ಟಿ ನರಸೀಪುರ : ಮಹಾದೇವಪ್ಪ ಸೋಲುವ ಛಾನ್ಸ್ ಕಡಿಮೆ

ರಾಜಕೀಯ ಮಹತ್ವ : ತಿರುಮಕೂಡಲು ನರಸೀಪುರ ಎಂದೇ ಹೆಸರುವಾಸಿಯಾಗಿರುವ ಈ ಕ್ಷೇತ್ರ ಸಿದ್ದರಾಮಯ್ಯ ಬೆಂಬಲಿಗ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರ.
ಪ್ರಮುಖ ಸ್ಪರ್ಧಿಗಳು : ಕಾಂಗ್ರೆಸ್‍ನಿಂದ ಮಹಾದೇವಪ್ಪ ಮತ್ತೆ ಅಖಾಡಕ್ಕಿಳಿಯುವುದು ಖಚಿತ. ಜೆಡಿಎಸ್‍ನಿಂದ ಸುಂದರೇಶ್, ಬಿಜೆಪಿಯಿಂದ ಜಿ. ರಮೇಶ್, ಕೆಜೆಪಿಯಿಂದ ಮಾಜಿ ಶಾಸಕ ಭಾರತೀಶಂಕರ್ ಕಣಕ್ಕಿಳಿವ ಸಂಭವ ಇದೆ.
ಗೆಲುವಿನ ಲೆಕ್ಕಾಚಾರ : ಸಿದ್ದರಾಮಯ್ಯ ಅವರ ಪ್ರಭಾವ ಇರುವ ಈ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ಮಹಾದೇವಪ್ಪ ಅಭ್ಯರ್ಥಿಯಾಗಿರುವುದು ಕಾಂಗ್ರೆಸ್‍ಗೆ ಪ್ಲಸ್ ಪಾಯಿಂಟ್.
ಸ್ಥಳೀಯ ಸಂಸ್ಥೆ ಚುನಾವಣೆ : ಟಿ. ನರಸೀಪುರ ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಒಟ್ಟು 11 ಸ್ಥಾನಗಳಲ್ಲಿ ಕಾಂಗ್ರೆಸ್ 4, ಜೆಡಿಎಸ್ 2, ಬಿಜೆಪಿ 2, ಕೆಜೆಪಿ 1 ಹಾಗೂ ಪಕ್ಷೇತರರು 2 ಸ್ಥಾನಗಳನ್ನು ಪಡೆದಿದ್ದಾರೆ.
ಮತದಾರರ ವಿವರ
ಪುರುಷ ಮತದಾರರು - 89,669
ಮಹಿಳಾ ಮತದಾರರು - 86,308
ಒಟ್ಟು ಮತದಾರರು - 1,75,977
ಹಾಲಿ ಶಾಸಕ - ಎಚ್.ಸಿ ಮಹದೇವಪ್ಪ(ಕಾಂಗ್ರೆಸ್)
ಸೋತ ಅಭ್ಯರ್ಥಿ - ಎಂ.ಸಿ. ಸುಂದರೇಶನ್ (ಜೆಡಿಎಸ್)
ಗೆಲುವಿನ ಅಂತರ 13 ಸಾವಿರ ಮತಗಳು
ಜಾತಿವಾರು ಮತದಾರರು : ಒಕ್ಕಲಿಗರು - 32 ಸಾವಿರ, ಎಸ್ಸಿ - 34 ಸಾವಿರ, ಎಸ್‍ಟಿ - 25 ಸಾವಿರ, ಕುರುಬರು - 25 ಸಾವಿರ, ಲಿಂಗಾಯಿತರು - 32 ಸಾವಿರ, ಮುಸ್ಲಿಂ - 9,977, ಇತರೆ - 18 ಸಾವಿರ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications