ಯಲಬುರ್ಗಾ : ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ

ಭತ್ತದ ಕಣಜ ಎಂದು ಹೆಸರಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಬಿಸಿಲು ಎಷ್ಟು ಸ್ಥಿರವಾಗಿರುತ್ತದೆಯೋ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಅಷ್ಟೇ ಅಸ್ಥಿರವಾಗಿರುತ್ತವೆ. ಇಲ್ಲಿ ಇಂಥೋರೇ ಗೆಲ್ತಾರೆ ಎಂದು ಖಚಿತವಾಗಿ ಹೇಳುವುದು ಅಸಾಧ್ಯ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗಳಿಗೆ ಇದ್ದಷ್ಟೇ ಸಮಪ್ರಮಾಣದ ಅವಕಾಶಗಳು ಹೊಸದಾಗಿ ಹುಟ್ಟಿರುವ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಸಿಗೂ ಇವೆ. ಪಕ್ಷಕ್ಕೆ ದ್ರೋಹ ಬಗೆದು 'ಆಪರೇಷನ್'ಗೊಳಗಾದವರಿಗೆ, ಅಭ್ಯರ್ಥಿಯನ್ನೇ ಮರೆತ ಪಕ್ಷಕ್ಕೆ ಮತದಾರರು ಪಾಠ ಕಲಿಸುವರೆ? ಯಲಬುರ್ಗಾದಲ್ಲಿ ಯಾವ ಜಾತಿಯ ಬೆಂಬಲ ಯಾರಿಗಿದೆ ಎಂಬುದರ ನೋಟ ಇಲ್ಲಿದೆ.

ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಆರಿಸಿ ಬಂದಿದ್ದ ಈಶಣ್ಣ ಗುಳಗಣ್ಣವರ್ ಅನಾರೋಗ್ಯಕ್ಕೆ ತುತ್ತಾಗಿದ್ರೂ ಬಿಜೆಪಿಯವರು ಸೌಜನ್ಯ ತೋರಿಲ್ಲ. ಇದು ಪಕ್ಷಕ್ಕೆ ಹೊಡೆತ ನೀಡುವ ಸಾಧ್ಯತೆ ಇದೆ. ಈಶಣ್ಣ ಗುಳಗಣ್ಣವರ್ ಪುತ್ರ ನವೀನ್ ಗುಳಗಣ್ಣವರ್, ಬಿಎಸ್‌ಆರ್ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ತಂದೆ ಅನಾರೋಗ್ಯದ ಅನುಕಂಪದ ಅಲೆ, ಜೊತೆಗೆ ಬಿಜೆಪಿ ಅಸಹಕಾರ ಧೋರಣೆ ಮುಂದಿಟ್ಟುಕೊಂಡು ಗೆಲ್ಲುವ ಪ್ರಯತ್ನದಲ್ಲಿದ್ದಾರೆ.

2008ರಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಜೆಡಿಎಸ್ ಈ ಭಾಗದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇನ್ನು ಬಿಜೆಪಿಯಿಂದ ಸಂಸದ ಶಿವರಾಮಗೌಡ ಹಾಗೂ ಕೆಜೆಪಿಯಿಂದ ಸಿಎಚ್ ಪೊಲೀಸ್ ಪಾಟೀಲ ಸ್ಪರ್ಧೆ ಮಾಡುತ್ತಿದ್ದರೂ ಕೂಡಾ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ನಡುವೆ ಜಂಗೀಕುಸ್ತಿ ಏರ್ಪಡುವ ಸಾಧ್ಯತೆಯೇ ಹೆಚ್ಚು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+