ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಪರಿಚಯ

* ಶಾಂತಿನಗರದಿಂದ ಮೊದಲ ಬಾರಿಗೆ ಶಾಸಕರಾಗಿದ್ದ ರಘು, ಕ್ಷೇತ್ರ ಮರುವಿಂಗಡಣೆಯಿಂದಾಗಿ 2008ರಲ್ಲಿ ಸಿವಿ ರಾಮನ್ ನಗರದಿಂದ ಸ್ಪರ್ಧಿಸಿ, ಗೆದ್ದರು.
* ಸಾಧನೆಗಳು: ಪುರಾತನ ಕಲ್ಯಾಣ ಪುನರುಜ್ಜೀವನಗೊಳಿಸಲಾಗಿದೆ. ಐಸೊಲೇಶನ್ ಆಸ್ಪತ್ರೆ ಪಕ್ಕದಲ್ಲೇ 250 ಹಾಸಿಗೆಯ ಸಿವಿ ರಾಮನ್ ಆಸ್ಪತ್ರೆ ನಿರ್ಮಿಸಲಾಗಿದೆ. ಕಾವೇರಿ ನೀರು ಕ್ಷೇತ್ರದ ಹೊಸ ಪ್ರದೇಶಗಳಲ್ಲೂ ಹರಿದಿದೆ.
* ಸಮಸ್ಯೆಗಳು: ಈ ಕ್ಷೇತ್ರದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ರೇಷನ್ ಕಾರ್ಡ್ ಕೊಡಿಸಿಲ್ಲ. ಒಳಚರಂಡಿ ಕಾರ್ಯ ಪೂರ್ಣಗೊಂಡಿಲ್ಲ. ಬಯಪ್ಪನಹಳ್ಳಿ ಕೊಳೆಗೇರಿ ಸಮಸ್ಯೆ ಬೃಹದಾಕಾರವಾಗಿದೆ.
* ವಾರ್ಡ್: ಬೆನ್ನಿಗಾನಹಳ್ಳಿ, ಸಿವಿ ರಾಮನ್ ನಗರ, ನ್ಯೂ ತಿಪ್ಪಸಂದ್ರ, ಸರ್ವಜ್ಞ ನಗರ, ಹೊಯ್ಸಳ ನಗರ, ಜೀವನ್ ಭೀಮಾ ನಗರ, ಕೋನೇನ ಅಗ್ರಹಾರ
* ಮತದಾರರ ಸಂಖ್ಯೆ: 2,19,663. ಕಳೆದ ಬಾರಿ ವೋಟ್ ಮಾಡಿದವರು ಶೇ. 41ರಷ್ಟು ಮಂದಿ. ಅದರಲ್ಲಿ ಎಸ್ ರಘು ಮತ ಗಳಿಕೆ ಪ್ರಮಾಣ ಶೇ. 53.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications