ಕ್ಷೇತ್ರ ಪರಿಚಯ : ಕಾರಜೋಳ ಗೆಲುವಿಗೆ ತಡೆ ಬೀಳುತ್ತಾ?
ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರ ಮುಧೋಳ. ಘಟಪ್ರಭಾ ನದಿ ತೀರದಲ್ಲಿರುವ ಕ್ಷೇತ್ರ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ.ದೂರದಲ್ಲಿದೆ. 'ಮುಧೋಳ' ಎಂಬ ನಾಯಿಯ ತಳಿಗೂ ಕ್ಷೇತ್ರ ಪ್ರಸಿದ್ಧಿ ಪಡೆದಿದ್ದು, ಭಾರತೀಯ ಸೇನೆಯಲ್ಲಿಯೂ ನಾಯಿಗಳು ಸೇವೆ ಸಲ್ಲಿಸುತ್ತಿವೆ.
ರಾಜಕೀಯವಾಗಿ ಮುಧೋಳದ ಹಾಲಿ ಶಾಸಕ ಬಿಜೆಪಿಯ ಗೋವಿಂದ ಕಾರಜೋಳ. ಬಾಗಲಕೋಟೆ ಜಿಲ್ಲೆಯಲ್ಲಿ ಒಂದೇ ಒಂದು ಎಸ್.ಟಿ.ಮೀಸಲಾತಿ ಹೊಂದಿರುವ ಕ್ಷೇತ್ರವಿದು. ಕಳೆದ ಮೂರು ಚುನಾವಣೆಗಳಿಂದ ಗೋವಿಂಧ ಕಾರಜೋಳ ಅವರು ಗೆಲ್ಲುತ್ತ ಬಂದಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಪಕ್ಷದ ಆರ್.ಬಿ.ತಿಮ್ಮಾಪುರ ಸತತ ಮೂರು ಬಾರಿ ಸೋಲು ಕಂಡಿದ್ದಾರೆ.
ಶಾಸಕ ಗೋವಿಂದ ಕಾರಜೋಳ ಅವರು ನೀರಾವರಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂಬುದು ಇಲ್ಲಿನ ಕಾರ್ಯಕರ್ತರ ಮಾತು. ಇಲ್ಲಿ ರೆಡ್ಡಿ ಸುಮಾಯದ ಮತಗಳು ನಿರ್ಣಾಯಕ. ಒಳ ಒಪ್ಪಂದದ ರಾಜಕೀಯ ನಡೆಯುತ್ತೆ ಎನ್ನುವುದು ಸದ್ಯದ ಸುದ್ದಿ. ಗೋವಿಂದ ಕಾರಜೋಳ ಅವರ ತಂತ್ರಗಾರಿಕೆಯಿಂದ ಈ ಬಾರಿ ಮತ್ತೆ ಗೆಲ್ಲಲಿದ್ದಾರೆಯೇ?.

ಗೋವಿಂದ ಕಾರಜೋಳ ವಿರುದ್ಧ ಸೋತಿದ್ದ ಆರ್.ಬಿ.ತಿಮ್ಮಾಪುರ ಅವರು ಈಗ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರು. ಕಳೆದ ವರ್ಷ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಮಾಡಿ, ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಸಿದ್ದರಾಮಯ್ಯ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಪರಿಷತ್ ಸದಸ್ಯರಾಗಿದ್ದರೂ ಈ ಬಾರಿ ಪುನಃ ಚುನಾವಣೆಗೆ ಸ್ಪರ್ಧಿಸಲು ಅವರು ಬಯಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಸತೀಶ ಬಂಡಿವಡ್ಡರ್ ಅವರು ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
2013ರ ಫಲಿತಾಂಶ
* ಗೋವಿಂದ ಕಾರಜೋಳ : 64,727
* ಆರ್.ಬಿ.ತಿಮ್ಮಾಪುರ : 59,549
* ಗೆಲುವಿನ ಅಂತರ : 5,178












Click it and Unblock the Notifications