ಕ್ಷೇತ್ರ ಪರಿಚಯ : ಜೆಡಿಎಸ್ ವಶದಲ್ಲಿರುವ ಕ್ಷೇತ್ರ ಮಹಾಲಕ್ಷ್ಮೀ ಲೇಔಟ್

Posted By: Gururaj
Subscribe to Oneindia Kannada

ಬಡ ಮತ್ತು ಮಧ್ಯಮ ಮರ್ಗದ ಜನರು ಹೆಚ್ಚಾಗಿ ನೆಲೆಸಿರುವ ಕ್ಷೇತ್ರ ಮಹಾಲಕ್ಷ್ಮೀ ಲೇಔಟ್. ರಾಜಕೀಯವಾಗಿ ಜೆಡಿಎಸ್ ವಶದಲ್ಲಿರುವ ಕ್ಷೇತ್ರವಿದು. ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ ಗೆಲುವಿನ ಓಟಕ್ಕೆ ತಡೆ ಹಾಕಲು ತಂತ್ರ ರೂಪಿಸುತ್ತಿವೆ.

ಮಹಾಲಕ್ಷ್ಮೀ ಲೇಔಟ್, ಶಾರದಾ ಕಾಲೋನಿ, ಹೌಸಿಂಗ್ ಬೋರ್ಡ್, ಕಾಮಾಕ್ಷಿಪಾಳ್ಯ, ಡಾ.ರಾಜ್ ಸಮಾಧಿ, ರಾಜಾಜಿನಗರ ಮೊದಲನೇ ಬ್ಲಾಕ್, ನಂದಿನಿ ಲೇಔಟ್ ಕುರುಬರಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳು ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಮಹಾಲಕ್ಷ್ಮೀ ಲೇಔಟ್ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಕಸರತ್ತು!

ವಾರ್ಡ್‌ಗಳು : ನಂದಿನಿ ಲೇಔಟ್, ಮಾರಪ್ಪನಪಾಳ್ಯ, ನಾಗಪುರ, ಮಹಾಲಕ್ಷ್ಮೀಪುರಂ, ಶಕ್ತಿ ಗಣಪತಿ ನಗರ, ಶಂಕರಮಠ, ವೃಷಭಾವತಿ ನಗರ ವಾರ್ಡ್‌ಗಳು ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 7 ವಾರ್ಡ್‌ಗಳಲ್ಲಿ 4 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಾಯಕರು ಜಯಗಳಿಸಿದ್ದಾರೆ.

Karnataka assembly election 2018 : Mahalakshmi Layout constituency profile

ಕ್ಷೇತ್ರದ ಕಾಂಗ್ರೆಸ್ ನಾಯಕರಾಗಿದ್ದ ನೆ.ಲ.ನರೇಂದ್ರ ಬಾಬು ಅವರು ಬಿಜೆಪಿ ಸೇರಿದ್ದು ಕ್ಷೇತ್ರದ ರಾಜಕೀಯ ಚಿತ್ರವಣವನ್ನು ಬದಲಾವಣೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ಕ್ಷೇತ್ರ ಜಾತಿ ಲೆಕ್ಕಾಚಾರ : ಒಕ್ಕಲಿಗರು 80,000, ಹಿಂದುಳಿದ ವರ್ಗ 50,000, ಎಸ್ಸಿ 30,000, ಲಿಂಗಾಯತ 22,000, ಮುಸ್ಲಿಂ 7000

2013ರ ಚುನಾವಣೆ ಫಲಿತಾಂಶ : ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಕೆ.ಗೋಪಾಲಯ್ಯ ಅವರು 66,127 ಮತ ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ನೆ.ಲ.ನರೇಂದ್ರ ಬಾಬು 50,757 ಮತ್ತು ಬಿಜೆಪಿ ಅಭ್ಯರ್ಥಿ ಎಸ್.ಹರೀಶ್ 23,545 ಮತಗಳನ್ನು ಪಡೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018 : Read all about Mahalakshmi Layout assembly constituency of Bengaluru. Get election news from Bengaluru. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