• search
For Quick Alerts
ALLOW NOTIFICATIONS  
For Daily Alerts

  ಕರ್ನಾಟಕ ರಾಜಕೀಯ ಕ್ಷೇತ್ರದ ಶಿಸ್ತಿನ ಸಿಪಾಯಿ ಯಡಿಯೂರಪ್ಪ

  By Mahesh
  |

  ಕರ್ನಾಟಕ ರಾಜಕೀಯ ಕ್ಷೇತ್ರದ ಶಿಸ್ತಿನ ಸಿಪಾಯಿ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಯಾಕೋ ಕೊಂಚ ಮೆತ್ತಗಾಗಿದ್ದಾರೆ. ಕಳೆದ ಚುನಾವಣೆಯಲ್ಲಿದ್ದ ಖದರ್ ಈಗ ಇಲ್ಲ ಎಂದು ಜನರು ಆಡಿಕೊಳ್ಳುತ್ತಿರುವ ಹೊತ್ತಿಗೆ ಮತ್ತೆ ಘರ್ಜಿಸತೊಡಗಿದ್ದಾರೆ.

  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಯಡಿಯೂರಪ್ಪ ಅವರು ಮತ್ತೊಮ್ಮೆ ಮೋದಿ ಮುಖದಲ್ಲಿ ಮಂದಹಾಸ, ಅಮಿತ್ ಶಾ ತಂತ್ರಗಾರಿಕೆಗೆ ಬೆಲೆ ತಂದು ಕೊಡುವ ಜವಾಬ್ದಾರಿ ಹೊತ್ತಿದ್ದಾರೆ.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

  ಕಾವೇರಿ ಹೋರಾಟದಿಂದ ರಾಮಜನ್ಮಭೂಮಿ ಹೋರಾಟದವರೆಗೆ, ಜೀತಮುಕ್ತರ ಸಮಸ್ಯೆಯಿಂದ ಬಗರ್ ಹುಕಂ ಸಮಸ್ಯೆವರೆಗೆ ನಿರಂತರ ಹೋರಾಟ, ಜನಪರ ಕಾಳಜಿ ಹೊಂದಿರುವ ನಾಯಕರಾಗಿ ಇಂದಿಗೂ ಗುರುತಿಸಿಕೊಳ್ಳುತ್ತಾರೆ. ಆದರೆ, ಇತ್ತೀಚಿನ ಮಹದಾಯಿ ಪತ್ರ ಗಲಾಟೆಯಿಂದಾಗಿ ಅವರ 'ರೈತ ಪರ ರಾಜಕಾರಣಿ' ಇಮೇಜ್ ಗೆ ಮತ್ತೆ ಧಕ್ಕೆಯಾಗಿದೆ.

  ಡಿಕೆ ಶಿವಕುಮಾರ್ -ಯಡಿಯೂರಪ್ಪಗೆ ಭೂ ಅಕ್ರಮದ ಉರುಳು

  ಯಡಿಯೂರಪ್ಪನವರ ರಾಜಕೀಯ ಜೀವನ ಹುಟ್ಟಿಕೊಂಡಿದ್ದೇ ರೈತ ಹೋರಾಟದಿಂದ. ಯಡಿಯೂರಪ್ಪ ಸವೆಸಿದ ಹಾದಿ ಹೋರಾಟದಿಂದ ಕೂಡಿದೆ. ಈಗ ಶಿವಮೊಗ್ಗ ಕ್ಷೇತ್ರದಿಂದ ರಾಷ್ಟ್ರ ರಾಜಕಾರಣಕ್ಕೆ ಹೈ ಜಂಪ್ ಮಾಡಿದ್ದವರು ಮತ್ತೊಮ್ಮೆ ರಾಜ್ಯ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಪಯಣ, ಸದ್ಯದ ರಾಜಕೀಯ ಹಾದಿಯ ಬಗ್ಗೆ ಮುಂದೆ ಓದಿ..

