ಸ್ಲಿಮ್‌ ಆಗಿ ಕಾಣ್ಬೇಕು ಅಂತ ವರ್ಕೌಟ್‌ ಮಾಡೋರು ಗಮನಿಸಿ; ಮಕ್ಕಳಾಗಬೇಕು ಅಂದ್ರೆ ಈ ಒಂದು ತಪ್ಪು ಮಾಡ್ಬೇಡಿ ಎಂದ ತಾಪ್ಸಿ ಪನ್ನು

ಸಿನಿಮಾ ತಾರೆಯರು ಅಂದಾಕ್ಷಣ ಸದಾ ಫಿಟ್ ಆಗಿ, ಕಟ್ಟುಮಸ್ತಾದ ದೇಹದೊಂದಿಗೆ ಮಿಂಚಬೇಕು ಎಂಬುದು ಸಾರ್ವಜನಿಕ ವಲಯದಲ್ಲಿರುವ ಸಾಮಾನ್ಯ ನಂಬಿಕೆ. ಆದರೆ, ಇಂತಹ ಪರ್ಫೆಕ್ಟ್ ಫಿಗರ್ ಅಥವಾ 'ಫ್ಲಾಟ್ ಬೆಲ್ಲಿ' ಹೊಂದುವ ಸಾಮಾಜಿಕ ಒತ್ತಡಕ್ಕೆ ಬಿದ್ದು, ತಮಗೆ ತಾವೇ ಹೇಗೆ ತೊಂದರೆ ಮಾಡಿಕೊಂಡಿದ್ದರು ಎಂಬ ಸತ್ಯವನ್ನು ಬಹುಭಾಷಾ ನಟಿ ತಾಪ್ಸಿ ಪನ್ನು (Taapsee Pannu) ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಸುಂದರ ಚಿತ್ರಗಳಿಗಾಗಿ ಮಹಿಳೆಯರು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ವಿನಂತಿಸಿರುವ ತಾಪ್ಸಿ, ಹೆಣ್ಣುಮಕ್ಕಳ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಕೊಬ್ಬು ಇರುವುದು ಸಂಪೂರ್ಣ ಆರೋಗ್ಯಕರ ಎಂದು ಹೇಳಿದ್ದಾರೆ.

ಸುಂದರ ಹೊಟ್ಟೆಗಾಗಿ ದೇಹಕ್ಕೆ ಹಿಂಸೆ

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ತಾಪ್ಸಿ, "ನಾನು ಬೆಳೆಯುವಾಗ ತುಂಬಾ ಫಿಟ್ ಆಗಿದ್ದೆ. ಆದರೆ ನನ್ನ ಹೊಟ್ಟೆಯ ಕೆಳಭಾಗದಲ್ಲಿದ್ದ ಕೊಬ್ಬು ಯಾಕೆ ಕರಗುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ. ಅದಕ್ಕಾಗಿ ನಾನು ಜಿಮ್‌ನಲ್ಲಿ ತೀರ ಅತಿಯಾಗಿ ವರ್ಕೌಟ್ ಮಾಡಲು ಶುರುಮಾಡಿದೆ. ನನ್ನ ದೇಹದ ಸಾಮರ್ಥ್ಯ ಮೀರಿ ನಾನು ಶ್ರಮವಹಿಸಿದೆ. ಆದರೆ, ನಾವು ಯಾವಾಗ ದೇಹಕ್ಕೆ ಅತಿಯಾದ ಒತ್ತಡ ನೀಡುತ್ತೇವೆಯೋ, ಆಗ ನಮ್ಮ ಮೆದುಳು ಶರೀರವನ್ನು ರಕ್ಷಿಸಲು ಅಲಾರಾಂ ಬಾರಿಸುತ್ತದೆ" ಎಂದಿದ್ದಾರೆ ತಾಪ್ಸಿ.

Taapsee Pannu

ಅತಿಯಾದ ವ್ಯಾಯಾಮ ಉಂಟುಮಾಡುವ ಅಡ್ಡಪರಿಣಾಮದ ಬಗ್ಗೆ ವಿವರಿಸಿದ ಅವರು, "ನಾವು ಅತಿಯಾಗಿ ವರ್ಕೌಟ್ ಮಾಡಿದಾಗ ದೇಹವು ತೂಕ ಕಳೆದುಕೊಳ್ಳುವ ಬದಲು, ನೀರನ್ನು ಹಿಡಿದಿಟ್ಟುಕೊಳ್ಳಲು ಆರಂಭಿಸುತ್ತದೆ. ಇದರಿಂದಾಗಿ ಹೊಟ್ಟೆಯ ಕೆಳಭಾಗದ ಕೊಬ್ಬು ಕರಗದೇ ಹಾಗೇ ಉಳಿಯುತ್ತದೆ ಮತ್ತು ಹೆಚ್ಚಾಗುತ್ತಾ ಹೋಗುತ್ತದೆ. ಇದನ್ನು ನಾನು ತುಂಬಾ ತಡವಾಗಿ ಅರ್ಥಮಾಡಿಕೊಂಡೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ಕೊಟ್ಟ ನಟಿ ಮೇಘನಾ ರಾಜ್‌: ಹೊಸ ಅವತಾರದಲ್ಲಿ ಬರ್ತಿದ್ದಾರೆ 'ರಾಜಾಹುಲಿ' ಬೆಡಗಿ
ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ಕೊಟ್ಟ ನಟಿ ಮೇಘನಾ ರಾಜ್‌: ಹೊಸ ಅವತಾರದಲ್ಲಿ ಬರ್ತಿದ್ದಾರೆ 'ರಾಜಾಹುಲಿ' ಬೆಡಗಿ

ಹೋಲಿಕೆಯ ಜಾಲಕ್ಕೆ ಬೀಳಬೇಡಿ

ಪ್ರತಿಯೊಬ್ಬ ಮಹಿಳೆಯ ಶಾರೀರಿಕ ರಚನೆಯೇ ವಿಭಿನ್ನವಾಗಿರುತ್ತದೆ. ಹೀಗಿರುವಾಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಬ್ಬರ ದೇಹದ ಜೊತೆ ನಮ್ಮನ್ನು ಹೋಲಿಸಿಕೊಳ್ಳುವುದು ತಪ್ಪು ಎಂದಿರುವ ತಾಪ್ಸಿ, "ನನ್ನ ಶರೀರವನ್ನು ನಾನು ತುಂಬಾ ಹಿಂಸಿಸಿದ ನಂತರವೇ ನನಗೆ ಈ ಸತ್ಯ ಅರ್ಥವಾಗಿದ್ದು. ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ದಿನದ 24 ಗಂಟೆಯೂ ನಮ್ಮ ಹೊಟ್ಟೆ ಒಂದೇ ತರ ಇರಲು ಸಾಧ್ಯವಿಲ್ಲ. ಕೆಲ ದಿನ ಫ್ಲಾಟ್ ಆಗಿ ಕಂಡರೆ, ಇನ್ನು ಕೆಲ ದಿನ ಉಬ್ಬಿದಂತೆ ಕಾಣುತ್ತದೆ, ಇದನ್ನು ನಾವು ಒಪ್ಪಿಕೊಳ್ಳಬೇಕು" ಎಂದಿದ್ದಾರೆ.

