• search

ಕರ್ನಾಟಕ ಚುನಾವಣೆ ಫಲಿತಾಂಶದ ಲೈವ್ ಅಪ್ಡೇಟ್ಸ್ ನಾಳೆ ನಿರೀಕ್ಷಿಸಿ

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಸಮಸ್ತ ಕರ್ನಾಟಕದ ಜನರು ಮತ್ತು ರಾಜಕಾರಣಿಗಳು ಮಾತ್ರವಲ್ಲ, ಇಡೀ ದೇಶದ ನಾಗರಿಕರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ, ವರ್ಷದ ಅತೀದೊಡ್ಡ ರಾಜಕೀಯ ಯುದ್ಧವೆಂದೇ ಬಿಂಬಿತವಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ (ಮೇ 15) ಪ್ರಕಟವಾಗಲಿದೆ.

    ಕರ್ನಾಟಕ ವಿಧಾನಸಭೆ ಚುನಾವಣೆಗಳ ಫಲಿತಾಂಶವನ್ನು ಮೇ 15ರ ಬೆಳಿಗ್ಗೆಯಿಂದಲೇ ಪ್ರಕಟಿಸಲಾಗುತ್ತಿದೆ. ಯಾರಿಗೆ ಗೆಲುವು, ಯಾರು ಮಣ್ಣು ಮುಕ್ಕಲಿದ್ದಾರೆ? ಕ್ಷಣಕ್ಷಣದ ಮಾಹಿತಿಯನ್ನು ನಾವು ಡೈಲಿಹಂಟ್ ಮೂಲಕ ನಿಮಗೆ ನೀಡಲಿದ್ದೇವೆ.

    ಬೆಳಿಗ್ಗೆ 8 ಗಂಟೆಯಿಂದಲೇ ಫಲಿತಾಂಶಗಳು ಹೊರಬೀಳಲಿವೆ. ಲೈವ್ ಅಪ್ಡೇಟ್ ಗಾಗಿ ಮತ್ತು ತ್ವರಿತ ಮಾಹಿತಿಗಾಗಿ ಡೈಲಿಹಂಟ್ ತಾಣವನ್ನು ನೋಡುತ್ತಿರಿ. ಲೈವ್ ಅಪ್ಡೇಟ್ ಮಾತ್ರವಲ್ಲ, ಸುದ್ದಿ ವಿಶ್ಲೇಷಣೆ, ಲೇಟೆಸ್ಟ್ ಟ್ರೆಂಡ್ ಗಳನ್ನೂ ನಿಮಗೆ ನೀಡಲಿದ್ದೇವೆ. ತಾಜಾ ಮಾಹಿತಿಗಾಗಿ, ಅಂಕಿಸಂಖ್ಯೆಗಾಗಿ ನೋಡುತ್ತಿರಿ. ಇಂಥ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

    Catch live updates of Karnataka election results tomorrow

    ಕಾಂಗ್ರೆಸ್ಸಿಗೆ ಈ ಚುನಾವಣೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಏಕೆಂದರೆ, ಕರ್ನಾಟಕ ಹೊರತುಪಡಿಸಿದರೆ ಪಂಜಾಬ್ ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆಡಳಿತ ವಿರೋಧಿ ಅಲೆಯನ್ನು ಸಿದ್ದರಾಮಯ್ಯ ಮೆಟ್ಟಿನಿಲ್ಲುವರೆ ಅಥವಾ ಮೋದಿ ಅಲೆ ಕಾಂಗ್ರೆಸ್ಸನ್ನು ಸರ್ವನಾಶ ಮಾಡುವುದೆ? ಕ್ಷಣಕ್ಷಣದ ಸುದ್ದಿಸ್ವಾರಸ್ಯಕ್ಕಾಗಿ ಡೈಲಿಹಂಟ್ ನ ತಾಣವನ್ನು ನೋಡುತ್ತಿರಿ.

    ಕರ್ನಾಟಕದಲ್ಲಿ 222 (224) ವಿಧಾನಸಭಾ ಕ್ಷೇತ್ರಗಳಿಗಾಗಿ ಮೇ 12ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳುವುದೆ? ಅಥವಾ ಅಧಿಕಾರಕ್ಕೆ ಬರಲೇಬೇಕೆಂದು ಛಲದಿಂದ ಕಣಕ್ಕಿಳಿದಿರುವ ಬಿಜೆಪಿ ಅಧಿಕಾರವನ್ನು ಕಿತ್ತುಕೊಳ್ಳುವುದೆ? ಅಥವಾ ಇವೆರಡು ಪಕ್ಷಗಳ ನಡುವೆ ಜಾತ್ಯತೀತ ಜನತಾದಳ ಕಿಂಗ್ ಮೇಕರ್ ಆಗಿ ಹೊರಹೊಮ್ಮುವುದೆ?

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The wait is over. The result of Karnataka assembly elections 2018, which was dubbed as the biggest political battle of the year, would be declared tomorrow and you can catch all the live action here on DailyHunt. Will Siddaramaiah be able to beat the anti-incumbency or will the Modi juggernaut flatten the Congress?

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more