ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರ ಅಭ್ಯರ್ಥಿಗಳ ಪಟ್ಟಿ: ಯಾರು ರಾಜ

By Rajendra
|
Google Oneindia Kannada News

ಕಾಂಗ್ರೆಸ್ ನ ಭದ್ರಕೋಟೆ. ಆದರೆ ಈಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಯಾರು ಮೇಲುಗೈ ಸಾಧಿಸಲಿದ್ದಾರೆ ಎಂದು ಹೇಳುವುದು ಕಷ್ಟ. ಕರ್ನಾಟಕ ಜನತಾ ಪಕ್ಷವೂ ಈಗ ಎಂಟ್ರಿಯಾಗಿರುವುದರಿಂದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಎದುರಾಗಿದೆ.

ವೀರಶೈವರು, ಪರಿಶಿಷ್ಟರು ಸಮಬಲವಿರುವ ಕ್ಷೇತ್ರ ರಾಜಕೀಯವಾಗಿ ಕಾಂಗ್ರೆಸ್ ಪಕ್ಷಪಾತಿ.

ಮೊದಲಿಗೆ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಮಾಟ, ಮಂತ್ರ, ತಂತ್ರಗಳಿಗೆ ಹೆಸರುವಾಸಿಯಾದ ಕೊಳ್ಳೆಗಾಲ ಇರುವುದು ಇದೇ ಜಿಲ್ಲೆಯಲ್ಲಿ ಎಂಬುದು ವಿಶೇಷ. ಚಾಮರಾಜನಗರ ಜಿಲ್ಲೆಯಲ್ಲಿ ಧಾರ್ಮಿಕ ಪ್ರಾಮುಖ್ಯತೆಯ ಸಾಕಷ್ಟು ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧವಾದದ್ದು ಮಲೆಮಹದೇಶ್ವರ ಬೆಟ್ಟ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

chamarajanagar district

ಈ ಜಿಲ್ಲೆಯಲ್ಲಿ ನಯನ ಮನೋಹರ ಬಿಳಿಗಿರಿರಂಗನ ಬೆಟ್ಟ , ಮಲೆಮಹದೇಶ್ವರ ಬೆಟ್ಟ ಮತ್ತು ಹಿಮವದ್ಗೋಪಾಲಸ್ವಾಮಿಬೆಟ್ಟ. ಬಂಡಿಪುರ ರಾಷ್ಟ್ರೀಯ ಉದ್ಯಾನವು ಜಿಲ್ಲೆಯ ದಕ್ಷಿಣಭಾಗದಲ್ಲಿದೆ. ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯಗಳಿದ್ದು ಇಲ್ಲಿನ ಪ್ರಮುಖ ವನ್ಯಜೀವಿಗಳು ಆನೆ, ಹುಲಿ, ಕರಡಿ, ಜಿಂಕೆ, ಇತ್ಯಾದಿ. ಇಲ್ಲಿನ ಕಾಡುಗಳು, ಮುಖ್ಯವಾಗಿ ಮಲೆಮಹದೇಶ್ವರ ಬೆಟ್ಟ, ಸುಪ್ರಸಿದ್ಧ ಕಾಡುಗಳ್ಳ ವೀರಪ್ಪನ್ ನ ಅಡಗುದಾಣಗಳಾಗಿದ್ದವು.

ಫ್ಲ್ಯಾಶ್ ಬ್ಯಾಕ್: 2008ರಲ್ಲಿ ಗೆದ್ದ ಅಭ್ಯರ್ಥಿಗಳು
ಚಾಮರಾಜನಗರ: ಸಿ ಪುಟ್ಟರಂಗಶೆಟ್ಟಿ (ಕಾಂಗ್ರೆಸ್) 42017 ಮತಗಳು
ಗುಂಡ್ಲುಪೇಟೆ: ಎಚ್ ಎಸ್ ಮಹದೇವ ಪ್ರಸಾದ್ (ಕಾಂಗ್ರೆಸ್) 64824 ಮತಗಳು
ಹನೂರು: ಆರ್ ನರೇಂದ್ರ (ಕಾಂಗ್ರೆಸ್) 59523 ಮತಗಳು
ಕೊಳ್ಳೆಗಾಲ: ಆರ್ ಧ್ರುವನಾರಾಯಣ (ಕಾಂಗ್ರೆಸ್) 37384 ಮತಗಳು

2013 ಕರ್ನಾಟಕ ವಿಧಾನಸಭೆ ಚುನಾವಣೆ ಚಾಮರಾಜನಗರ ಜಿಲ್ಲೆ ಅಭ್ಯರ್ಥಿಗಳು:

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಕೆಜೆಪಿ ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ
221 ಹನೂರು ಆರ್ ನರೇಂದ್ರ
ಬಿ.ಕೆ.ಶಿವಕುಮಾರ್ ಪರಿಮಳ ನಾಗಪ್ಪ ಪೊನ್ನಾಚಿ ಮಹದೇವಸ್ವಾಮಿ ಬೀರೇಶ
222 ಕೊಳ್ಳೇಗಾಲ ಎಸ್ ಜಯಣ್ಣ
ಜಿ.ಎನ್.ನಂಜುಂಡಸ್ವಾಮಿ ಪಂಚಾಕ್ಷರಿ ಬಾಲರಾಜು ಚಂದ್ರಶೇಖರ್ -
-
223 ಚಾಮರಾಜನಗರ ಸಿ.ಪುಟ್ಟರಂಗಶೆಟ್ಟಿ ಎಸ್ ಸೋಮನಾಯಕ್ ಸಣ್ಣಮರಿಸೆಟ್ಟಿ ಮಲಿಕಾರ್ಜುನ -
224 ಗುಂಡ್ಲುಪೇಟೆ ಎಚ್ ಎಸ್ ಮಹದೇವ ಪ್ರಸಾದ್
ಎಚ್ ಜಿ ಮಲ್ಲಿಕಾರ್ಜುನ ಸ್ವಾಮಿ ಮುದ್ದುಮಲ್ಲು ಬಿಪಿ ಸಿಎಸ್ ನಿರಂಜನ್ ಸುರೇಶ
English summary
Karnataka assembly Election 2013 : Chamarajanagar District Assembly Constituency all party candidates list is here. Chamarajanagar district consists 4 Assembly constituencies: chamarajanagar, Gundlupet, Kollegal and Hanur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X