ಸಂತಾನೋತ್ಪತ್ತಿ ಆರೋಗ್ಯಕ್ಕೆ ಕೊಬ್ಬು ಅಗತ್ಯ

ತಮ್ಮ ನ್ಯೂಟ್ರಿಷನಿಸ್ಟ್ ಮುನ್ಮುನ್ ಗನೇರಿವಾಲ್ ನೀಡಿದ ವೈಜ್ಞಾನಿಕ ಸಲಹೆಯನ್ನು ಹಂಚಿಕೊಂಡಿರುವ ತಾಪ್ಸಿ, ಮಹಿಳೆಯರ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಕೊಬ್ಬು ಇರುವುದು ಒಂದು ದೋಷವಲ್ಲ, ಬದಲಿಗೆ ಅದು ದೇಹದ ರಕ್ಷಣಾ ಕವಚ ಎಂದು ಹೇಳಿದ್ದಾರೆ. "ಹೆಣ್ಣುಮಕ್ಕಳ ಹೊಟ್ಟೆಯ ಕೆಳಭಾಗದಲ್ಲೇ ಅವರ ಮುಖ್ಯ ಸಂತಾನೋತ್ಪತ್ತಿ ಅಂಗಗಳು ಇರುತ್ತವೆ. ಪ್ರಕೃತಿದತ್ತವಾಗಿ ಅವುಗಳ ರಕ್ಷಣೆಗೆ ಈ ಕೊಬ್ಬಿನ ಅವಶ್ಯಕತೆ ಇರುತ್ತದೆ. ಆದ್ದರಿಂದ, ಇನ್‌ಸ್ಟಾಗ್ರಾಮ್‌ನಲ್ಲಿ ಪರ್ಫೆಕ್ಟ್ ಫೋಟೋಗಳನ್ನು ಹಾಕಬೇಕು ಎಂಬ ಒಂದೇ ಕಾರಣಕ್ಕಾಗಿ ನಿಮ್ಮ ದೇಹಕ್ಕೆ ಹಿಂಸೆ ಕೊಡಬೇಡಿ. ಹೊಟ್ಟೆಯ ಭಾಗದಲ್ಲಿ ಸಣ್ಣದಾಗಿ ಉಬ್ಬಿರುವುದು ಸಂಪೂರ್ಣ ನೈಸರ್ಗಿಕ ಮತ್ತು ಆರೋಗ್ಯಕರ" ಎಂದು ಅವರು ಮಹಿಳೆಯರಿಗೆ ಸಲಹೆ ನೀಡಿದ್ದಾರೆ. ಯಾವುದೇ ಸೌಂದರ್ಯದ ಮಾನದಂಡಗಳು ನಮ್ಮ ಜೀವ ಮತ್ತು ಆರೋಗ್ಯಕ್ಕಿಂತ ದೊಡ್ಡದಲ್ಲ ಎಂಬ ಸಂದೇಶ ನೀಡಿರುವ ತಾಪ್ಸಿ ಪನ್ನು ಅವರ ಈ ಮಾತುಗಳು ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಮೆಚ್ಚುಗೆ ಗಳಿಸುತ್ತಿವೆ.

ತಾಪ್ಸಿ ತಮ್ಮ ಸಿನಿಮಾ ಜರ್ನಿ ಆರಂಭಿಸಿದ್ದು ಸೌತ್ ಇಂಡಸ್ಟ್ರಿಯಿಂದ. 2010ರಲ್ಲಿ ಕೆ. ರಾಘವೇಂದ್ರ ರಾವ್ ನಿರ್ದೇಶನದ ಜುಮ್ಮಂದಿ ನಾದಂ ಎಂಬ ತೆಲುಗು ಚಿತ್ರದ ಮೂಲಕ ಬೆಳ್ಳಿಪರದೆಗೆ ಬಂದರು. ನಂತರ ತಮಿಳಿನ ಖ್ಯಾತ ಚಿತ್ರ 'ಆಡುಕಳಂ' (ಧನುಷ್ ನಟನೆಯ) ಮೂಲಕ ಭಾರಿ ಯಶಸ್ಸು ಗಳಿಸಿದರು. ನಂತರ ಬಾಲಿವುಡ್‌ಗೆ ಕಾಲಿಟ್ಟರಾದರೂ, ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು 2016ರ ಬಿಗ್ ಬಿ ಅಮಿತಾಭ್ ಬಚ್ಚನ್ ನಟನೆಯ 'ಪಿಂಕ್' ಸಿನಿಮಾ. ಈ ಚಿತ್ರದಲ್ಲಿನ ಅವರ ಅಭಿನಯ ವಿಮರ್ಶಕರ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+