ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಪರಿಚಯ

|
Google Oneindia Kannada News

ರಾಜ್ಯದ ಹೃದಯಭಾಗದಲ್ಲಿರುವ ದಾವಣಗೆರೆ ಜಿಲ್ಲೆ ಕಾಟನ್ ಸಿಟಿ ಎಂದು ಪ್ರಖ್ಯಾತವಾಗಿತ್ತು. ತನ್ನ ಒಡಲಲ್ಲಿ ಅನೇಕ ಶಾಲಾ ಕಾಲೇಜುಗಳನ್ನು ಹೊಂದಿ ಪ್ರಸ್ತುತ ವಿದ್ಯಾನಗರಿ ಎಂಬ ಹೆಸರುಗಳಿಸಿದೆ. ಕರ್ನಾಟಕ ವಾಣಿಜ್ಯ ನಗರಿ ಎಂಬ ಕೀರ್ತಿಯೂ ಜಿಲ್ಲೆಯದು. ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆಯನ್ನು ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ 1997ರಲ್ಲಿ ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯಿಂದ ಕೆಲವು ತಾಲೂಕುಗಳನ್ನು ಸೇರಿಸಿಕೊಂಡು ದಾವಣಗೆರೆ ಜಿಲ್ಲೆಯಾಗಿ ಪರಿವರ್ತಿಸಿದರು.

ದಾವಣಗೆರೆ ಕರ್ನಾಟಕದ ರಾಜಧಾನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನೂ ಕೇವಲ ಜಿಲ್ಲೆಯಾಗಿ ಉಳಿದಿದೆ. ದಾವಣಗೆರೆ ಎಂದರೆ ತಕ್ಷಣ ನೆನಪಿಗೆ ಬರುವುದು ಬೆಣ್ಣೆದೋಸೆ, ಮಂಡಕ್ಕಿ, ದುರ್ಗಾಂಬಿಕ ಜಾತ್ರೆ, ಸೂಳೆಕೆರೆ, ಕಲೆ, ಸಾಹಿತ್ಯ, ರಂಗಭೂಮಿ, ಚಳವಳಿಗಳು. ರಂಗಭೂಮಿ ಕಲಾವಿದೆ ದಿ.ಚಿಂದೋಡಿ ಲೀಲಾ, ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮುಂತಾದವರ ತವರೂರು ದಾವಣಗೆರೆ.

ದಾವಣಗೆರೆ ಜಿಲ್ಲೆಗೆ ತುಂಗ-ಭದ್ರಾ ನದಿಗಳು ಪ್ರಮುಖ ಆಸರೆ. ಜಗಳೂರು ಮತ್ತು ಹರಪನಹಳ್ಳಿ ತಾಲೂಕುಗಳನ್ನು ಹೊರತು ಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಿಗೆ ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುತ್ತಿರುವುದು ತುಂಗ-ಭದ್ರಾ ನದಿ. ಹರಿಹರ, ಹೊನ್ನಾಳಿ, ಚನ್ನಗಿರಿ, ದಾವಣಗೆರೆ ಉತ್ತರ ಮತ್ತು ದಕ್ಷಿಣ ತಾಲೂಕುಗಳಲ್ಲಿ ಚಾನೆಲ್ ಮೂಲಕ ಹರಿದು ಬರುವ ಭದ್ರಾ ನದಿ ನೀರು ಉಪಯೋಗಿಸಿಕೊಂಡು ವ್ಯವಸಾಯ ಮಾಡಲಾಗುತ್ತದೆ.

Davanagere

ರಾಜಕೀಯವಾಗಿಯೂ ಜಿಲ್ಲೆ ಬಹಳ ಪ್ರಸಿದ್ಧಿ ಪಡೆದಿದೆ. ರಾಜಕೀಯ ವಲಯದಲ್ಲಿ ವಿರುದ್ಧ ಗುಣಧರ್ಮಗಳ ನಾಯಕರಾಗಿದ್ದ ದಿ.ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮತ್ತು ಎಂ.ಪಿ.ಪ್ರಕಾಶ್ ಇದೇ ಜಿಲ್ಲೆಯವರು. ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ, ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಎಂ.ಪಿ.ರೇಣುಕಾಚಾರ್ಯ ಮತ್ತು ಎಸ್.ವಿ.ರವೀಂದ್ರನಾಥ್ ದಾವಣಗೆರೆ ಜಿಲ್ಲೆಯ ನಾಯಕರು.

ಜಿಲ್ಲೆಯ ಸಮಸ್ಯೆಗಳು : ದಾವಣಗೆರೆ ಉತ್ತರ ಮತ್ತು ದಕ್ಷಿಣ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ, ತಮ್ಮ ಜಮೀನನ್ನು ಸರ್ಕಾರ ಕೈಗಾರಿಕಾ ಉದ್ದೇಶಗಳಿಗಾಗಿ ವಶಪಡಿಸಿಕೊಳ್ಳಬಹುದು ಎಂಬ ಆತಂಕ ರೈತರಲ್ಲಿದೆ. ಜಗಳೂರು ಮತ್ತು ಹರಪನಹಳ್ಳಿ ತಾಲೂಕುಗಳು ಇಂದಿಗೂ ಸಾರಿಗೆ ಸೌಲಭ್ಯ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿವೆ. ಮಂಡಕ್ಕಿ ಭಟ್ಟಿಗಳಲ್ಲಿ ಮಕ್ಕಳು ಕೆಲಸ ಮಾಡುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.

