ಮೀಸೆ ಹೊತ್ತ ಗಂಡಿಲ್ಲದ್ದರೇ, ಹೆಣ್ಣಿನ ಬಾಳು ರವಿಯಿಲ್ಲದ ಬಾನಾ?


ಸಂಶೋಧನೆ, ಮಣ್ಣು-ಮಸಿ ಅಂಥ ಈ ಪ್ರೊಫೆಸರ್‌ಗಳು, ತಮ್ಮ ಮೂಗಿನ ನೇರಕ್ಕೆ ತೋಚಿದ್ದನ್ನು ಹೇಳಿ ಬಿಡುತ್ತಾರೆ. ಆ ಬಗ್ಗೆ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆ. ‘ಗಂಡಸರಿಲ್ಲದೇ ಹೆಂಗಸರು ಬದುಕೋದಕ್ಕೆ ಆಗೋದಿಲ್ಲ’ ಅನ್ನೋ ಸಂಶೋಧನೆ ಕೇಳಿ, ಗಂಡಸರು ಮೀಸೆ ತಿರುಗಿಸುತ್ತಿದ್ದಾರೆ! ನಿಜಕ್ಕೂ ಇವರಿಗೆ ಹೆಂಗಸರ ಬಗ್ಗೆ ಏನ್‌ ಗೊತ್ತು? ಹೆಂಗಸರಾದ ನಮಗೇ ನಾವು ಸರಿಯಾಗಿ ಅರ್ಥವಾಗಿಲ್ಲ...

oxygen + hydrogen = Waterಮೊನ್ನೆ ಪೇಪರ್‌ ನೋಡಿದ್ರಾ? ಅಮೆರಿಕೆಯ ಯಾವುದೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ನಿಕ್‌ ನೇವ್‌ ಅನ್ನುವ ಮಾನಸಿಕ ತಜ್ಞ ಸಂಶೋಧನೆ ಮಾಡಿ ಒಂದು ಇಂಟೆರೆಸ್ಟಿಂಗ್‌ ವಿಷಯ ಕಂಡುಹಿಡಿದಿದ್ದೀನಿ ಅಂತ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾನೆ! ಆ ಸಂಶೋಧನೆಯ ವಿಷಯ ಏನು ಗೊತ್ತಾ? women are not programmed to live without men!

ಆತ ಪ್ರಪಂಚದ ಗಂಡು ಸಮುದಾಯಕ್ಕೆ ಒಂದು ಮೆಸೇಜ್‌ ಕೂಡ ಕೊಟ್ಟಿದ್ದಾನಪ್ಪ. . . ‘‘ಗಂಡಸರೇ ಧೈರ್ಯವಾಗಿರಿ, ಹೆಂಗಸರು ಎಷ್ಟೇ ಯಶಸ್ವೀ ಮಹಿಳೆ ಎನಿಸಿರಲಿ, ಎಷ್ಟೇ financially independent ಆಗಿರಲಿ, ಎಷ್ಟೇ ಸ್ವಂತ ಆಲೋಚನೆ ಮಾಡುವಂತಹವರಾಗಲೀ ಅವರುಗಳು ಗಂಡಸರನ್ನು ಬಿಟ್ಟು ಬಾಳಲಾರರು.!’’

ಇದನ್ನು ಓದಿದ ತಕ್ಷಣ ನನಗೆ ನಗಬೇಕೋ, ಅಳಬೇಕೋ, ಸಿಟ್ಟು ಮಾಡಿಕೊಳ್ಬೇಕೋ, ಪೆದ್ದುತನ ಅಂತ ನಿರ್ಲಕ್ಷಿಸ್ಸ್ಬೇಕೋ ಒಂದೂ ಗೊತ್ತಾಗಲಿಲ್ಲ. ನನಗೆ ಏನೇ ಅನ್ನಿಸಿದರೂ ಹಂಚಿಕೊಳ್ಳೋಕ್ಕೆ ನೀವಿದ್ದೀರಲ್ಲ. . . . . ಹೀಗಲ್ಲ ಹಾಗೆ ಅಂತ ಹೇಳೋಕ್ಕೆ ನೀವಿದ್ದೀರಲ್ಲ. . . . . ಅದಕ್ಕಿಂತ ಇನ್ನೇನು ಬೇಕು ಹೇಳಿ? ಅಲ್ಲ, ನಾನಾಗ್ಲೀ, ನೀವಾಗ್ಲೀ ಯಾವಾಗ್ಲಾದ್ರು, ಯಾರಿಗಾದ್ರೂ ನಾವು ಗಂಡಸರಿಲ್ಲದೆ ಬಾಳ್ತೀವಿ ಬದುಕ್ತೀವಿ ಅಂತ ಹೇಳಿದ್ದೇವಾ? ನನಗಂತೂ doubt.

ನಾನು ನೋಡೋಕ್ಕೆ ನನ್ನ ತಾತನ ತರಹಾನೇ ಇದ್ದೀನಲ್ವಾ ಅಂತ ಅನ್ನಿಸಿದಾಗಲೆಲ್ಲಾ ಅವರ ಫೋಟೊ ತೆಗೆದು ನೋಡ್ತಿರ್ತೀನಿ. ಅಂತಹದರಲ್ಲಿ ಅವರ ನೆನಪಿಲ್ಲದೆ ನಾನು ಇರ್ತೀನಾ? ನನ್ನ ಅಪ್ಪ ನ ಬಗ್ಗೆ ಅಂತೂ ನಿಮಗೆಲ್ಲ ಹೇಳೇಯಿದ್ದೀನಿ. ಅವರಿಲ್ಲದ ನನ್ನ ಜೀವನವನ್ನು ಊಹಿಸಿಕೊಳ್ಳುವುದಾದ್ರೂ ಹೇಗೆ? ಭೇಟಿ ಮಾಡಿ ಮೂರು ವರ್ಷ ಆದರೂ ಗೌರಿ ಹಬ್ಬಕ್ಕೆ ತಪ್ಪದೆ ದುಡ್ಡು ಕಳಿಸ್ತಾನಲ್ಲ ದುಬೈನಲ್ಲಿರೊ ನನ್ನ ಅಣ್ಣ ಅವನಿಲ್ಲದೆ ನಾನು ಬಾಳಕಾಗತ್ತಾ?

Worlds best husband ಅನ್ನುವ ಪದಕ ಹಾಕಿಕೊಂಡಿದ್ದಾರಲ್ಲ ನನ್ನ ಯಜಮಾನ, ಅವರನ್ನು ಬಿಟ್ಟು. . . .ಓಹ್‌, ಶಾಂತಂ ಪಾಪಂ! ನನ್ನ ಬಾಳಿನ ಪುಟಗಳಲ್ಲಿ ಏನೂ ಅಪೇಕ್ಷೆ ಇಲ್ಲದೆ ನವಿರಾದ ನವಿಲುಗರಿಯನ್ನು ಬಚ್ಚಿಟ್ಟಿದ್ದಾನಲ್ಲ ಆ ನನ್ನ ಗೆಳೆಯ, ಪಾರಿಜಾತವಿತ್ತಿದ್ದಾನಲ್ಲ ಆ ನನ್ನ ಸ್ನೇಹಿತ ಅವನ ನೆನಪು, ಈಮೇಲ್ಸ್‌, ಫೋನ್‌ ಕಾಲ್ಸ್‌ etc., ಇಲ್ಲದೆ ಇರುವುದು ಎಷ್ಟು ಕಷ್ಟ ನನಗೆ ಅಂತ ನಿಮಗೇ ಗೊತ್ತಿದೆ!

ಅವರನೆಲ್ಲಾ ಒಂದ್‌ನಿಮ್ಷ ಬಿಟ್ಟೆ ಅನ್ನಿ, ನಿದ್ದೆಗಣ್ಣಲ್ಲಿ ಹೋಗಿ ಬಾಗಿಲು ತೆಗೆದ ತಕ್ಷಣ ಹಾಲಿನ ಪ್ಯಾಕೆಟ್‌ ಮುಂದೆ ಚಾಚ್ತಾನಲ್ಲ ಕುಮಾರ ಅವನನ್ನು ಒಂದಿನ ಬಿಡಕ್ಕಾಗತ್ತಾ? ಕಾಫೀ ಟೇಬಲ್‌ಗೇ ನ್ಯೂಸ್‌ ಪೇಪರ್‌ ತರ್ತಾನಲ್ಲ ಕೃಷ್ಣ ಅವನನ್ನೂ ಬಿಡಕ್ಕಾಗಲ್ಲ ತಾನೆ? ಫೋನ್‌ ಮಾಡ್ದತಕ್ಷಣ ಸಾಮಾನು ತಂದ್ಕೊಡ್ತಾನಲ್ಲ ಶ್ರೀನಿವಾಸ ಸ್ಟೋರ್ಸ್‌ನ ಶೇಖರ ಅವನಿಲ್ದೆತಾನೆ ಹೇಗಿರೋದು?

