ದಿನೇಶ್ ಗುಂಡೂರಾವ್ ಬಳಿ ಆಸ್ತಿ ಎಷ್ಟಿದೆ, ಎಷ್ಟು ಶ್ರೀಮಂತರು?
ಬೆಂಗಳೂರು, ಏಪ್ರಿಲ್ 21: ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಬಳಿ ಇರುವುದು 23.65 ಕೋಟಿ ರೂಪಾಯಿ ಮೌಲ್ಯದ ಆಸ್ತಿ. 2013ರಲ್ಲಿ ಅವರು ತಮ್ಮ ಬಳಿ 22.76 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಣೆ ಮಾಡಿದ್ದರು.
ದಿನೇಶ್ ಗುಂಡೂರಾವ್ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಬಳಿ 65.56 ಲಕ್ಷ ಮೌಲ್ಯದ ಚರಾಸ್ತಿ ಇದ್ದರೆ, ಪಿತಾರ್ಜಿತವಾಗಿ ಬಂದ 23 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಕಳೆದ ಸಾಲಿನಲ್ಲಿ ತಾವು ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ 20.40 ಲಕ್ಷ ವರಮಾನ ತೋರಿಸಿದ್ದು, ಪತ್ನಿ ತಬು ಅವರಿಗೆ 35.69 ಲಕ್ಷ ಮತ್ತು ಮಗಳು ಅನನ್ಯಾಗೆ 5.38 ಲಕ್ಷ ಆದಾಯವಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಸರ್ಕಾರದ ಸೌಲಭ್ಯಗಳಲ್ಲಿ, ತೆರಿಗೆ ಮತ್ತು ಬಿಲ್‌ಗಳಲ್ಲಿ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ತಮ್ಮ ಮೇಲೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿಲ್ಲ. ಯಾವುದೇ ಆರೋಪ ದಾಖಲಾಗಿಲ್ಲ ಮತ್ತು ಶಿಕ್ಷೆಗೆ ಒಳಗಾಗಿಲ್ಲ ಎಂದು ಅವರು ಹೇಳಿದ್ದಾರೆ. ಗಾಂಧಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ದಿನೇಶ್ ಅವರ ಮತದಾನದ ಹಕ್ಕು ಇರುವುದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ.

ದಿನೇಶ್ ಗುಂಡೂರಾವ್ ಚರಾಸ್ತಿಯ ವಿವರ
ದಿನೇಶ್ ಗುಂಡೂರಾವ್ ಅವರು ತಮ್ಮ ಬಳಿ ಒಟ್ಟು 65.56 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ಹೇಳಿದ್ದಾರೆ. ಒಂದು ವಾಹನ, ನಾಲ್ಕು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇದೆ.
* ನಗದು- 54 ಸಾವಿರ
* ಚಿನ್ನ, ಬೆಳ್ಳಿ ಆಭರಣದ ಮೌಲ್ಯ -14.69 ಲಕ್ಷ
* ಬ್ಯಾಂಕ್ ಖಾತೆಯಲ್ಲಿರುವ ಒಟ್ಟು ಹಣ- 18.95 ಲಕ್ಷ
* ಇತರೆ ಉಳಿತಾಯ ಸೌಲಭ್ಯಗಳಲ್ಲಿ ಮಾಡಿರುವ ಹೂಡಿಕೆ-21.30 ಲಕ್ಷ
* ಟೊಯೊಟೊ ಆಲ್ಟಿಸ್ ವಾಹನದ ಮೌಲ್ಯ 10.50 ಲಕ್ಷ
* ಒಟ್ಟು ಚರಾಸ್ತಿ ಮೌಲ್ಯ- 65.56 ಲಕ್ಷ

ಪತ್ನಿ ತಬು ಆಸ್ತಿ ಮೌಲ್ಯ 50.55 ಲಕ್ಷ
ದಿನೇಶ್ ಅವರ ಪತ್ನಿ ತಬು ಅವರ ಬಳಿ ಇರುವ ಚರಾಸ್ತಿ ಮೌಲ್ಯವು ಬಹುತೇಕ ಸಮಪ್ರಮಾಣದಲ್ಲಿದೆ. ಅವರ ಬಳಿ ಕೇವಲ 14 ಸಾವಿರ ರೂಪಾಯಿ ನಗದು ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
* ನಗದು- 14 ಸಾವಿರ
* ಮಗಳು ಅನನ್ಯಾ ಬಳಿ ಇರುವ ನಗದು -6 ಸಾವಿರ
* ಆಭರಣ ಮೌಲ್ಯ- 17.86 ಲಕ್ಷ
* ಬ್ಯಾಂಕ್‌ನಲ್ಲಿರುವ ಹಣ- 32.55 ಲಕ್ಷ
* ಚರಾಸ್ತಿ ಮೌಲ್ಯ 50.55 ಲಕ್ಷ

ಸ್ಥಿರಾಸ್ತಿಯ ವಿವರ
ಸಾದಹಳ್ಳಿಯಲ್ಲಿ ಕೃಷಿ ಜಮೀನು ಹೊಂದಿದ್ದು, ಇದು ಪಿತ್ರಾರ್ಜಿತವಾಗಿ ಬಂದಿದೆ. ಬೆಂಗಳೂರಿನಲ್ಲಿ 2 ಕೋಟಿ ಮಾರುಕಟ್ಟೆ ಮೌಲ್ಯದ ಮನೆ ಇದೆ. ಪತ್ನಿ ಹೆಸರಿನಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿ ಒಂದು ಫ್ಲಾಟ್ ಇದೆ.
* ಸಾದಹಳ್ಳಿಯಲ್ಲಿ 18.33 ಎಕರೆ ಕೃಷಿ ಜಮೀನು- 21 ಕೋಟಿ
* 4000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಮನೆ -2 ಕೋಟಿ
* ಒಟ್ಟು ಸ್ಥಿರಾಸ್ತಿ ಮೌಲ್ಯ -23 ಕೋಟಿ
* ಪತ್ನಿ ಹೆಸರಿನಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿ ಫ್ಲಾಟ್ -3 ಕೋಟಿ

ಸಾಲದ ವಿವರ
ಸ್ನೇಹಿತರ ಬಳಿ 45.50 ಲಕ್ಷ ಪಡೆದುಕೊಂಡಿದ್ದು, ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಬಾಕಿ ಹೊಂದಿಲ್ಲ ಎಂದು ದಿನೇಶ್ ತಿಳಿಸಿದ್ದಾರೆ. ಆದರೆ ಪತ್ನಿ ಹೆಸರಿನಲ್ಲಿ ಒಟ್ಟಾರೆ 70.14 ಲಕ್ಷ ಸಾಲ ಇದೆ.
* ಸ್ನೇಹಿತರಿಂದ ಸಾಲ -45.50 ಲಕ್ಷ
* ಪತ್ನಿಯಿಂದ ಎಸ್‌ಬಿಐನಲ್ಲಿ ಸಾಲ 60.14 ಲಕ್ಷ
* ರೆಂಟ್ ಡೆಪಾಸಿಟ್ 10 ಲಕ್ಷ












Click it and Unblock the Notifications