ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ರಾಮನಗರದಲ್ಲೂ ಕುಮಾರಸ್ವಾಮಿಗೆ ಗೆಲುವು
ಬೆಂಗಳೂರು, ಮೇ 08: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಅಭಿಪ್ರಾಯ ಸಂಗ್ರಹ ಮಾಡುವ ಉದ್ದೇಶದಿಂದ ಒನ್ಇಂಡಿಯಾ ತನ್ನ ಫೇಸ್ ಬುಕ್ ಪುಟದಲ್ಲಿ ಫೇಸ್ಬುಕ್ ಲೈವ್ ಪೋಲ್ ನಡೆಸುತ್ತಿದೆ.
ರಾಮನಗರ ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆಸಿದ ಸಮೀಕ್ಷೆ ಫಲಿತಾಂಶ ಇಲ್ಲಿದೆ. ಚನ್ನಪಟ್ಟಣ ಕ್ಷೇತ್ರಕ್ಕಾಗಿ ನಡೆಸಿದ ಸಮೀಕ್ಷೆಯಲ್ಲೂ ಕುಮಾರಸ್ವಾಮಿ ಅವರು ಜಯ ಗಳಿಸಿದ್ದರು.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 4 ಚುನಾವಣೆಗಳಲ್ಲಿ ಜೆಡಿಎಸ್ ಇಲ್ಲಿ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರದ ಮೇಲೆ ಭಾರೀ ಹಿಡಿತ ಹೊಂದಿದೆ. ಮುಖ್ಯಮಂತ್ರಿಯಾಗುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ಕುಮಾರಸ್ವಾಮಿ ಓಡಾಡುತ್ತಿರುವುದರಿಂದ ಇಲ್ಲಿ ಈ ಬಾರಿಯೂ ಅವರು ಗೆಲುವಿಗೆ ಕಷ್ಟಪಡಬೇಕಿಲ್ಲ

2013ರಲ್ಲಿ ಕುಮಾರಸ್ವಾಮಿ 25 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. 2008ರಲ್ಲಿ 47 ಸಾವಿರ ಮತಗಳ ಅಂತರದಿಂದ ಜಯಿಸಿದ್ದರು.
ಮುಖ್ಯಮಂತ್ರಿಯಾಗುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ಕುಮಾರಸ್ವಾಮಿ ಓಡಾಡುತ್ತಿರುವುದರಿಂದ ಇಲ್ಲಿ ಈ ಬಾರಿಯೂ ಅವರು ಗೆಲುವಿಗೆ ಕಷ್ಟಪಡಬೇಕಿಲ್ಲ. ಬಿಜೆಪಿಯಿಂದ ಸ್ಪರ್ಧಿಸಿರುವ ಸಮಾಜಸೇವಕಿ ಲೀಲಾವತಿ, ಕಾಂಗ್ರೆಸ್ ನಿಂದ ಇಕ್ಬಾಲ್ ಹುಸೇನ್ ಎಚ್.ಎ ಎದುರಾಳಿಯಾಗಿದ್ದಾರೆ.
ಫೇಸ್ಬುಕ್ ಲೈವ್ ಮತದಾನ: ಇದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಗಳನ್ನು ನೀಡಲಾಗಿರುತ್ತದೆ. ಉದಾಹರಣೆಗೆ ಚಾಮುಂಡೇಶ್ವರಿ ಕ್ಷೇತ್ರದ ಲೈವ್ ಪೋಲ್ ನಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೂ ಪ್ರತ್ಯೇಕ ಚಿಹ್ನೆ(ಎಮೋಜಿ) ಬಳಸಲಾಗಿದೆ. ವೀಕ್ಷಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಸರಿ ಹೊಂದುವ ಎಮೋಜಿಯನ್ನು ಒತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು.
ಫಲಿತಾಂಶ: ಸುಮಾರು 2 ಗಂಟೆ ಅವಧಿಯ ಚುಟುಕು ಸಮೀಕ್ಷೆ ಇದಾಗಿತ್ತು. ಎರಡೂವರೆ ಸಾವಿರಾರು ಮಂದಿ ಸಮೀಕ್ಷೆ ತಲುಪಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಗಮನಿಸಿ ಅಭ್ಯರ್ಥಿಗಳಿಗೆ ನೀಡಿರುವ ಎಮೋಜಿಗಳನ್ನು ಒತ್ತಿದರೆ ಮಾತ್ರ ನಿಮ್ಮ ಮತ ಲೆಕ್ಕಕ್ಕೆ ಸಿಗಲಿದೆ.
ಬಿಜೆಪಿ ಅಭ್ಯರ್ಥಿ ಲೀಲಾವತಿ ಅವರಿಗೆ 472 ಮತಗಳು ಲಭಿಸಿದ್ದರೆ, ಕಾಂಗ್ರೆಸ್ಸಿನ ಇಕ್ಬಾಲ್ ಹುಸೇನ್ ಎಚ್.ಎ ಅವರಿಗೆ 193 ಮತಗಳು ಸಿಕ್ಕಿವೆ. ಇನ್ನು ಜೆಡಿಎಸ್ ಎ ನಾಗೇಂದ್ರ ಪ್ರಸಾದ್ ಅವರಿಗೆ 1212 ಮತಗಳು ಬಂದಿದೆ.












Click it and Unblock the Notifications