ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದ ಪರಿಚಯ

* ಸಾಧನೆಗಳು: 2ನೆಯ ಬಾರಿಗೆ ಚಾಮರಾಜ ಪೇಟೆಯಿಂದ ಗೆದ್ದಿರುವ ಜೆಡಿಎಸ್ ಶಾಸಕ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಅಲ್ಪಸಂಖ್ಯಾತ ಖಾತೆ ಸಚಿವರಾಗಿದ್ದರು.
* ಸಮಸ್ಯೆಗಳು: ಶಾಸಕ ಜಮೀರ್ ಅಹಮದ್ ಜನರಿಗೆ ಸಿಗುವುದೇ ವಿರಳ. 10 ವರ್ಷಗಳಿಂದ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ. ಹಳೆ ಕಲ್ಲು ಹಾಕಿ ಹೊಸ ಬಿಲ್ ಪಡೆದುಕೊಂಡಿದ್ದೇ ಹೆಚ್ಚು. ಶಾಸಕರ ಕಚೇರಿ ಇದ್ದರೂ ಜಮೀರ್ ಅಹಮದ್ ಅತ್ತ ತಲೆಯೇ ಹಾಕುವುದಿಲ್ಲ.
ಗೋರಿಪಾಳ್ಯ ಮತ್ತು ಆಜಾದ್ ನಗರಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಸಾಧನೆ ನಗಣ್ಯವಾಗಿ, ಸಮಸ್ಯೆಗಳೇ ಹೆಚ್ಚಾಗಿ ರಾರಾಜಿಸುತ್ತಿವೆ. ಶಾಸಕ ಜಮೀರ್ ಅಹಮದ್ ಪಟ್ಟು ಸಡಿಲ ಆಗಿದೆ.
* ವಾರ್ಡ್: ಪಾದರಾಯನಪುರ, ಜಗಜೀವನರಾಮ್ ನಗರ, ರಾಯಪುರಂ, ಚಲವಾದಿ ಪಾಳ್ಯ, ಕೆಆರ್ ಮಾರ್ಕೆಟ್, ಚಾಮರಾಜ ಪೇಟೆ, ಅಜಾದ್ ನಗರ
* ಮತದಾರರ ಸಂಖ್ಯೆ: 2,14,503. ಕಳೆದ ಬಾರಿ ವೋಟ್ ಮಾಡಿದವರು ಶೇ. 42ರಷ್ಟು ಮಂದಿ. ಅದರಲ್ಲಿ ಬಿ ಜಡ್ ಜಮೀರ್ ಅಹಮದ್ ಖಾನ್ ಮತ ಗಳಿಕೆ ಪ್ರಮಾಣ ಶೇ. 49.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications