ಜಯನಗರ ವಿಧಾನಸಭಾ ಕ್ಷೇತ್ರದ ಪರಿಚಯ

* ಸಾಧನೆಗಳು: 2008ರ ಚುನಾವಣೆಗೂ ಮುನ್ನ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾಗಿದ್ದರು. ಆರ್ ಎಸ್ಎಸ್ ನಿಷ್ಠೆಯಿಂದಾಗಿ ವಿಧಾನಸಭೆ ಪ್ರವೇಶಕ್ಕೆ ಟಿಕೆಟ್ ಪಡೆದರು. ಮಳೆ ಕೊಯ್ಲು, ಪಾರ್ಕುಗಳ ಅಭಿವೃದ್ಧಿ, ಶಾಲಾ ಕಟ್ಟಡ, ಸಮುದಾಯ ಭವನಗಳ ನಿರ್ಮಾಣ. ತ್ಯಾಜ್ಯ/ಕಸ ಸಮಸ್ಯೆ ಅಷ್ಟಾಗಿ ಇಲ್ಲ. ಕಾರ್ಪೊರೇಟರುಗಳನ್ನು ಸರಿಯಾಗಿ ಬಳಸಿಕೊಂಡು ಕ್ಷೇತ್ರವನ್ನು ಮತ್ತಷ್ಟು ಪ್ರಗತಿಪರವನ್ನಾಗಿಸಿದ್ದಾರೆ.
ಆಡಳಿತ ಯಂತ್ರದ ಸದ್ಬಕೆ ಮಾಡಿಕೊಂಡಿರುವ ಶ್ರೇಯಸ್ಸು ಇದೆ. ಹಿಂದಿನ ಶಾಸಕರ ಹಾದಿಯಲ್ಲೇ ಸಾಗಿದ್ದು, ಅವರ ಮಾದರಿಯಲ್ಲೇ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರದ ಜನರೂ ಪ್ರಗತಿಪರರಾಗಿದ್ದು, ಹೆಚ್ಚು ಸಮಸ್ಯೆಗಳಿಗೆ ಅವಕಾಶವೇ ಇಲ್ಲ.
* ಸಮಸ್ಯೆಗಳು: ಗುರಪ್ಪನಪಾಳ್ಯ ಮತ್ತಿತರ ಕೆಲ ಭಾಗಗಳಲ್ಲಿ ಅಭಿವೃದ್ಧಿಯಾಗಿಲ್ಲ. ಜನರಿಗೆ ಇನ್ನಷ್ಟು ಹತ್ತಿರವಾಗಬೇಕಿದೆ.
* ವಾರ್ಡ್: ಪಟ್ಟಾಭಿನಗರ, ಭೈರಸಂದ್ರ, ಜಯನಗರ ಈಸ್ಟ್, ಗುರಪ್ಪನ ಪಾಳ್ಯ, ಜೆಪಿ ನಗರ, ಸಾರಕ್ಕಿ, ಶಾಕಾಂಬರಿ ನಗರ
* ಮತದಾರರ ಸಂಖ್ಯೆ: 1,89,232. ಕಳೆದ ಬಾರಿ ವೋಟ್ ಮಾಡಿದವರು ಶೇ. 47ರಷ್ಟು ಮಂದಿ. ಅದರಲ್ಲಿ ಬಿಎನ್ ವಿಜಯಕುಮಾರ್ ಮತ ಗಳಿಕೆ ಪ್ರಮಾಣ ಶೇ. 49.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications