ಪಿರಿಯಾಪಟ್ಟಣದಲ್ಲಿ ಯಾರು ಬೇಕಾದ್ರೂ ಗೆಲ್ಲಬಹುದು!

ರಾಜಕೀಯ ಮಹತ್ವ : ಟಿಬೆಟಿಯನ್ ನಿರಾಶ್ರಿತರ ಬೈಲುಕುಪ್ಪೆ ಪ್ರಸಿದ್ಧ ಪ್ರವಾಸಿ ತಾಣ. ತಂಬಾಕು ಮುಖ್ಯ ಬೆಳೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 787 ಮತಗಳ ಅಂತರದಿಂದ ಗೆದ್ದಿದ್ದರು.
ಪ್ರಮುಖ ಸ್ಪರ್ಧಿಗಳು : ಶಾಸಕ ವೆಂಕಟೇಶ್ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್‍ನಿಂದ ಮಹದೇವು. ಕೆಜೆಪಿಯಿಂದ ಬಸವರಾಜು ಮತ್ತು ಬಿಜೆಪಿಯಿಂದ ವಿಜಯಶಂಕರ್ ಸ್ಪರ್ಧಿಸೋದು ಖಚಿತ.
ಗೆಲುವಿನ ಲೆಕ್ಕಾಚಾರ : ಕ್ಷೇತ್ರದಲ್ಲಿ ಕುರುಬರು, ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗರ ಮತಗಳು ನಿರ್ಣಾಯಕ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಸಿದ್ದು ಸಿಎಂ (ಸಂಭವನೀಯ) ಅಭ್ಯರ್ಥಿಯಾಗಿರೋ ಕಾರಣ ಕುರುಬರ ಮತಗಳು ಕಾಂಗ್ರೆಸ್ ಕೈ ತಪ್ಪುವುದು ಅನುಮಾನ.
ಸ್ಥಳೀಯ ಸಂಸ್ಥೆ ಚುನಾವಣೆ : ಪಿರಿಯಾಪಟ್ಟಣ ಪಟ್ಟಣ ಪಂಚಾಯಿತಿಯ ಒಟ್ಟು 15 ಸ್ಥಾನಗಳಲ್ಲಿ ಕಾಂಗ್ರೆಸ್ 8 ಸ್ಥಾನಗಳ ಸರಳ ಬಹುಮತ ಪಡೆದಿದೆ. ಜೆಡಿಎಸ್ 7, ಬಿಜೆಪಿ, ಕೆಜೆಪಿ ಖಾತೆ ತೆರೆದಿಲ್ಲ.
ಮತದಾರರ ವಿವರ
ಪುರುಷ ಮತದಾರರು - 78,941
ಮಹಿಳಾ ಮತದಾರರು - 74,901
ಒಟ್ಟು ಮತದಾರರು - 1,53,842
ಹಾಲಿ ಶಾಸಕ - ಕೆ. ವೆಂಕಟೇಶ್ (ಕಾಂಗ್ರೆಸ್)
ಸೋತ ಅಭ್ಯರ್ಥಿ - ಕೆ. ಮಹದೇವ (ಜೆಡಿಎಸ್)
ಗೆಲುವಿನ ಅಂತರ 787 ಮತಗಳು
ಜಾತಿವಾರು ಮತದಾರರು : ಒಕ್ಕಲಿಗರು - 40,000, ಕುರುಬರು - 36,000, ಪರಿಶಿಷ್ಟ ಜಾತಿ ಮತ್ತು ಪಂಗಡ - 32,000, ಲಿಂಗಾಯಿತರು - 10,000, ಮುಸ್ಲಿಂ - 12,000, ಇತರೆ - 23,842 ಮತಗಳು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications