• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳೂರು ನಗರದಲ್ಲಿ ಯುಟಿ ಖಾದರ್ ಖದರ್

By Prasad
|

ಮಂಗಳೂರು ಕ್ಷೇತ್ರ : ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿರುವ ಕಾಂಗ್ರೆಸ್ ಕಳೆದ ಹಲವು ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಆದರೆ ಬಿಜೆಪಿಗೆ ಮುಸ್ಲಿಂ ಅಭ್ಯರ್ಥಿಗಳಿಲ್ಲದ ಕಾರಣ ಹಿಂದೂ ಅಭ್ಯರ್ಥಿಗಳನ್ನು ನಿಲ್ಲಿಸಿ ಕಳೆದ ಎರಡು ಬಾರಿಯೂ ಸೋಲು ಕಂಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯು.ಟಿ.ಖಾದರ್ ಅವರು ಬಿಜೆಪಿಯ ಪದ್ಮನಾಭ ಕೊಟ್ಟಾರಿಯವರನ್ನು ಸೋಲಿಸಿ ಇಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಮತದಾರರು ಮಣೆ ಹಾಕುತ್ತಾರೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಇನ್ನುಳಿದಂತೆ ಈ ಕ್ಷೇತ್ರದಲ್ಲಿ ಬಿಲ್ಲವರು ಇದ್ದರೂ ಬಿಜೆಪಿಗೆ ಹೆಚ್ಚಿನ ಲಾಭವಾಗೋದಿಲ್ಲ. ಈ ಬಾರಿಯೂ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿ ಯು.ಟಿ.ಖಾದರ್ ಅವರನ್ನೇ ಕಣಕ್ಕಿಳಿಸಿದೆ.

ಬಿಜೆಪಿ ಅಭ್ಯರ್ಥಿಯ ಭಾರೀ ಗೊಂದಲದಲ್ಲಿದ್ದು ಮಲೆಯಾಳಿ ಬಿಲ್ಲವರಾಗಿರುವ ಚಂದ್ರಹಾಸ್ ಉಳ್ಳಾಲ್ ಅವರನ್ನು ಕಣಕ್ಕಿಳಿಸಿದೆ. ಪ್ರಸ್ತುತ ಶಾಸಕ ಯು.ಟಿ.ಖಾದರ್ ಅವರ ಬಗ್ಗೆ ಯಾವುದೇ ಬ್ಲಾಕ್ ಮಾರ್ಕ್‌ಗಳಿಲ್ಲದೆ ಒಳ್ಳೆಯ ಅಭಿವೃದ್ದಿ ಮಾಡಿದಾತ ಎಂದು ಗುರುತಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಅತ್ಯಧಿಕ ಪ್ರಶ್ನೆ ಕೇಳಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಯು.ಟಿ.ಖಾದರ್‌ಗೆ ಮುಸ್ಲಿಂಮರ ಜೊತೆಗೆ ಕ್ರೈಸ್ತ ಹಾಗೂ ಮೊಗವೀರರ ಮತವೂ ಸಿಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಮತ್ತೆ ಯು.ಟಿ.ಖಾದರ್ ಜಯಭೇರಿ ಬಾರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಮಂಗಳೂರು ದಕ್ಷಿಣ ಕ್ಷೇತ್ರ : ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಲ್ಲವ ಸಮುದಾಯದವರಿದ್ದಾರೆ. ಜೊತೆಗೆ ಜಿಎಸ್‌ಬಿ(ಕೊಂಕಣಿ) ಮತದಾರರು ಹೆಚ್ಚಿರೋದರಿಂದ ಪ್ರತೀಬಾರಿಯೂ ಇಲ್ಲಿ ಬಿಜೆಪಿಯೇ ಗೆಲುವು ಸಾಧಿಸುತ್ತಿದೆ. ಇದರ ಪರಿಣಾಮವಾಗಿ ಕಳೆದ 4 ಬಾರಿ ಸತತವಾಗಿ ಜಿಎಸ್‌ಬಿ ಸಮುದಾಯಕ್ಕೆ ಸೇರಿದ ಬಿಜೆಪಿಯ ಎನ್.ಯೋಗೀಶ್ ಭಟ್ ಅವರೇ ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಇದೇ ಧೈರ್ಯದಿಂದ ಬಿಜೆಪಿ ಯೋಗೀಶ್ ಭಟ್ ಗೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ. ಬಿಲ್ಲವರು 50 ಸಾವಿರ ಹಾಗೂ ಕೊಂಕಣಿ ಮತದಾರರು ಅದರ ಅರ್ಧದಷ್ಟು ಅಂದರೆ 25 ಸಾವಿರದಷ್ಟು ಮತದಾರರು ಇರೋದರಿಂದಲೇ ಯೋಗೀಶ್ ಭಟ್ ಪದೇ ಪದೇ ಅದೇ ಕ್ಷೇತ್ರದಿಂದ ಆಯ್ಕೆಗೊಳ್ಳುತ್ತಿದ್ದಾರೆ.

ಈ ಕ್ಷೇತ್ರದಲ್ಲಿ 22 ಸಾವಿರ ಮುಸ್ಲಿಂ ಮತದಾರರು ಕ್ರೈಸ್ತರು, ದಲಿತರು, ಲಿಂಗಾಯತರು ಇರೋದರಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸಿದರೆ ಕಾಂಗ್ರೆಸ್ ಗೆಲ್ಲುತ್ತದೆ ಅನ್ನುವ ಲೆಕ್ಕಾಚಾರದಿಂದ ಪ್ರತೀ ಬಾರಿಯೂ ಅಲ್ಪಸಂಖ್ಯಾತರಿಗೇ ಕಾಂಗ್ರೆಸ್ ಟಿಕೆಟ್ ನೀಡುತ್ತಿದೆ. ಕಳೆದ ಬಾರಿ ಐವನ್ ಡಿಸೋಜಾಗೆ ಟಿಕೆಟ್ ನೀಡಿದ್ದು ಕಾಂಗ್ರೆಸ್ ಸೋಲುಂಡಿತ್ತು. ಈ ಬಾರಿ ಕ್ರೈಸ್ತ ಸಮುದಾಯದವರಾದ ಜೆ.ಆರ್.ಲೋಬೋ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದ್ದು, ಅವರ ಗೆಲುವು ಕಷ್ಟಕರವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ನಡುವೆ ಈ ಕ್ಷೇತ್ರದಲ್ಲಿ ಜೆಡಿಎಸ್, ಸಿಪಿಐಎಂ ಪಕ್ಷವೂ ಸ್ಪರ್ಧಿಸಲಿದ್ದು ಇದು ಕಾಂಗ್ರೆಸ್ ನ ಹಿನ್ನಡೆಗೆ ಕಾರಣವಾಗಲಿದೆ.

ಬಂಟ್ವಾಳ ಕ್ಷೇತ್ರ : ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಲ್ಲವ ಸಮುದಾಯದವರೇ ಇರೋದು. ಎರಡನೇ ಸ್ಥಾನದಲ್ಲಿ ಮುಸ್ಲಿಂ ಮತದಾರರು ಇದ್ದಾರೆ. ಹೀಗಾಗಿ ಈ ಕ್ಷೇತ್ರ ಒಂದು ಬಾರಿ ಕಾಂಗ್ರೆಸ್ ಇನ್ನೊಂದು ಬಾರಿ ಬಿಜೆಪಿಯ ಪಾಲಾಗುತ್ತಿತ್ತು. ಕಾಂಗ್ರೆಸ್‌ನ ಬಿ.ರಮಾನಾಥ ರೈ ಈ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಸಚಿವರಾಗಿದ್ದರು. ನಂತರದ ಚುನಾವಣೆಯಲ್ಲಿ ಬಿಜೆಪಿಯ ನಾಗರಾಜ ಶೆಟ್ಟಿ ಜಯಭೇರಿ ಬಾರಿಸಿ ಸಚಿವರಾಗಿದ್ದರು. ಆದರೆ ಅವರು ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಮತ್ತೆ ರಮಾನಾಥ ರೈ ಅವರನ್ನೇ ಮತದಾರರು ಆರಿಸಿದರು. ಬಿಲ್ಲವರೇ ಹೆಚ್ಚಾಗಿದ್ದರೂ ಬಂಟ ಸಮುದಾಯದವರನ್ನು ಇಲ್ಲಿ ಆಯ್ಕೆ ಮಾಡುತ್ತಿದ್ದಾರೆ. ಅದೂ ಕೂಡಾ ಪಕ್ಷ ಹಾಗೂ ಅಭ್ಯರ್ಥಿಯನ್ನು ನೋಡಿಯೇ ಮತ ಹಾಕುತ್ತಾರೆ. ಈ ಬಾರಿ ಕಾಂಗ್ರೆಸ್ ರಮಾನಾಥ ರೈ ಅವರಿಗೆ ಟಿಕೆಟ್ ನೀಡಿದ್ದು, ಬಿಜೆಪಿ ಇನ್ನೊರ್ವ ಬಂಟ ಸಮುದಾಯದ ಯುವನಾಯಕ ರಾಜೇಶ್ ನಾಯಕ್‌ರನ್ನು ಕಣಕ್ಕಿಳಿಸಿದೆ. ಇದರೊಂದಿಗೆ ಈ ಬಾರಿ ಜೆಡಿಎಸ್ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದು ಉದ್ಯಮಿ ಸೌಂದರ್ಯ ರಮೇಶ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dakshina Kannada district latest update. Bunts, Billavas and Muslim caste voters play a big role in electing the representative in all the constituencies in Dakshina Kannada. BJP and Congress are trying to woo the voters holding caste card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more