'ಜನ್ ಕಿ ಬಾತ್' ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ, ಬಿಜೆಪಿಗೆ ಮೇಲುಗೈ

Recommended Video

      Karnataka Elections 2018 : ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಬಹುಮತ

      ಬೆಂಗಳೂರು, ಮೇ 08: ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಕುರಿತು 'ಜನ್ ಕಿ ಬಾತ್' ಸಂಸ್ಥೆ ಮತದಾನ ಪೂರ್ವ ಸಮೀಕ್ಷೆಗಳನ್ನು ಮಾಡಿದ್ದು ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ.

      ಜನ್ ಕಿ ಬಾತ್ ಸಂಸ್ಥೆಯು ಒಂದು ತಿಂಗಳ ಕಾಲ ಸುಮಾರು 12 ಲಕ್ಷ ಜನ ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ತಯಾರಿಸಿದ್ದು, ಕರ್ನಾಟಕವನ್ನು ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ, ಬೆಂಗಳೂರು, ಹಳೆ ಮೈಸೂರು ಎಂದು ವಿಂಗಡಿಸಿ ಸಮೀಕ್ಷೆ ಮಾಡಿದೆ.

      ಸಮೀಕ್ಷೆಯಲ್ಲಿ ಬಿಜೆಪಿಯು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಂಗ್ರೆಸ್ ಎರಡನೇ ಸ್ಥಾನ ಹಾಗೂ ಜೆಡಿಎಸ್ ಮೂರನೇ ಸ್ಥಾನವನ್ನು ಪಡೆದಿವೆ.

      ಜನ್ ಕಿ ಬಾತ್ ಸಮೀಕ್ಷೆಯಂತೆ ಬಿಜೆಪಿಯು 107 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ 74 ಜೆಡಿಎಸ್‌ 39 ಸ್ಥಾನ ಹಾಗೂ ಇತರ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಗಳು 4 ಸ್ಥಾನ ಪಡೆಯಲಿವೆ.

      ಸಮೀಕ್ಷೆ ವಲಯವಾರು ಫಲಿತಾಂಶ ಇಂತಿದೆ ನೋಡಿ...

      ಹೈದರಾಬಾದ್ ಕರ್ನಾಟಕದ ಸಮೀಕ್ಷೆ

      ಹೈದರಾಬಾದ್ ಕರ್ನಾಟಕದ ಸಮೀಕ್ಷೆ

      ಕಾಂಗ್ರೆಸ್‌ನ ಭದ್ರ ಕೋಟೆ ಎನಿಸಿಕೊಂಡಿರುವ ಹೈದರಾಬಾದ್ ಕರ್ನಾಟಕವನ್ನು ಬಿಜೆಪಿ ಒಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಹೈಕರ್ನಾಟಕದಲ್ಲಿ ಬಿಜೆಪಿ 24 ಸ್ಥಾನದ ಪಡೆದರೆ ಕಾಂಗ್ರೆಸ್‌ 13, ಜೆಡಿಎಸ್ 02 ಮತ್ತು ಇತರ ಪಕ್ಷಗಳು 1 ಸ್ಥಾನ ಪಡೆಯಲಿವೆಯಂತೆ.

      ಮುಂಬೈ ಕರ್ನಾಟಕದಲ್ಲಿ ಯಾರು ಕಿಂಗ್

      ಮುಂಬೈ ಕರ್ನಾಟಕದಲ್ಲಿ ಯಾರು ಕಿಂಗ್

      ಮುಂಬೈ ಕರ್ನಾಟಕದಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬುದು ಸಮೀಕ್ಷೆಯ ಫಲಿತಾಂಶ. ಬಿಜೆಪಿ 27, ಕಾಂಗ್ರೆಸ್ 20 , ಜೆಡಿಎಸ್ 02 ಮತ್ತು ಇತರೆ 1 ಸ್ಥಾನ ಗಳಿಸಲಿವೆ.

      ಕಡಲ ತೀರದಲ್ಲಿ ಬಿಜೆಪಿ ಮೇಲುಗೈ

      ಕಡಲ ತೀರದಲ್ಲಿ ಬಿಜೆಪಿ ಮೇಲುಗೈ

      ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎನ್ನುತ್ತಿದೆ ಜನ್‌ ಕಿ ಬಾತ್‌ ಸಮೀಕ್ಷೆ. ಈ ವಲಯದಲ್ಲಿ ಬಿಜೆಪಿ 14 ಸ್ಥಾನ ಪಡೆದರೆ, ಕಾಂಗ್ರೆಸ್‌ 5ಕ್ಕೆ ತೃಪ್ತಿ ಪಡೆದುಕೊಂಡಿದೆ ಹಾಗೂ ಜೆಡಿಎಸ್‌ ಮತ್ತು ಇತರ ಪಕ್ಷಗಳು ಖಾತೆ ತೆರೆಯಲು ವಿಫಲವಾಗುತ್ತವೆ ಎಂದಿದೆ ಸಮೀಕ್ಷೆ.

      ಹಳೆ ಮೈಸೂರು ಯಾರ ಮುಡಿಗೆ?

      ಹಳೆ ಮೈಸೂರು ಯಾರ ಮುಡಿಗೆ?

      61 ಕ್ಷೇತ್ರಗಳನ್ನು ಹೊಂದಿರು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನದ್ದು ಪ್ರಾಬಲ್ಯ ಎಂದಿದೆ ಸಮೀಕ್ಷೆ. ಇಲ್ಲಿ ಜೆಡಿಎಸ್‌ 30 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್‌ 17 ಮತ್ತು ಬಿಜೆಪಿ 13 ಸ್ಥಾನಗಳನ್ನು ಗೆಲ್ಲಲಿದೆ ಎನ್ನುತ್ತಿದೆ ಸಮೀಕ್ಷೆ.

      ಮಧ್ಯ ಕರ್ನಾಟಕದ ಕದ ತೆರೆದಿರುವುದು ಯಾರಿಗೆ?

      ಮಧ್ಯ ಕರ್ನಾಟಕದ ಕದ ತೆರೆದಿರುವುದು ಯಾರಿಗೆ?

      ಮಧ್ಯ ಕರ್ನಾಟಕದ ಮತದಾರರು ಬಿಜೆಪಿ ಪರ ಇದ್ದಾರೆ ಎಂಬುದು ಸಮೀಕ್ಷೆಯ ವರದಿ. ಇಲ್ಲಿ ಬಿಜೆಪಿ 14 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 6 ಮತ್ತು ಜೆಡಿಎಸ್‌ 5 ಸ್ಥಾನ ಹಾಗೂ ಇತರೆ ಪಕ್ಷ 1 ಸ್ಥಾನಗಳಲ್ಲಿ ಗೆಲವು ಕಾಣಲಿದೆ ಎನ್ನುತ್ತಿದೆ ಜನ್ ಕಿ ಬಾತ್ ಸಮೀಕ್ಷೆ.

      ಬೆಂಗಳೂರಿನ ರಾಜ ಯಾರು?

      ಬೆಂಗಳೂರಿನ ರಾಜ ಯಾರು?

      ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಸಮೀಪ ಸ್ಪರ್ಧೆ ಇದ್ದು ಇಲ್ಲಿ ಬಿಜೆಪಿ ಒಂದು ಸೀಟು ಮುಂದಿದೆ. ಬಿಜೆಪಿಗೆ 14 ಸ್ಥಾನ ದೊರೆತರೆ. ಕಾಂಗ್ರೆಸ್‌ಗೆ 13, ಜೆಡಿಎಸ್‌ಗೆ 1 ಗೆಲ್ಲಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+