ದಾವಣಗೆರೆಯು ಒಟ್ಟು ಏಳು ತಾಲೂಕುಗಳು ಮತ್ತು ಒಂದು ಮೀಸಲು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದೆ. ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ ಬಿಜೆಪಿ ಪಕ್ಷದವರು. 2008ರ ಚುನಾವಣೆವರೆಗೂ ಹೆಚ್ಚು ಕೈ' ಹಿಡಿತದಲ್ಲಿದ್ದ ಜಿಲ್ಲೆಯಲ್ಲಿ ಸದ್ಯ ಕಮಲದ್ದೇ ಅಧಿಪತ್ಯ.

ಜಿಲ್ಲೆಯ ವಿಸ್ತೀರ್ಣ :5,975.99 ಚ.ಕಿ.ಮೀಗಳು
ಜಾತಿಗಳು : ಲಿಂಗಾಯತ, ಬ್ರಾಹ್ಮಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕುರುಬರು, ಲಂಬಾಣಿಗಳು
ಒಟ್ಟು ಜನಸಂಖ್ಯೆ : 17,90,952
ಪ್ರಮುಖ ಬೆಳೆಗಳು : ಭತ್ತ, ಅಡಿಕೆ, ಕಬ್ಬು, ಮೆಕ್ಕೆಜೋಳ, ಶೇಂಗಾ
ಭಾಷೆಗಳು : ಕನ್ನಡ, ಇಂಗ್ಲಿಶ್, ಹಿಂದಿ, ತೆಲಗು, ಲಂಬಾಣಿ

ರಾಜಕೀಯ ಬಲಾಬಲ...
ದಾವಣಗೆರೆ ಉತ್ತರ : ಹಾಲಿ ಶಾಸಕ ಎಸ್.ವಿ.ರವೀಂದ್ರನಾಥ್ (ಬಿಜೆಪಿ). ಜೆಡಿಎಸ್ ನ ಬಿ.ಎಂ.ಸತೀಶ್ ವಿರುದ್ಧ 1,05,098 ಮತಗಳಿಂದ ಜಯಗಳಿಸಿದ್ದಾರೆ.

ಹೊನ್ನಾಳಿ : ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಶಾಸಕರು. 1,28,997 ಮತಗಳನ್ನು ಪಡೆದು, ಕಾಂಗ್ರೆಸ್ ನ ಡಿ.ಜಿ.ಶಾಂತಗೌಡ ಅವರನ್ನು ಸೋಲಿಸಿದ್ದಾರೆ.

ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ ಪ್ರಸ್ತುತ ಶಾಸಕರು. 1,00,415ಮತಗಳನ್ನು ಪಡೆದು, ಬಿಜೆಪಿ ಅಭ್ಯರ್ಥಿ ಯಶವಂತರಾವ್ ಜಾಧವ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಜಗಳೂರು : ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ವಿ.ರಾಮಚಂದ್ರ ಬಿಜೆಪಿಗೆ ಸೇರಿ, ಉಪ ಚುನಾವಣೆಯಲ್ಲಿ 1,05,086 ಮತಗಳನ್ನು ಪಡೆದು ಎಚ್.ಪಿ.ಪ್ರಕಾಶ್ ವಿರುದ್ಧ ಜಯಗಳಿಸಿದರು.

ಚನ್ನಗಿರಿ : ಬಿಜೆಪಿಯ ಮಾಡಾಳು ವಿರೂಪಾಕ್ಷಪ್ಪ ಇಲ್ಲಿನ ಶಾಸಕರು. 1,13,596 ಮತಗಳನ್ನು ಪಡೆದು ಕಾಂಗ್ರೆಸ್ ನ ವಡ್ನಾಳ್ ರಾಜಣ್ಣ ಅವರನ್ನು ಸೋಲಿಸಿದ್ದಾರೆ. ಸದ್ಯ ಕೆಜೆಪಿ ಸೇರಿದ್ದಾರೆ.

ಹರಿಹರ : ಬಿಜೆಪಿಯ ಬಿ.ಪಿ.ಹರೀಶ್ 1,25,311ಮತಗಳನ್ನು ಪಡೆದು ಜೆಡಿಎಸ್ ನ ಎಚ್.ಶಿವಪ್ಪ ವಿರುದ್ಧ ಜಯಗಳಿಸಿದ್ದಾರೆ. ಪ್ರಸ್ತುತ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಜೆಪಿಯಲ್ಲಿದ್ದಾರೆ.

ಹರಪನಹಳ್ಳಿ : ಬಿಜೆಪಿಯ ಜಿ.ಕರುಣಾಕರ ರೆಡ್ಡಿ 1,23,133 ಮತಗಳನ್ನು ಪಡೆದು ಎಂ.ಪಿ.ಪ್ರಕಾಶ್ ವಿರುದ್ಧ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಮಾಯಕೊಂಡ ಮೀಸಲು ಕ್ಷೇತ್ರ : ಬಿಜೆಪಿಯ ಎಂ.ಬಸವರಾಜ್ ನಾಯ್ಕ್ ಶಾಸಕ. 1,12,105 ಮತಗಳನ್ನು ಪಡೆದು ಡಾ.ವೈ.ರಾಮಪ್ಪ ವಿರುದ್ಧ ಜಯಗಳಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election 2013. Davanagere district constituencies profile. Davanagere district has Seven constituencies. Davanagere north, Davanagere south, Harihara, Honalli, Channagiri, Harapanahalli, Jagalur and Mayakonda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X