ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕನ್ನಡ : ಬಂಟ ಬಿಲ್ಲವರ ಒಲವು ಎತ್ತಕಡೆ?

By Prasad
|
Google Oneindia Kannada News

Dakshina Kannada district latest update
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಬಡಿದಾಟ. ಕೆಲ ಕ್ಷೇತ್ರಗಳಲ್ಲಿ ಬಂಟ ಮತ್ತು ಬಿಲ್ಲವ ಜನಾಂಗದವರ ಮೇಲುಗೈಯಾಗಿದ್ದರೆ ಕೆಲವೆಡೆ ಮುಸ್ಲಿಂ ಮತದಾರರು ನಿರ್ಣಾಯಕವಾಗುತ್ತಾರೆ. ಆಯಾ ಕ್ಷೇತ್ರಗಳಲ್ಲಿನ ಜಾತಿಪ್ರಾಬಲ್ಯ ಮತ್ತು ಅವರ ಒಲವು ಎತ್ತಕಡೆಯಿದೆ ಎಂದು ನೋಡಿಕೊಂಡು ಅಭ್ಯರ್ಥಿಗಳನ್ನು ಎಲ್ಲ ಪಕ್ಷಗಳು ಕಣಕ್ಕಿಳಿಸಿತ್ತಿವೆ. ಈ ಬಾರಿ ಜೆಡಿಎಸ್, ಕೆಜೆಪಿ ಮತ್ತು ಸಿಪಿಐಎಂ ಪಕ್ಷಗಳೂ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದರಿಂದ ಮತವಿಭಜನೆಯಾಗಿ ತಮಗೆ ಗೆಲುವು ಸಿಗಬಹುದಾ ಅಥವಾ ಸೋಲಾಗಬಹುದಾ ಎಂಬ ಲೆಕ್ಕಾಚಾರದಲ್ಲಿ ಎಲ್ಲ ಪಕ್ಷಗಳು ತೊಡಗಿವೆ.

ಮಂಗಳೂರು ಉತ್ತರ : ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯ ಬಿಲ್ಲವ ಮತದಾರರೇ ಇರೋದು. ಹೀಗಾಗಿ ಈ ಕೇತ್ರ ಬಿಜೆಪಿಗೆ ವರದಾನವಾಗಲಿದೆ. ಹಿಂದೂ ಸಂಘಟನೆಗಳಲ್ಲಿ ಬಿಲ್ಲವ ಯುವಕರೇ ಹೆಚ್ಚಾಗಿ ಗುರುತಿಸಿಕೊಂಡಿರೋದರಿಂದ ಪ್ರತೀ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಸುಮಾರು 50 ಸಾವಿರ ಬಿಲ್ಲವ ಮತದಾರರೇ ಈ ಕ್ಷೇತ್ರದಲ್ಲಿದ್ದಾರೆ. ಇದರೊಂದಿಗೆ 2ನೇ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಮತದಾರರಿದ್ದಾರೆ. ಇದು ಕಾಂಗ್ರೆಸ್‌ಗೆ ಸಹಕಾರಿಯಾಗುವ ಸಾಧ್ಯತೆಯಿದೆ.

ಕಳೆದ ಬಾರಿ ಈ ಕ್ಷೇತ್ರದಲ್ಲಿ ಕೃಷ್ಣ ಜೆ ಪಾಲೇಮಾರ್ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಗೊಂಡು ಸಚಿವರಾಗಿಯೂ ಅಧಿಕಾರ ನಡೆಸಿದ್ದರು. ಆದರೆ ವಿಧಾನಸೌಧದಲ್ಲಿ ಬ್ಲೂಫಿಲಂ ವೀಕ್ಷಿಸಿ ಸಚಿವ ಪದವಿಯನ್ನು ಕಳೆದುಕೊಂಡಿದ್ದರು. ಈ ಕ್ಷೇತ್ರದಲ್ಲಿ ಅವರ ವರ್ಚಸ್ಸು ಈ ಬಾರಿ ಕಡಿಮೆಯಾಗಿದೆ. ಹೀಗಿದ್ದೂ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುವ ನಿರೀಕ್ಷೆಯಲ್ಲಿದೆ. ಇಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ವಿಜಯ್ ಕುಮಾರ್ ಶೆಟ್ಟಿಗೆ ಟಿಕೆಟ್ ದೊರೆತರೆ, ಕೃಷ್ಣ ಪಾಲೇಮಾರ್ ಸೋಲುವ ಸಾಧ್ಯತೆ ಇದೆ. ಆದರೆ ಈ ಬಾರಿ ಕಾಂಗ್ರೆಸ್ ಟಿಕೆಟ್ ದೊರೆತಿರುವುದು ಮೋಯಿನ್ ಬಾವಾ ಅವರಿಗೆ. ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ವರದಾನವಾದರೆ ಬಿಲ್ಲವ ಹಾಗೂ ಬಂಟ್ಸ್ ಮೊಗವೀರರು ಬಿಜೆಪಿಗೆ ವರದಾನವಾಗಲಿದೆ.

