ಹುಣಸೂರು : ಬಿಜೆಪಿ, ಕೆಜೆಪಿಗೆ ಇಲ್ಲೇನು ಕೆಲಸ?

Hunsur (Mysore) constituency profile
ಹಾಲಿ ಶಾಸಕ - ಮಂಜುನಾಥ್ (ಕಾಂಗ್ರೆಸ್)

ರಾಜಕೀಯ ಮಹತ್ವ : ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ತವರು ರಾಜಕೀಯ ಕಾರ್ಯಕ್ಷೇತ್ರ ಇದು. ಇತ್ತೀಚೆಗಷ್ಟೇ ಬಿಜೆಪಿಯಿಂದ ಜೆಡಿಎಸ್ ಸೇರಿರುವ ಜಿ.ಟಿ ದೇವೇಗೌಡ ಪ್ರತಿನಿಧಿಸಿದ್ದ ಕ್ಷೇತ್ರವೂ ಹೌದು. ಈ ಕ್ಷೇತ್ರ ಬೆಂಗಳೂರು ಮತ್ತು ನಾಗರಹೊಳೆ ಹಾಗು ಕೊಡಗಿಗೆ ಸಂಪರ್ಕ ಕೊಂಡಿಯಾಗಿದೆ. ಸಾಗವಾನಿ ಮರಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಪ್ರಮುಖ ಸ್ಪರ್ಧಿಗಳು : ಕಾಂಗ್ರೆಸ್‍ನಿಂದ ಹಾಲಿ ಶಾಸಕ ಎಚ್.ಪಿ ಮಂಜುನಾಥ್ ಸ್ಪರ್ಧೆ ಖಚಿತ. ಜೆಡಿಎಸ್‍ನಿಂದ ಜಿಟಿಡಿ ಪತ್ನಿ ಸೇರಿ ಹಲವರ ಹೆಸರಿವೆ. ಬಿಜೆಪಿ, ಕೆಜೆಪಿಯಿಂದ ವಿಜಯಶಂಕರ್ ಮಲ್ಲಾಡಿ ಹೆಸರು ಓಡಾಡುತ್ತಿವೆ.

ಗೆಲುವಿನ ಲೆಕ್ಕಾಚಾರ : ಜೆಡಿಎಸ್‍ಗೆ ಬಂದಿರುವ ಜಿಟಿಡಿ, ಸೋಲಿನ ಅನುಕಂಪ ಹಾಗೂ ದೇವೇಗೌಡ ಕುಮಾರಸ್ವಾಮಿ ಬೆಂಬಲದಿಂದ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಎಚ್.ವಿ. ಮಂಜುನಾಥ್ ಶೆಟ್ಟಿ ಸಮುದಾಯಕ್ಕೆ ಸೇರಿದವರಾದ್ರೂ ಕ್ಷೇತ್ರದಲ್ಲಿ ಎಲ್ಲಾ ಜನಾಂಗದ ಓಲೈಕೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್‍ಗೆ ಪ್ಲಸ್ ಪಾಯಿಂಟ್.

ಸ್ಥಳೀಯ ಸಂಸ್ಥೆ ಚುನಾವಣೆ : ಹುಣಸೂರು ಪುರಸಭೆಯ ಒಟ್ಟು 27 ವಾರ್ಡ್‍ಗಳು. ಕಾಂಗ್ರೆಸ್ 15, ಜೆಡಿಎಸ್ 9, ಪಕ್ಷೇತರ 3 ಸ್ಥಾನಗಳಿಸಿದ್ದಾರೆ. ಬಿಜೆಪಿ ಕೆಜೆಪಿ ಖಾತೆ ತೆರೆದಿಲ್ಲ.

ಮತದಾರರ ವಿವರ

ಪುರುಷ ಮತದಾರರು - 99,775

ಮಹಿಳಾ ಮತದಾರರು - 95,477

ಒಟ್ಟು ಮತದಾರರು - 1,95,252

ಹಾಲಿ ಶಾಸಕ - ಎಚ್.ಪಿ ಮಂಜುನಾಥ್ (ಕಾಂಗ್ರೆಸ್)

ಸೋತ ಅಭ್ಯರ್ಥಿ - ಎಸ್. ಚಿಕ್ಕಮಾದು (ಜೆಡಿಎಸ್)

ಗೆಲುವಿನ ಅಂತರ 14,000 ಮತಗಳು

ಜಾತಿವಾರು ಮತದಾರರು : ಒಕ್ಕಲಿಗರು - 40,000, ಎಸ್ಸಿ - 45,000, ಎಸ್.ಟಿ - 27,000, ಕುರುಬರು - 25,000, ಲಿಂಗಾಯಿತರು - 12,000, ಮುಸ್ಲಿಂ - 12,000, ಟ್ರೈಬಲ್ಸ್ - 5,252, ಇತರೆ - 29,000 ಮತಗಳು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+