  ಹೆಚ್ಚು ಯೋಜನೆ ಅನುಷ್ಠಾನಗೊಳಿಸಿದ ಹೆಗ್ಗಳಿಕೆ

  ಹೆಚ್ಚು ಯೋಜನೆ ಅನುಷ್ಠಾನಗೊಳಿಸಿದ ಹೆಗ್ಗಳಿಕೆ

  ರೈತರ ಸಾಲ ಮನ್ನಾ, ಸಾರಾಯಿ ನಿಷೇಧ. ಲಾಟರಿ ನಿಷೇಧ, ರೈತರಿಗೆ ಶೇ.4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಬೈಸಿಕಲ್ ವಿತರಣೆ ಯೋಜನೆ, ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಬೇತಿಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರೆತೆಗೆ ಸಂಧ್ಯಾ ಸುರಕ್ಷಾ ಯೋಜನೆ, ಮೊದಲಾದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ.

  ಯಡಿಯೂರಪ್ಪ ಅಂದರೆ ಭಯದಿಂದ ಭಕ್ತಿ

  ಯಡಿಯೂರಪ್ಪ ಅಂದರೆ ಭಯದಿಂದ ಭಕ್ತಿ

  ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದ ಯಡಿಯೂರಪ್ಪ ದಿಢೀರ್ ನಾಯಕರಾದವರಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕ. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು.

  ಯಡಿಯೂರಪ್ಪ ಧೃತಿಗೆಡದೆ 80ರ ದಶಕದಲ್ಲಿ ಎರಡು ಶಾಸಕರಿದ್ದ ಪಕ್ಷವನ್ನು ಹಂತಹಂತವಾಗಿ ಬೆಳೆಸುತ್ತಾ ಇಂದು 110 ಶಾಸಕರ ಪಕ್ಷವಾಗಿ ಮಾಡಿದ್ದು ಕಡಿಮೆ ಸಾಧನೆ ಏನಲ್ಲ. ಹೀಗಾಗಿ ವಿರೋಧ ಪಕ್ಷದ ದ್ವೇಷಿಗಳಿಗೂ ಸಕಾರಣವಾಗಿ ಬೆದರಿಕೆ ಹುಟ್ಟಿಸಬಲ್ಲ ಛಾತಿಯುಳ್ಳವರು.

  ಹಗರಣಗಳ ನಡುವೆ ಮತ್ತೆ ಬಿಜೆಪಿ ಸೇರಿದ್ದೆ ಸಾಧನೆ

  ಹಗರಣಗಳ ನಡುವೆ ಮತ್ತೆ ಬಿಜೆಪಿ ಸೇರಿದ್ದೆ ಸಾಧನೆ

  ಗೋಲಿಬಾರ್ ನಲ್ಲಿ ರೈತನೊಬ್ಬ ಮೃತಪಟ್ಟ ಹಾವೇರಿಯಲ್ಲೇ ಉದಯವಾದ ಹೊಸ ಪ್ರಾದೇಶಿಕ ಪಕ್ಷದ ಚುಕ್ಕಾಣಿ ಹಿಡಿದ ಯಡಿಯೂರಪ್ಪ ಅವರ ಸುತ್ತ ಇನ್ನೂ ಅನೇಕ ಹಗರಣಗಳ ಬಲೆ ಇದ್ದೇ ಇದೆ. ಡಿ ನೋಟಿಫಿಕೇಷನ್, ಸ್ವಜನಪಕ್ಷಪಾತ, ಭೂ ಹಗರಣಗಳ ಜೊತೆ ಯಡಿಯೂರಪ್ಪ ಅವರ ಸಿಡುಕು ಕಂಡರೆ ಜನ ಮುಖ ಬೇರೆಡೆ ತಿರುಗಿಸುತ್ತಾರೆ ಎಂಬ ದೂರಿದೆ.

  ಕೆಜೆಪಿ ಅಳಿವು ಉಳಿವಿನೊಂದಿಗೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ನಿರ್ಧಾರ ಎನ್ನಲಾಗಿತ್ತು. ಆದರೆ, ಮತ್ತೊಮ್ಮೆ ಬಿಜೆಪಿ ಸೇರ್ಪಡೆಯೊಂದಿಗೆ ಅಂತ್ಯ ಕಂಡಿತು. ಬಿಜೆಪಿ ಹಿರಿಯ ನಾಯಕರು, ವಿಪಕ್ಷಗಳ ವಿರೋಧದ ನಡುವೆ ಬಿಎಸ್ ವೈ ಮತ್ತೊಮ್ಮೆ ಏಳಿಗೆ ಕಾಣುವ ಉತ್ಸಾಹದಲ್ಲಿದ್ದಾರೆ.

  ಶಿಕಾರಿಪುರ ಕ್ಷೇತ್ರದಿಂದ ಕಣಕ್ಕೆ

  ಶಿಕಾರಿಪುರ ಕ್ಷೇತ್ರದಿಂದ ಕಣಕ್ಕೆ

  ಕೆಜೆಪಿಯಿಂದ ಬಿಜೆಪಿಗೆ ಮರಳಿದ ಬಳಿಕ ಬಿಎಸ್ ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕೆ ಇಳಿದು ಜಯಗಳಿಸಿದರು. ರಾಷ್ಟ್ರರಾಜಕಾರಣದಲ್ಲಿ ಮಿಂಚುವ ಅವಕಾಶ ಸಿಕ್ಕರೂ, ರಾಜ್ಯಕ್ಕೆ ಮರಳಿದರು. ಈಗ ಅವರಿಗೆ ಮತ್ತೊಮ್ಮೆ ಸಿಎಂ ಆಗುವ ಕನಸಿಗಿಂತ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಪ್ರತಿಷ್ಠೆಯ ವಿಷಯವಾಗಿದೆ. ಜನ ಪರಿವರ್ತನಾ ಸಮಾವೇಶಕ್ಕೆ ಮಿಶ್ರಪ್ರತಿಕ್ರಿಯೆ, ಬಿಜೆಪಿಯ ಆಂತರಿಕ ಜಗಳಗಳನ್ನು ಹತ್ತಿಕ್ಕದಿರುವುದು, ಹೈಕಮಾಂಡ್ ಆದೇಶಗಳ ಜಾಲದಲ್ಲಿ ಸಿಲುಕಿರುವುದು ಯಡಿಯೂರಪ್ಪ ಅವರ ಮೇಲೆ ಪರಿಣಾಮ ಬೀರಿರುವುದು ಸುಳ್ಳಲ್ಲ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೂ ಸಿಎಂ ಆಗಿ ಯಡಿಯೂರಪ್ಪ 2 ವರ್ಷಗಳಿಗೂ ಅಧಿಕ ಕಾಲ ಸ್ಥಾನದಲ್ಲಿ ಉಳಿಯುವುದಿಲ್ಲ. ಹೀಗಾಗಿ, ಪ್ರತಿಷ್ಠೆಯ ಯುದ್ಧದಲ್ಲಿ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಲು ಬಿಎಸ್ ವೈ ಸಜ್ಜಾಗಿದ್ದಾರೆ.

  2018ರ ಚುನಾವಣೆಯಲ್ಲಿ ಜಯ

  2018ರ ಚುನಾವಣೆಯಲ್ಲಿ ಜಯ

  2018ರ ವಿಧಾನಸಭೆ ಚುನಾವಣೆಗೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು 86983 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಮೇ 17ರಂದು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  In the perspective of Karnataka Assembly Elections 2018, we present the short biography and political journey of Lingayat leader, State BJP President BS Yeddyurappa. BSY- Key person to watch in Karnataka - "More than me a candidate for CM post in the State, BJP winning Assembly Elections in Karnataka is matter of prestige, a challenge to me and to my team". -This is the stand taken by B S Yeddyurappa.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more