ನೀವು ಕರ್ನಾಟಕದ ಮುಖ್ಯಮಂತ್ರಿಯಾದರೆ! ನಿಮ್ಮ ಕನಸು, ಆದ್ಯತೆಗಳೇನು?

ಇದೆಂಥ ಹುಚ್ಚು ಕಲ್ಪನೆ ಅಂತ ನೀವು ಅಂದುಕೊಳ್ಳಬಹುದು. ಆದರೆ, ಕಲ್ಪನೆ ಮಾಡಿಕೊಂಡು ನಮ್ಮ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚಿಂತನ ಮಂಥನ ನಡೆಸಿದರೆ ತಪ್ಪೇನು? ಮುಖ್ಯಮಂತ್ರಿ ಪಟ್ಟ ಒಂದು ಪದವಿ ಮಾತ್ರ. ಅಲ್ಲಿ ಕುಳಿತು ಕೆಲಸ ಮಾಡಬೇಕಾದವರು ನಮಗಾಗಿಯೇ ತಾನೆ?

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕರ್ನಾಟಕದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಬೇಕು, ಮಹಿಳೆಯರಿಗೆ ಸುರಕ್ಷತೆ ಸಿಗಬೇಕು, ನೀರಿಗಾಗಿ ಪ್ರತಿ ರಾಜ್ಯದೊಡನೆ ಅನುದಿನವೂ ಕಿತ್ತಾಡುವಂತಾಗಬಾರದು, ಪೊಲೀಸರ ಬಳಿ ಹೋದಾಗ ನ್ಯಾಯ ಸಿಗಬೇಕು, ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಲವಲೇಶದಷ್ಟೂ ಇರಬಾರದು... ಇತ್ಯಾದಿ ಇತ್ಯಾದಿ.

ಈ ಬಗ್ಗೆ ಜನಸಾಮಾನ್ಯರಾದ ನಮಗೂ ಒಂದು ಕಲ್ಪನೆ ಇದ್ದೇ ಇರುತ್ತದೆ. ಆದರೆ, ಅವುಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸುವಲ್ಲಿ ನಾವು ಹೀನಾಯವಾಗಿ ಸೋಲುತ್ತೇವೆ. ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ವಿಶೇಷ ಬಗೆಯದಾದ ಚಟುವಟಿಕೆಯೊಂದನ್ನು ನಿಮಗೆ ನೀಡುತ್ತಿದ್ದೇವೆ. ಅದರಲ್ಲಿ ಭಾಗವಹಿಸಿ.

ಕರ್ನಾಟಕದ ಮುಖ್ಯಮಂತ್ರಿಯಾಗಲು ನಿಮಗೊಂದು ಸುವರ್ಣಾವಕಾಶ. ಒಂದು ವೇಳೆ ನೀವು ಕರ್ನಾಟಕದ ಮುಖ್ಯಮಂತ್ರಿಯಾದರೆ, ರಾಜ್ಯಕ್ಕೆ ನಿಮ್ಮ ಆದ್ಯತೆಗಳೇನಿರುತ್ತಿದ್ದವು ಎಂದು ನಿರ್ಧರಿಸಲು ಒನ್ಇಂಡಿಯಾ ನಿಮಗೆ ವೇದಿಕೆ ಒದಗಿಸುತ್ತಿದೆ. ನಿಮ್ಮ ವಸ್ತುನಿಷ್ಠ ಅಭಿಪ್ರಾಯ ತಿಳಿಸಿ, ನಿಮ್ಮ ಅನಿಸಿಕೆಗಳಿಗೆ ಮಾನ್ಯತೆ ಸಿಗುವಂತೆ ನಾವು ಮಾಡುತ್ತೇವೆ.

ನಿಮ್ಮ ಕೆಲಸ ಸುಲಭವಾಗಿಸಲು ಇಲ್ಲಿ 12 ಆಯ್ಕೆಗಳನ್ನು ನಾವೇ ನೀಡಿದ್ದೇವೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಯಾವುದಕ್ಕೆ ಎಷ್ಟು ಅಂಕ ಅಥವಾ ಆದ್ಯತೆ ನೀಡುತ್ತೀರಿ ಎಂಬುದನ್ನು ಸ್ಟಾರ್ ಗಳ ಮೇಲೆ ಕ್ಲಿಕ್ಕಿಸಿ, ಒಂದು ಸಣ್ಣ ಟಿಪ್ಪಣಿಯೊಂದಿಗೆ ನಮಗೆ ಕಳಿಸಿ. ಅವನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+