Mahesh are the key members of Karnataka Chapter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X