ಪುತ್ತೂರು : ಈ ಕ್ಷೇತ್ರದಲ್ಲಿ ಒಕ್ಕಲಿಗರೇ(ಗೌಡ) ಹೆಚ್ಚಿನ ಸಂಖ್ಯೆಯ ಮತದಾರರು. ಹೀಗಾಗಿ ಇಲ್ಲಿ ಬಿಜೆಪಿಯ ಬಗ್ಗೆ ಹೆಚ್ಚಿನ ಒಲವು ಇರೋದು. ಜೊತೆಗೆ ಈ ಕ್ಷೇತ್ರ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರದ್ದು. ಹೀಗಾಗಿ ಕಳೆದ ಬಾರಿ ಪರಿಚಯವೇ ಇಲ್ಲದ ಮಲ್ಲಿಕಾ ಪ್ರಸಾದ್ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕಿಯಾಗಿದ್ದರು. ಕಾಂಗ್ರೆಸ್‌ನ ಯುವ ನಾಯಕ ದಿವಂಗತ ಬೊಂಡಾಲ ಜಗನ್ನಾಥ್ ಶೆಟ್ಟಿ ಇಲ್ಲಿ ಸೋಲು ಕಂಡಿದ್ದರು. ಇಲ್ಲಿ ಬಿಜೆಪಿಯದ್ದೇ ಪ್ರಭಾವ ಇದ್ದು ಅಲ್ಪಸಂಖ್ಯಾತರು ಹಾಗೂ ಬಿಲ್ಲವ ಬಂಟ್ಸ್ ಕಡಿಮೆ ಸಂಖ್ಯೆಯಲಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಬೇಕೆಂದು ನಿರ್ಧರಿಸುವ ಕಾಂಗ್ರೆಸ್, ಈ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕಿಯಾಗಿದ್ದು ಬಿಜೆಪಿಯಿಂದ ಮುನಿಸಿಕೊಂಡು ಹೊರಬಂದಿರುವ ಶಕುಂತಳಾ ಶೆಟ್ಟಿಯವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದೆ.

ಕಾಂಗ್ರೆಸ್ ಮತದ ಜೊತೆಗೆ ಬಂಟ್ಸ್ ಬಿಲ್ಲವರ ಮತ ಶಕುಂತಳಾಶೆಟ್ಟಿಯ ಕಡೆ ಬೀಳುವ ಸಾಧ್ಯತೆ ಅಧಿಕವಾಗಿದೆ. ಇನ್ನೊಂದೆಡೆ ಬಿಜೆಪಿಯೂ ಈ ಬಾರಿ ಒಳ್ಳೆಯ ಅಭ್ಯರ್ಥಿಯನ್ನು ರೆಡಿ ಮಾಡಿದೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾವಂದಗೌಡ ಅವರ ಹತ್ತಿರದ ಸಂಬಂದಿ ಸಂಜೀವ ಮಠಂದೂರು ಅವರನ್ನು ಕಣಕ್ಕಿಳಿಸಿದೆ. ಡಿ.ವಿ.ಎಸ್ ಅವರ ಪ್ರಭಾವದಿಂದ ಮತ್ತೆ ಈ ಕ್ಷೇತ್ರ ಬಿಜೆಪಿಯ ಪಾಲಾಗಬಹುದು. ಇನ್ನೊಂದೆಡೆಯಲ್ಲಿ ಬಿಜೆಪಿಯ ಶಾಸಕಿಯಾಗಿ ಪ್ರಸಿದ್ದಿಯಾಗಿದ್ದ ಶಕುಂತಳಾ ಶೆಟ್ಟಿ ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರೋದರಿದ ಅವರ ವರ್ಚಸ್ಸು ವರ್ಕ್‌ಓಟ್ ಆಗುತ್ತಾ ಕಾದುನೋಡಬೇಕಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X