ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಜಿಲ್ಲೆಯಲ್ಲಿ ಯಾರಿಗೆ ಸಿಗಲಿದೆ ಕರದಂಟು?

By Prasad
|
Google Oneindia Kannada News

Belgaum official candidates list
ಬೆಳಗಾವಿ, ಏ. 23 : ಬೆಂಗಳೂರು ನಗರವನ್ನು ಹೊರತುಪಡಿಸಿದರೆ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿ. ಜಿಲ್ಲೆಯಲ್ಲಿ ಒಟ್ಟು 18 ಕ್ಷೇತ್ರಗಳಿದ್ದು, ಮರಾಠಿಗರ ಪ್ರಾಬಲ್ಯದ ನಡುವೆಯೇ 14ನೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗಾವಿ ಸಿದ್ದವಾಗಿದೆ. ಎಲ್ಲ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಹೆಸರುಗಳನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ.

ಕಬ್ಬಿನ ಬೆಳೆಗೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹದಿನೆಂಟರಲ್ಲಿ ಬಿಜೆಪಿ ಹನ್ನೊಂದು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದರೆ, ಕಾಂಗ್ರೆಸ್ ಉಳಿದ ಏಳು ಕ್ಷೇತ್ರಗಳಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿತ್ತು. ಈ ಬಾರಿ ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಹದಿನೈದು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ಕ್ಲಿಪಿಂಗ್ ನೋಡಿ ಸಿಕ್ಕುಬಿದ್ದಿದ್ದ ಲಕ್ಷ್ಮಣ ಸವದಿ ಶೈಕ್ಷಣಿಕವಾಗಿ ಮುಂದಿರುವ ಅಥಣಿ ಕ್ಷೇತ್ರದಿಂದ, ಬೆಳಗಾವಿ ಜಿಲ್ಲೆಯವರು ಮುಖ್ಯಮಂತ್ರಿಯಾಗಬೇಕು ಎಂದು ಮಹತ್ವಾಕಾಂಕ್ಷೆ ಹೊಂದಿರುವ ಉಮೇಶ್ ಕತ್ತಿ ಬಿಜೆಪಿಯಿಂದ, ಯಡಿಯೂರಪ್ಪನವರ ವಿರುದ್ಧ ತೊಡೆತಟ್ಟಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಿಂದ, ಸಿನೆಮಾ ಕ್ಷೇತ್ರದಲ್ಲಿ ಗೆದ್ದಿರುವ ಆನಂದ ಅಪ್ಪುಗೋಳ್ ಅವರು ಕಿತ್ತೂರು ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. [ಫಲಿತಾಂಶ: ಗೆದ್ದವರು, ಸೋತವರ ವಿವರ]

ವೇಣುಗ್ರಾಮ (ಬಾಂಬೂ ಗ್ರಾಮ) ಎಂದು ಒಂದಾನೊಂದು ಕಾಲದಲ್ಲಿ ಪ್ರಚಲಿತವಿದ್ದ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವೇ ಮತ್ತೆ ಕೊಳಲು ಬಾರಿಸುವುದಾ, ಅಥವಾ ಕಾಂಗ್ರೆಸ್ ಬಿಜೆಪಿಯ ಬಸವಣ್ಣಿ ಬ್ಯಾಂಡ್ ಬಾರಿಸುವುದಾ ಕಾದು ನೋಡಬೇಕು.

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ
1 ನಿಪ್ಪಾಣಿ ಶಶಿಕಲಾ ಜೊಲ್ಲೆ
ಕಾಕಾಸಾಹೇಬ್ ಪಿ. ಪಾಟೀಲ ಲಕ್ಕನಗೌಡ ಪಾಟೀಲ ನಿಯಾಜ್ ಗೌಸ್ ಪಠಾಣ್ ಸುಂದರ್ ಬಿ ಪಾಟೀಲ (ಬಿಎಸ್ಆರ್)
2 ಚಿಕ್ಕೋಡಿ ಸಂಗಪ್ಪಗೊಳ್ ಬಿ. ರುದ್ರಪ್ಪ ಪ್ರಕಾಶ್ ಬಾಬಣ್ಣ ಹುಕ್ಕೇರಿ ಅಣ್ಣಪ್ಪ ಮಗದುಮ್
ಸೋಮೇಶ್ ಪಾಟೀಲ
ಸಿದ್ದಪ್ಪ ಹಿಟ್ನಾಳ್ (ಬಿಎಸ್ಆರ್)
3 ಅಥಣಿ ಲಕ್ಷ್ಮಣ ಸವದಿ ಮಹೇಶ್ ಈರನಗೌಡ ಕಮಟಳ್ಳಿ
ಸದಾಶಿವ ಭೂಟಾಳೆ ಸಂಗನಗೌಡ ಪಾಟೀಲ ಸಿಕಂದರ್ ರಾವಸಾಬ್ ಮುಲ್ಲಾ (ಬಿಎಸ್ಆರ್)
4 ಕಾಗವಾಡ ಭರಮಗೌಡ ಎಚ್ ಕಾಗೆ ಕಿರಣ್ ಕುಮಾರ್ ಪಾಟೀಲ ಶ್ರೀಮಂತ ಪಾಟೀಲ ಅಜೀತ್ ಭರಮಾ ಜೌಗುಲೆ ಬಿ ದಿವಾಕರ್ (ಬಿಎಸ್ಆರ್)
5 ಕುಡಚಿ
(ಎಸ್ ಸಿ)
ಮಹೇಂದ್ರ ತಮ್ಮಣ್ಣನವರ್
ಶಾಮ ಭೀಮ ಘಾಟ್ಗೆ ಶಾಂತಾರಾಂ ಸಣ್ಣಕ್ಕಿ ಪರಶುರಾಮ್ ಒಡ್ಡರ್ ಪಿ ರಾಜೀವ್ (ಬಿಎಸ್ಆರ್)
6 ರಾಯಭಾಗ
(ಎಸ್ ಸಿ)
ಐಹೊಳೆ ದುರ್ಯೋಧನ ಸುಕುಮಾರ್ ಕಿರಣಗಿ
ಬಾಬು ಶಂಕರ್ ಬಾಗೇವಾಡಿ
ಬಾಳಾ ಸಾಹೇಬ್ ಒಡ್ಡರ್
ಪಾರೀಶ ಶಂಕರ ಸಿಂಘೆ (ಬಿಎಸ್ಆರ್)
7 ಹುಕ್ಕೇರಿ ಉಮೇಶ್ ಕತ್ತಿ
ರವಿ ಬಸವರಾಜ ಕರಾಳೆ
ಬಸವರಾಜ ಮಟಗಾರ
ನಿಂಗಪ್ಪ ಬಾರಿಗಿಡದ
ವಿರೂಪಾಕ್ಷಿ ಮರೆಣ್ಣವರ್
8 ಅರಭಾವಿ ಬಾಲಚಂದ್ರ ಜಾರಕಿಹೊಳಿ
ರಾಮಪ್ಪ ಕರಿಯಪ್ಪ ಉಟಗಿ
ಜಿಕೆ ಹಿತ್ತಣಗಿ
ಸುರೇಶ್ ಲಾತೂರು
ಬಸವರಾಜ ಪಾಟೀಲ (ಬಿಎಸ್ಆರ್)
9 ಗೋಕಾಕ್ ವಾಸುದೇವ ಸೌತೆಕಾಯಿ
ರಮೇಶ್ ಜಾರಕಿಹೊಳಿ
ಅಶೋಕ್ ಪೂಜಾರಿ
ಉಮೇಶ್ ಬಿ ನಿರ್ವಾಣಿ
ಬಸವಣ್ಣೆಪ್ಪ ಕಂಬಾರ (ಬಿಎಸ್ಆರ್)
ಭೀಮಶಿ ಜಾರಕಿಹೊಳಿ (ಪಕ್ಷೇತರ)
10 ಯಮಕನಮರಡಿ
(ಎಸ್ ಟಿ)
ಮಾರುತಿ ಮಲ್ಲಪ್ಪ ಅಷ್ಟಗಿ
ಸತೀಶ್ ಜಾರಕಿಹೊಳಿ
ಎಸ್ಎಸ್ ನಾಯ್ಕ್
ಡಾ. ವೈ.ಬಿ ನಾಯಕ
***
11 ಬೆಳಗಾವಿ ಉತ್ತರ ಕಿರಣ್ ಜಾಧವ್
ಫಿರೋಜ್ ನೂರುದ್ದಿನ್ ಸೇಠ್
ಧರ್ಮರಾಜ್
ಎಸ್.ಸಿ ಮಾಳಗಿ
ಮೊಹ್ಸೀನ್ ಖಾನ್
12 ಬೆಳಗಾವಿ ದಕ್ಷಿಣ ಅಭಯ ಪಾಟೀಲ
ಅನೀಲ ಮೋಹನರಾವ್ ಪೋತ್ದಾರ
ಬಸವರಾಜ ಜವಳಿ
ಡಾ. ಸಿದ್ದಪ್ಪ ದೊಡ್ಡಮನಿ
ರಮೇಶ್ ಕುಡಚಿ (ಬಿಎಸ್ಆರ್)
13 ಬೆಳಗಾವಿ ಗ್ರಾಮಾಂತರ ಸಂಜಯ ಪಾಟೀಲ
ಲಕ್ಷ್ಮೀರವೀಂದ್ರ ಹೆಬ್ಬಾಳಕರ್
ಅಶೋಕ್ ಗೋವೆಕರ್
ಸುನಂದಾ ಪಾಟೀಲ
ರಾಮಚಂದ್ರ ಚವ್ಹಾಣ (ಬಿಎಸ್ಆರ್)
ಆನಂದಗಡ್ಡ ದೇವರಮಠ(ಪ)
14 ಖಾನಾಪುರ ಪ್ರಹ್ಲಾದ ರೇಮಾನಿ
ರಫೀಕ ಖಾನಾಪುರಿ
ನಸೀರ ಭಗವಾನ್
ಬಾಬುರಾವ್ ದೇಸಾಯಿ
ಅಂಜಲಿ ನಿಂಬಾಳಕರ್(ಪ)
15 ಕಿತ್ತೂರು ಸುರೇಶ್ ಮಾರಿಹಾಳ
ಡಿಬಿ ಇನಾಂದಾರ
ಆನಂದ ಅಪ್ಪುಗೋಳ್
ಬಿಸಿ ಪಾಟೀಲ
ಅಶೋಕ ಕಂಬಿ (ಬಿಎಸ್ಆರ್)
16 ಬೈಲಹೊಂಗಲ ಜಗದೀಶ ಮೆಟಗುಡ್ಡ
ಬಸವರಾಜ ಕೌಜಲಗಿ
ಶಂಕರ ಮಾಡಲಗಿ
ವಿಶ್ವನಾಥ ಪಾಟೀಲ
***
17 ಸವದತ್ತಿ ಯಲ್ಲಮ್ಮ ವಿಶ್ವನಾಥ ಮಾಮನಿ (ಆನಂದ)
ರವೀಂದ್ರ ಬಿ. ಎಲಿಗಾರ
ಡಿಬಿ ನಾಯ್ಕ್
ರಾಜಣ್ಣ ಮಾಮನಿ
ಹನುಮಂತಪ್ಪ ಕಲ್ಲೂರು (ಬಿಎಸ್ಆರ್)
18 ರಾಮದುರ್ಗ ಮಹದೇವಪ್ಪ ಯಾದವಾಡ
ಅಶೋಕ್ ಮಹದೇವಪ್ಪ ಪಟ್ಟಣ
ಎಫ್.ಐ ಪಾಟೀಲ
ಪಂಚಗಟ್ಟಿ ಮಠ
ರಮೇಶ ಹಳ್ಳಿ (ಬಿಎಸ್ಆರ್)
ಅರವಿಂದ ದಳವಾಯಿ(ಪ)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
List of official candidates of all major parties contesting for assembly election to be held on May 5, from Belgaum district. The district has 17 constituencies. BJP had the upper hand in the previous election. Now, battle lines are drawn. Which party will snatch more seats? Be on the tip of your seat to know the result on May 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X