ಮುದ್ರಣಾಲಯಗಳ ಜಿಲ್ಲೆ ಗದಗದ ಪ್ರಮುಖ ಸಮಸ್ಯೆಗಳು
ಕುಮಾರವ್ಯಾಸನ ತವರು ನೆಲವಾದ ಗದಗ ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅಪಾರ. ಗದುಗಿನ ನಾರಣಪ್ಪ ಎಂಬುದು ಕುಮಾರವ್ಯಾಸನ ಮೂಲ ಹೆಸರಾಗಿತ್ತು. ಗಾನಯೋಗಿ ಪಂಚಾಕ್ಷರಿ ಗವಾಯಿ ಅವರೂ ಗದಗದವರು.
ಗದಗದಲ್ಲಿ ಎಲ್ಲೇ ಕಲ್ಲು ಹೊಡೆದರೂ ಅದು ಪ್ರಿಂಟಿಂಗ್ ಪ್ರೆಸ್ ಅಥವಾ ಕೈಮಗ್ಗದ ಕಾರ್ಖಾನೆಗೆ ಹೋಗಿ ಬೀಳುತ್ತದೆ ಎಂಬಷ್ಟರ ಮಟ್ಟಿಗೆ ಈ ಜಿಲ್ಲೆಯಲ್ಲಿ ಮುದ್ರಣಾಲಯ ಮತ್ತು ಕೈಮಗ್ಗದ ಕಾರ್ಖಾನೆಗಳಿದ್ದವಂತೆ!
ಹಿಂದೂಸ್ತಾನಿ ಗಾಯಕ, ಭಾರತ ರತ್ನ ಪಂ.ಭೀಮಸೇನ ಜೋಶಿ ಅವರ ಮೂಲ ಊರೂ ಗದಗ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಖ್ಯಾತಿಯ ಹುಯಿಲಗೋಳ ನಾರಾಯಣ ರಾಯರು ಗದುಗಿನವರು. ಭಾರತ ಕಂಡ ಹೆಮ್ಮೆಯ ಕ್ರಿಕೆಟ್ ಪಟು ಸುನಿಲ್ ಜೋಶಿ ಸಹ ಇಲ್ಲಿನವರೇ.
ಇಂಥ ಗದಗ ಜಿಲ್ಲೆ ನೀರಿನ ಸಮಸ್ಯೆ, ಮೂಲಸೌಕರ್ಯಗಳ ಕೊರತೆಯಿಂದಾಗಿ ಇಂದು ಅಭಿವೃದ್ಧಿ ಪಥದಲ್ಲಿ ಸಾಗಲಾಗದೆ ಪರಿತಪಿಸುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇನ್ನಾದರೂ ಜನಪ್ರತಿನಿಧಿಗಳು ಗದಗದಗತ್ತ ಕಣ್ಣು ಹಾಯಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಜಿಲ್ಲೆಯ ಪ್ರಮುಖ ಸಮಸ್ಯೆಗಳು
ಜಿಲ್ಲೆಯ ಪ್ರಮುಖ ಸಮಸ್ಯೆಗಳುಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಯೋಚಿಸುವುದಾದರೆ ಮೊದಲು ನೆನಪಾಗುವುದು ನೀರಿನ ಸಮಸ್ಯೆ. ಕಳೆದ ಎರಡು ವರ್ಷಕ್ಕೂ ಮಿಗಿಲಾಗಿ ಗದಗದ ನರಗುಂದದಲ್ಲಿ ಕಳಸಾ ಬಂಡೂರಿ ಹೋರಾಟ ನಡೆಯುತ್ತಲೇ ಇದೆ.
ಜನಪ್ರತಿನಿಧಿಗಳ್ಯಾರೂ ಕ್ಷೇತ್ರದತ್ತ ತಲೆಹಾಕದಿರುವುದು, ಜನಸಾಮಾನ್ಯರ ಕೈಗೆ ಸಿಗದೆ ಇರುವುದು ಗದಗದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ, ತಲುಪುವುದಕ್ಕೆ ರಸ್ತೆಗಳೇ ಸರಿಯಾಗಿಲ್ಲ. ಜನರು ದಿನನಿತ್ಯದ ಓಡಾಟಕ್ಕೆ ಹಾಳುಬಿದ್ದ ರಸ್ತೆಯನ್ನೇ ಉಪಯೋಗಿಸಬೇಕಾಗಿದೆ.
ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಯೋಚಿಸುವುದಾದರೆ ಮೊದಲು ನೆನಪಾಗುವುದು ನೀರಿನ ಸಮಸ್ಯೆ. ಕಳೆದ ಎರಡು ವರ್ಷಕ್ಕೂ ಮಿಗಿಲಾಗಿ ಗದಗದ ನರಗುಂದದಲ್ಲಿ ಕಳಸಾ ಬಂಡೂರಿ ಹೋರಾಟ ನಡೆಯುತ್ತಲೇ ಇದೆ.

ಜನಪ್ರತಿನಿಧಿಗಳ ಸುಳಿವಿಲ್ಲ!
ಜನಪ್ರತಿನಿಧಿಗಳ್ಯಾರೂ ಕ್ಷೇತ್ರದತ್ತ ತಲೆಹಾಕದಿರುವುದು, ಜನಸಾಮಾನ್ಯರ ಕೈಗೆ ಸಿಗದೆ ಇರುವುದು ಗದಗದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ, ತಲುಪುವುದಕ್ಕೆ ರಸ್ತೆಗಳೇ ಸರಿಯಾಗಿಲ್ಲ. ಜನರು ದಿನನಿತ್ಯದ ಓಡಾಟಕ್ಕೆ ಹಾಳುಬಿದ್ದ ರಸ್ತೆಯನ್ನೇ ಉಪಯೋಗಿಸಬೇಕಾಗಿದೆ.
ಇಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಕಲ್ ಕಾಲೇಜ್ ಎರಡೂ ಇರುವುದರಿಂದ ಶಿಕ್ಷಣ ಕ್ಷೇತ್ರದ ಬಗ್ಗೆ ತಕರಾರಿಲ್ಲ. ಆದರೆ ಮೂಲಸೌಕರ್ಯದ ಕೊರತೆಯೇ ಜನರನ್ನು ಹೈರಾಣಾಗಿಸಿದೆ. ಗೋಧಿ, ಜೋಳ, ಈರುಳ್ಳಿ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯಲಾಗುತ್ತದೆಯಾದರೂ, ಇಲ್ಲಿನ ಮಾರುಕಟ್ಟೆ ವ್ಯವಸ್ಥೆ ಮತ್ತಷ್ಟು ಸುಧಾರಣೆ ಕಾಣಬೇಕಿದೆ.

ಗದಗದ ಕುರಿತು ಒಂದಷ್ಟು ಮಾಹಿತಿ
ಗದಗ ಜಿಲ್ಲೆಯಲ್ಲಿ ಒಟ್ಟು 6 ತಾಲೂಕುಗಳಿವೆ: ಗದಗ, ಶಿರಹಟ್ಟಿ, ಮುಂಡರಗಿ, ರೋಣ, ಗಜೇಂದ್ರಗಡ, ನರಗುಂದ.
ವಿಧಾನಸಭಾ ಕ್ಷೇತ್ರಗಳು 4: ಗದಗ, ರೋಣ, ಶಿರಹಟ್ಟಿ, ನರಗುಂದ
ಪ್ರಮುಖ ಜನಾಂಗ: ಲಿಂಗಾಯತ, ಬಣಜಿಗ, ರೆಡ್ಡಿ, ಸಾದರ(ಸಾದರು) ಲಿಂಗಾಯತ

ಜಿಲ್ಲೆಯ ಪ್ರವಾಸೀ ತಾಣ
ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನಗಳು ಗದಗದ ಪ್ರಮುಖ ಪ್ರವಾಸಿ ತಾಣವಾಗಿದೆ. ಅಲ್ಲದೆ ಇಲ್ಲಿ ಸುಂದರ ಜೈನ ದೇವಾಲಯಗಳು ಸಹ ಇದ್ದು, ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ. ಹತ್ತು ಹಲವು ಐತಿಹಾಸಿಕ ತಾಣಗಳು ಈ ಜಿಲ್ಲೆಯಲ್ಲಿದ್ದರೂ ಇದನ್ನು ಸರಿಯಾಗಿ ನಿರ್ವಹಿಸಿ, ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕೆಲಸ ಮಾತ್ರ ಇಂದಿಗೂ ಆಗಿಲ್ಲದಿರುವುದು ಖೇದಕರ. ಇಲ್ಲಿರುವ ಮೃಗಾಲಯವೊಂದು ಸರಿಯಾದ ನಿರ್ವಹಣೆ ಇಲ್ಲದೆ, ಪ್ರವಾಸಿಗರನ್ನು ಆಕರ್ಷಿಸಲು ವಿಫಲವಾಗುತ್ತಿದೆ.

ಜನಪ್ರತಿನಿಧಿಗಳು
ನರಗುಂದ: ಬಿ.ಆರ್.ಯಾವಗಲ್(ಕಾಂಗ್ರೆಸ್)
ರೋಣ: ಜಿ.ಎಸ್.ಪಾಟೀಲ್(ಕಾಂಗ್ರೆಸ್)
ಶಿರಹಟ್ಟಿ: ರಾಮಕೃಷ್ಣ ಸಿದ್ದಲಿಗಪ್ಪ(ಕಾಂಗ್ರೆಸ್)
ಗದಗ: ಎಚ್.ಕೆ.ಪಾಟೀಲ್ (ಕಾಂಗ್ರೆಸ್)
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications