ವಿಜಯಪುರ ಕ್ಷೇತ್ರದಲ್ಲಿ ವಿಜಯದ ಮಾಲೆ ಯಾರ ಕೊರಳಿಗೆ?

Posted By:
Subscribe to Oneindia Kannada

ಹತ್ತು ಹಲವು ಐತಿಹಾಸಿಕ ತಾಣಗಳನ್ನೂ, ಸ್ಮಾರಕಗಳನ್ನೂ ಹೊಂದಿರುವ ವಿಜಯಪುರ ಕರ್ನಾಟಕದ ಒಂದು ಜಿಲ್ಲೆ. ಇಲ್ಲಿನ ವಿಜಯಪುರ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಂ ಮತಗಳೇ ನಿರ್ಣಾಯಕ.

ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರ ಎಂಬ ಕೀರ್ತಿಗೆ ವಿಜಯಪುರ ಪಾತ್ರವಾಗಿತ್ತು. ಸದ್ಯಕ್ಕೆ ಇದು ಕರ್ನಾಟಕದ ಒಂಬತ್ತನೇ ಅತಿದೊಡ್ಡ ನಗರ. ಬಹುಮನಿ ಸುಲ್ತಾನ ಆದಿಲ್ ಶಾಹಿ, ಮೊಘಲ್ ಹೀಗೆ ಹಲವು ರಾಜರುಗಳಿಂದ ಆಳಿಸಿಕೊಂಡ ವಿಜಯಪುರ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳನ್ನು ಪರಿಚಯಿಸಿದೆ.

ಬಬಲೇಶ್ವರ ಕ್ಷೇತ್ರ: ಐತಿಹಾಸಿಕ ಸ್ಥಳದಲ್ಲಿ ಯಶಸ್ಸು ಯಾರಪಾಲಿಗೆ?

ಐತಿಹಾಸಿಕ ಪ್ರಸಿದ್ಧಿ ಪಡೆದ ಈ ನಗರಕ್ಕೆ ಪ್ರವಾಸೋದ್ಯಮದೊಂದಿಗೆ ಕೃಷಿಯೇ ಆದಾಯದ ಮೂಲ. ನೇಕಾರಿಕೆಯನ್ನೂ ಕೆಲವೆಡೆ ಕಾಣಬಹುದು. ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ವಿಜಯಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಮುಂತಾದ ಬೆಳೆಗಳನ್ನು ಇಲ್ಲಿ ಬೆಳೆದು, ಪರರಾಜ್ಯ ಹಾಗೂ ಪರದೇಶಗಳಿಗೂ ರಫ್ತು ಮಾಡಲಾಗುತ್ತದೆ.

ಪ್ರವಾಸೋದ್ಯಮದ ದೃಷ್ಟಿಯಿಂದ ನೋಡಿದರೆ ವಿಜಯಪುರದ ಕೋಟೆ ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ.

Karnataka Assembly Election 2018: Vijayapura(Bijapur) Constituency Profile

ಕೃಷ್ಣಾ ಮತ್ತು ಭೀಮಾ ನದಿಗಳು ವಿಜಯಪುರದ ಜೀವನಾಡಿಗಳು. ಚಳಿಗಾಲದಲ್ಲೂ ಇಲ್ಲಿನ ಉಷ್ಣಾಂಶವೇ ಜಾಸ್ತಿ! ಕನ್ನಡ, ಉರ್ದು, ಮರಾಠಿ ಮಿಶ್ರಿತ ಕನ್ನಡ ಇಲ್ಲಿನ ಜನರಾಡುವ ಪ್ರಮುಖ ಭಾಷೆಗಳು.

ವಿಜಯಪುರ ಎಂದೊಡನೆ ನೆನಪಾಗಿ, ಬಾಯಲ್ಲಿ ನೀರುಭರಿಸುವ ಇಲ್ಲಿನ ಜೋಳದ ರೊಟ್ಟಿ ಸಿಕ್ಕಾಬಟ್ಟೆ ಪ್ರಸಿದ್ಧಿ! ಅದರೊಂದಿಗೆ ಶೇಂಗಾ ಚಟ್ನಿ, ಬದನೆಕಾಯಿ ಎಣ್ಣೆಗಾಯಿ ಇದ್ದರಂತೂ ಆ ರುಚಿಯೇ ಬೇರೆ!

ಇಂಡಿ ಕ್ಷೇತ್ರ: ಸೌಹಾರ್ದ ಕ್ಷೇತ್ರದ ಹೊಣೆ ಯಾರ ಹೆಗಲಿಗೆ?

ಇಲ್ಲಿನ ರಾಜಕೀಯದ ಸ್ಥಿತಿಗತಿಯ ಬಗ್ಗೆ ಯೋಚಿಸುವುದಾದರೆ ವಿಜಯಪುರ ವಿಧಾನ ಸಭಾ ಕ್ಷೇತ್ರದ ಜನಸಂಖ್ಯೆ 3 ಲಕ್ಷ. ಹಿಂದು, ಮುಸ್ಲಿಂ, ಜೈನ, ಕ್ರೈಸ್ತ ಧರ್ಮೀಯರು ಸಹಬಾಳ್ವೆಯಿಂದ ಬದುಕು ನಡೆಸುತ್ತಿದ್ದಾರೆ. ಶೇ.84 ರಷ್ಟು ಸಾಕ್ಷರತೆಯ ಪ್ರಮಾಣವನ್ನು ಇದು ಹೊಂದಿದೆ. ವಿಜಯಪುರ ನಗರ ಹೆಚ್ಚು ಮುಸ್ಲಿಂ ಸಮುದಾಯದ ಮತದಾರರನ್ನು ಹೊಂದಿರುವುದರಿಂದ ಇಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ.

2013 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಕಬುಲ್ಲ ಎಸ್ ಬಾಗವಾನ್ ಅಲ್ಪ ಮತಗಳ ಅಂತರದಿಂದ ಗೆದ್ದಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಅನುಭವಿ ಬಸವರಾಜ್ ಯತ್ನಾಳ್ ಸೋಲಿನ ಕಹಿ ಉಂಡಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಅಪ್ಪು ಪಟ್ಟಣ ಶೆಟ್ಟಿ ಸ್ಪರ್ಧಿಸಿದ್ದರು. ಈ ಬಾರಿಯೂ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತ.

2013 ರಲ್ಲಿ ಗೆದ್ದಿದ್ದ ಮಕಬುಲ್ಲ ಅವರು 48615 ಮತಗಳನ್ನು ಪಡೆದಿದ್ದರೆ ಜೆ.ಡಿಎಸ್ ನ ಬಸವರಾಜ ಯತ್ನಾಳ್ 39235 ಮೂಲಕ ತೀವ್ರ ಪ್ರತಿಸ್ಪರ್ಧೆ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Vijayapura(Bijapur) assembly constituency of Vijayapura(Bijapur)district. Get election news from Vijayapura(Bijapur). Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