ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡಬಿದಿರೆ, ಸುಳ್ಯ, ಬೆಳ್ತಂಗಡಿಯಲ್ಲಿ ಕಾದಾಟ

By Prasad
|
Google Oneindia Kannada News

Dakshina Kannada district latest update
ಮೂಡಬಿದಿರೆ ಕ್ಷೇತ್ರ : ಈ ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರೋದು ಬಿಲ್ಲವ ಮತದಾರರು. ಎರಡನೇ ಸ್ಥಾನದಲ್ಲಿ ಕ್ರೈಸ್ತ ಸಮುದಾಯದವರು ಹಾಗೂ ಮುಸ್ಲಿಂ ಮತದಾರರಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್ ತನ್ನ ಅಧಿಪತ್ಯವನ್ನು ಸಾಧಿಸಿದೆ. ಕಳೆದ 2 ಬಾರಿ ಕಾಂಗ್ರೆಸ್ ನ ಕೆ.ಅಭಯಚಂದ್ರ ಜೈನ್ ಅವರು ಶಾಸಕರಾಗಿದ್ದಾರೆ. ಬಿಜೆಪಿಯ ಜಗದೀಶ ಅಧಿಕಾರಿ ಎರಡು ಭಾರಿಯೂ ಸೋಲು ಕಂಡಿದ್ದಾರೆ. ಈ ಬಾರಿ ಮತ್ತೆ ಕಾಂಗ್ರೆಸ್ ಅಭಯಚಂದ್ರ ಜೈನ್ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಉಮಾಕಾಂತ್ ಕೋಟ್ಯಾನ್ ಅವರು ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಅಭಯ ಚಂದ್ರ ಜೈನ್ ಅವರ ಮೇಲಿರುವ ಅಭಿಮಾನ, ಅಭಿವೃದ್ದಿಯೇ ಅವರ ಗೆಲುವಿಗೆ ಕಾರಣವಾಗಿದೆ. ಹೀಗಾಗಿ ಈ ಬಾರಿಯೂ ಅವರೇ ಗೆಲ್ಲುತ್ತಾರೆ ಅನ್ನೋದು ಆ ಕ್ಷೇತ್ರದ ಮತದಾರರ ಸ್ಪಷ್ಟ ಅಭಿಪ್ರಾಯ.

ಸುಳ್ಯ ಕ್ಷೇತ್ರ : ಈ ಕ್ಷೇತ್ರದಲ್ಲೂ ಒಕ್ಕಲಿಗರು ಹೆಚ್ಚಿನ ಮತದಾರರು. ಎರಡನೇ ಸ್ಥಾನದಲ್ಲಿ ಮುಸ್ಲಿಮರಿದ್ದರೂ ಇಲ್ಲಿ ಗೆಲುವು ಮಾತ್ರ ಬಿಜೆಪಿಯದ್ದೇ. ಬಿಜೆಪಿ ಕಳೆದ ಮೂರು ಬಾರಿ ದಲಿತ ಸಮುದಾಯದ ಎಸ್ ಅಂಗಾರ ಅವರನ್ನು ಕಣಕ್ಕಿಳಿಸಿ ಮೂರು ಬಾರಿಯೂ ಶಾಸಕರನ್ನಾಗಿಸಿದೆ. ಬಿಜೆಪಿಯ ಬಗ್ಗೆ ಒಲವಿರುವ ಒಕ್ಕಲಿಗರು, ಬಂಟ್ಸ್, ಬಿಲ್ಲವರು ಬಿಜೆಪಿಯನ್ನೇ ಹರಸುತ್ತಾರೆ. ಹೀಗಾಗಿ ಈ ಬಾರಿಯೂ ಬಿಜೆಪಿ ಅದೇ ಅಭ್ಯರ್ಥಿ ಎಸ್ ಅಂಗಾರ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಅವರಿಗೆ ಎದುರಾಳಿಯಾಗಿದ್ದ ಡಾ.ಸಿ.ರಘು ಅವರು ಈ ಬಾರಿಯೂ ಕಾಂಗ್ರೇಸ್‌ನಿಂದ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕಿಂತಲೂ ಹಿಂದುತ್ವದ ರಾಜಕಾರಣವೇ ನಡೆಯುತ್ತದೆ. ಹೀಗಾಗಿಯೇ ಬಿಜೆಪಿ ಈ ಕ್ಷೇತ್ರದಲ್ಲಿ ಪ್ರತೀ ಬಾರಿಯೂ ಜಯಭೇರಿ ಬಾರಿಸುತ್ತಿದೆ.

ಬೆಳ್ತಂಗಡಿ ಕ್ಷೇತ್ರ : ಬಿಲ್ಲವರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಲ್ಲವ ಮತದಾರರೇ ನಿರ್ಣಾಯಕ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಿ ಬಿಲ್ಲವ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತಿದೆ. ಇಲ್ಲಿ ಇನ್ನೊಂದು ವಿಶೇಷತೆ ಏನಂದರೆ, ಎರಡೂ ರಾಷ್ಟ್ರೀಯ ಪಕ್ಷಗಳು ಸಹೋದರನ್ನು ಕಳೆದ ಹಲವು ಬಾರಿ ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ವಸಂತ ಬಂಗೇರ ಸ್ಪರ್ಧಿಸಿದರೆ ಬಿಜೆಪಿಯಿಂದ ಅವರ ತಮ್ಮ ಪ್ರಭಾಕರ ಬಂಗೇರ ಸ್ಪರ್ಧಿಸುತ್ತಾರೆ. ಒಂದು ಬಾರಿ ಅಣ್ಣ ಇನ್ನೊಂದು ಬಾರಿ ತಮ್ಮ ಬೇರೆ ಬೇರೆ ಪಕ್ಷಗಳಿಂದ ಜಯಬೇರಿ ಬಾರಿಸುತ್ತಿದ್ದರು. ಕಳೆದ ಬಾರಿ ಬಿಜೆಪಿಯ ಪ್ರಭಾಕರ ಬಂಗೇರವರನ್ನು ಸೋಲಿಸಿದ ಅಣ್ಣ ಕಾಂಗ್ರೆಸ್ ವಸಂತ ಬಂಗೇರ ಶಾಸಕರಾಗಿದ್ದರು. ಇದೇ ಲೆಕ್ಕಾಚಾರದಲ್ಲಿ ಈ ಬಾರಿಯೂ ಕಾಂಗ್ರೆಸ್ ವಸಂತ ಬಂಗೇರ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ ಈ ಬಾರಿ ರಾಜನ್ ಜಿ. ಗೌಡ ಅವರು ಕಣಕ್ಕಿಳಿಯಲಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಯಾರೇ ಗೆಲವು ಸಾಧಿಸಿದರು ಅದು ಬಿಲ್ಲವ ಮತದಿಂದಲೇ ಅನ್ನೋದು ಮಹತ್ವದ ಅಂಶ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Dakshina Kannada district latest update. Bunts, Billavas and Muslim caste voters play a big role in electing the representative in all the constituencies in Dakshina Kannada. BJP and Congress are trying to woo the voters holding caste card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X