ಎಚ್.ಡಿ.ಕೋಟೆ : ಚಿಕ್ಕಮಾದು vs ಚಿಕ್ಕಣ್ಣ vs ಸಿದ್ದರಾಜು

ರಾಜಕೀಯ ಮಹತ್ವ : ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ, ಕೇರಳಕ್ಕೆ ತಾಗಿಕೊಂಡಿರುವ ಹಿಂದುಳಿದ ತಾಲೂಕು ಎಚ್.ಡಿ. ಕೋಟೆ (ಹೆಗ್ಗಡೆ ದೇವನ ಕೋಟೆ). ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
ಪ್ರಮುಖ ಸ್ಪರ್ಧಿಗಳು : ಕಾಂಗ್ರೆಸ್‌ನಿಂದ ಹಾಲಿ ಶಾಸಕ ಚಿಕ್ಕಣ್ಣಗೆ ಟಿಕೆಟ್ ನಿಶ್ಚಿತ. ಜೆಡಿಎಸ್‍ನಿಂದ ಚಿಕ್ಕಮಾದು, ಬಿಜೆಪಿಯಿಂದ ಸಿದ್ದರಾಜು ಸ್ಪರ್ಧೆ ಸಂಭವ. ಕೃಷ್ಣಸ್ವಾಮಿ ಕೆಜೆಪಿ ಅಭ್ಯರ್ಥಿ.
ಗೆಲುವಿನ ಅಂಶಗಳು : ಈ ಕ್ಷೇತ್ರದಲ್ಲಿ ದ್ವಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ. ಚಿಕ್ಕಣ್ಣಗೆ ಸಿದ್ದರಾಮಯ್ಯನ ಆರ್ಶೀವಾದ ಇದೆ. ಸಿದ್ದು ವರ್ಚಸ್ಸು ಈ ಕ್ಷೇತ್ರದಲ್ಲಿ ಬಲವಾಗಿದೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವಾಗಲಿದೆ. ಬಿಜೆಪಿ ಸಿದ್ದರಾಜು ಕೂಡ ಉತ್ತಮವಾಗಿ ಸಂಘಟನೆ ಮಾಡಿರೋದು ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆ : ಎಚ್.ಡಿ ಕೋಟೆ ಪಟ್ಟಣ ಪಂಚಾಯಿತಿಯ 13 ಸ್ಥಾನಗಳಲ್ಲಿ ಕಾಂಗ್ರೆಸ್ 2, ಜೆಡಿಎಸ್ 8, ಬಿಜೆಪಿ 1, ಹಾಗೂ ಪಕ್ಷೇತರರು 2 ಸ್ಥಾನಗಳನ್ನು ಪಡೆದಿದ್ದು, ಜೆಡಿಎಸ್‍ಗೆ ಬಹುಮತ ಸಿಕ್ಕಿದೆ.
ಮತದಾರರ ವಿವರ
ಪುರುಷ ಮತದಾರರು - 97,708
ಮಹಿಳಾ ಮತದಾರರು - 94,960
ಒಟ್ಟು ಮತದಾರರು - 1,92,668
ಹಾಲಿ ಶಾಸಕ - ಬೀಚನಹಳ್ಳಿ ಚಿಕ್ಕಣ್ಣ (ಕಾಂಗ್ರೆಸ್)
ಸೋತ ಅಭ್ಯರ್ಥಿ - ಚಿಕ್ಕವೀರನಾಯಕ (ಬಿಜೆಪಿ)
ಗೆಲುವಿನ ಅಂತರ 10,000 ಮತಗಳು
ಜಾತಿವಾರು ಮತದಾರರ : ಎಸ್ಸಿ - 40 ಸಾವಿರ, ಲಿಂಗಾಯಿತರು - 28 ಸಾವಿರ, ಎಸ್ಟಿ - 46 ಸಾವಿರ, ಒಕ್ಕಲಿಗರು - 24 ಸಾವಿರ, ಕುರುಬರು - 20 ಸಾವಿರ, ಮುಸ್ಲಿಂ - 13 ಸಾವಿರ, ಇತರೆ - 21,668 ಮತಗಳು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications