ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎನ್ನುವವರೇ ಹೆಚ್ಚು
Recommended Video

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಅಂತ ಹೇಳೋರೇ ಹೆಚ್ಚು | ಇಂಡಿಯಾ ಟುಡೇ ಸಮೀಕ್ಷಾ ವರದಿ | Oneindia Kannada
ಬೆಂಗಳೂರು, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿ ಇದೀಗ ಪ್ರಕಟವಾಗಿದೆ.
ಇಂಡಿಯಾ ಟುಡೆ-ಕಾರ್ವಿ ಸಂಸ್ಥೆಯು ಹಲವು ಆಯಾಮಗಳ ಮೂಲಕ ಸಮೀಕ್ಷೆ ನಡೆಸಿದ್ದು, ಸರ್ಕಾರದ ಸಾಧನೆಯ ತೃಪ್ತಿ, ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬುದರ ಬಗ್ಗೆಯೂ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಮರ ಹೆಚ್ಚು ಒಲವು ವ್ಯಕ್ತವಾಗಿವೆ.
ರಾಜ್ಯದ ಶೇ 33ರಷ್ಟು ಮಂದಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ. ಯಡಿಯೂರಪ್ಪ ಅವರ ಪರ 26%, ಮತ್ತು ಜೆಡಿಎಸ್‌ನ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದು 21% ಬಯಸಿದ್ದಾರೆ. ಇವರನ್ನು ಹೊರತು ಪಡಿಸಿ ಜಗದೀಶ್ ಶೆಟ್ಟರ್ ಅವರ ಪರ 4%, ಅನಂತಕುಮಾರ್ ಹೆಗಡೆ ಪರ 2% ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಟುಡೆ ಅವರ ಸಮೀಕ್ಷೆ ಅವರ ಪ್ರಕಾರ ಸಿದ್ದರಾಮಯ್ಯ ಅವರ ಬಾಯಿಗೆ ಲಾಡು ಬಿದ್ದಿದೆ, ಆದರೆ ಜನರ ಅಭಿಪ್ರಾಯಗಳು ಮತಗಳಾಗಿ ಬದಲಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications