ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ -ಧಾರವಾಡ ಪೂರ್ವ: ಮೀಸಲು ಕ್ಷೇತ್ರದಲ್ಲಿ ಗೆಲುವು ಯಾರಿಗೆ?

|
Google Oneindia Kannada News

ಹತ್ತಿ ಮತ್ತು ಶೇಂಗಾ ಬೆಳೆಗೆ ಪ್ರಸಿದ್ಧಿ ಪಡೆದ ಈ ಕ್ಷೇತ್ರ ಎಸ್ ಸಿ(ಪರಿಶಿಷ್ಟ ಜಾತಿ) ವರ್ಗದ ಮೀಸಲು ಕ್ಷೇತ್ರ. ಕೈಮಗ್ಗ ಮತ್ತು ಜವಳಿ ಕೈಗಾರಿಕೆಗೆ ಹೇಳಿ ಮಾಡಿಸಿದ ತಾಣ ಇದು. ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲೇ ಇದು ಹತ್ತಿ ಮತ್ತು ಕಬ್ಬಿಣ ವ್ಯಾಪಾರದ ಬಹುಮುಖ್ಯ ಕೇಂದ್ರವಾಗಿತ್ತು ಎಂಬ ಕುರಿತು ಮಾಹಿತಿ ಸಿಗುತ್ತದೆ.

ಇಲ್ಲಿನ ರಾಜಕೀಯದ ಬಗ್ಗೆ ಮಾತನಾಡುವುದಾದರೆ ಛಲವಾದಿ ಸಮುದಾಯಕ್ಕೆ ಸೇರಿದ ಪ್ರಸಾದ ಅಬ್ಬಯ್ಯ ಸದ್ಯ ಎಮ್ ಎಲ್ ಸಿ ಆಗಿದ್ದಾರೆ. ಕಳೆದ ಬಾರಿಯ ಎಮ್ ಎಲ್ ಸಿ ಆಗಿದ್ದ ಬಿಜೆಪಿಯ ವೀರಭದ್ರಪ್ಪ ಹಾಲಹರವಿ(ಮಾದಿಗ ಜನಾಂಗ) ಅವರು ಕೆಜಿಪಿಯಿಂದಾಗಿ ಮತ ವಿಭಜನೆಯಾಗಿ ಸೋಲಬೇಕಾಯಿತು.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ: ಸೋಲು-ಗೆಲುವಿನ ಭೀತಿಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ: ಸೋಲು-ಗೆಲುವಿನ ಭೀತಿ

ಕೆಜೆಪಿಯ ಶಂಕ್ರಪ್ಪ ಬಿಜವಾಣ ಸುಮಾರು 25 ಸಾವಿರ ಮತಗಳನ್ನು ಪಡೆದು ಬಿಜೆಪಿ ಸೋಲಿಗೆ ಮತ್ತು ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದರು. ಜೆಡಿಎಸ್ ಹನುಮಂತಪ್ಪ ಆಲ್ಕೋಡ್(ಮಾದಿಗ) 3 ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

Karnataka Assembly Election 2018: Hubballi Dharwad East Constituency Profile

ತಮ್ಮ ಗೆಲುವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಇದುವರೆಗೆ ಸುಮಾರು 150 ಕೋಟಿ ಅನುದಾನವನ್ನು ತಂದು, ಪ್ರಸಾದ್ ಅಬ್ಬಯ್ಯ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಆದರೆ ಕುಟುಂಬ ರಾಜಕಾರಣ ಅವರಿಗೆ ಈ ಬಾರಿ ಹಿನ್ನಡೆ ಮಾಡಬಹುದು. ಅಲ್ಲದೆ ಬೆಟ್ಟಿಂಗ್ ರಿಯಲ್ ಎಸ್ಟೇಟ್ ದಂಧೆಗಳ ಗಲಾಟೆ ಅವುಗಳು ಪ್ರಬಲವಾಗಿರುವುದರಿಂದ ಅಡ್ಡಪರಿಣಾಮ ಪ್ರಸಾದ ಅಬ್ಬಯ್ಯ ಗೆಲುವಿಗೆ ಮಾರಕವಾಗಬಹುದು.

ಮಾದಿಗ ಮತ್ತು ಛಲವಾದಿ ಸಮುದಾಯಗಳಲ್ಲಿ ಟಿಕೇಟ್ ಕಾರಣಕ್ಕಾಗಿ ಪೈಪೋಟಿ ಇದೆ. ಭಿನ್ನಮತದ ಬಿಸಿ ತಟ್ಟುವ ಸಾಧ್ಯತೆ ಇದೆ. ಅಲ್ಲದೆ, ಈ ಬಾರಿ ಬಿಜೆಪಿ ಮತ್ತು ಕೆಜೆಪಿ ಒಂದಾಗಿವೆ. ಮೋದಿ ಅಲೆ ಯಡಿಯೂರಪ್ಪ ಪ್ರಭಾವದಿಂದ ಹಾಲಹರವಿ ಮತ್ತೆ ಗೆದ್ದು ಬರಬಹುದು. ತನ್ನ ಪಕ್ಷದ ಕ್ಷೇತ್ರವಾದ ಇದನ್ನು ಶೆಟ್ಟರ್ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿದ್ದಾರೆ.

ಸಾವಜಿ ಜನಾಂಗದ ಮತಗಳನ್ನು ಒಗ್ಗೂಡಿಸುವಲ್ಲಿ ಅವರು ರಾಜಕೀಯ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ. ಹೀಗಾಗಿ ಕಮಲ ಅರಳುವ ಸಾಧ್ಯತೆ ಇದೆ.

2013 ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಸಾದ ಅಬ್ಬಯ್ಯ 42353 ಮತ ಪಡೆದಿದ್ದರೆ, ಬಿಜೆಪಿಯ ವೀರಭದ್ರಪ್ಪ ಹಾಲಹರವಿ 28831 ಮತ ಪಡೆದಿದ್ದರು.

English summary
Karnataka Assembly Election 2018: Read all about Hubballi Dharwad East assembly constituency of Dharwad district. Get election news from Hubballi Dharwad East. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X