ಹೊಸಿಲುದಾಟಿದ ಕೂಡಲೇ ಮೀಟರ್‌ ತಿರುಗಿಸುತ್ತಾ ‘ಎಲ್ಲಿಗಮ್ಮಾ?’ ಅಂತ ರಿಕ್ಷಾದಿಂದ ಬಗ್ಗಿ ಕೇಳ್ತಾನಲ್ಲ ಡ್ರೈವರ್‌ (ಪಾಪ ಅವನ ಹೆಸರೇ ಕೇಳಿಲ್ಲ ನಾನು!) ಅವನಿಲ್ಲದೆ ಎಲ್ಲಿಗೆ ಹೋಗ್ಲೀ? ಇಬ್ಬನಿ ಬೀಳೋ ಕಾಲ ಶುರುವಾದ ತಕ್ಷಣ ನನ್ನ ಕುಟುಂಬಕ್ಕಾಗೇ ಸ್ಪೆಶಲ್‌ ಅಪಾಯಿಂಟ್ಮೆಂಟ್‌ ಕೊಡ್ತಾರಲ್ಲ ನನ್ನ ಫ್ಯಾಮಿಲಿ ಡಾಕ್ಟರ್‌ ಗಂಗಾಧರ್‌ Oh God ಅವರಿಲ್ದೆ ಇರೋದು ಅಂದ್ರೆ ಅರ್ಥ ಏನ್ರೀ?!

ಹಾಗಾದ್ರೆ ಇದೆಲ್ಲಾ ‘materialistic dependencyನಾ? ಯಾರಾದ್ರೂ ಹಾಗಂತ ಅಂದುಕೊಂಡ್ರೆ ನನ್ನ ದೃಷ್ಟೀಲಿ ಅವರಿಗಿಂತ ಸ್ಟುಪಿಡ್‌ ಬೇರೆಯಾರಿಲ್ಲ ಬಿಡಿ. ನನ್ನ ಅಭಿಪ್ರಾಯದಲ್ಲಿ ಇದು ‘ನೀರಿಗೂ ನೀರಹನಿಗೂ ಇರುವ ಸಂಬಂಧ’ ಅಂತ. ನೀವೇನಂತೀರಿ?

ಅಲ್ಲಾರೀ ನಮ್ಮ ಬಗ್ಗೆ ಈ ತರಹದ ಸಂಶೋಧನೆಗಳನ್ನು ಮಾಡ್ತಾರಲ್ಲ ಇವರುಗಳು ನಮ್ಮನ್ನೇನು ಸೌತ್‌ ಏಷ್ಯಾ ಖಂಡದಲ್ಲಿ ಮಾನ್ಸೂನ್‌ನಲ್ಲಿ ಬೆಳೆಯುವ ಮಿಶ್ರಜಾತಿ ಭತ್ತದ ತಳಿ ಅಂದುಕೊಂಡಿದ್ದಾರೋ ಹೇಗೆ?! ಈ ರೀತಿಯ ರಿಸರ್ಚ್‌ ಮಾಡುವ ಪ್ರೊಫೆಸರ್‌ ಹುಚ್ಚುರಾಯರುಗಳ ಬಗ್ಗೆ, ನಮ್ಮೂರಿನ ಕಡೆ ಚಾಲ್ತಿಯಲ್ಲಿರುವ ಒಂದು ಉಕ್ತಿ ನೆನಪಿಗೆ ಬರುತ್ತೆ ‘‘ಕಳ್ಳನ ಮನಸ್ಸು ಹುಳ್ಳ್‌ ಹುಳ್ಳ್‌ಗೆ!’’ ಅಂತ. ಶ್‌! ಮೆಲ್ಲಗೆ ನಗೋಣ. . . . ಪಾಪ ನಾವು ಹೀಗೆ ನಗೋದನ್ನೇನಾದ್ರು ಆ ಪ್ರೊಫೆಸ್ಸರ್‌ತರಹದವರು ಕೇಳಿಸಿಕೊಂಡ್ರೆ ego ಹರ್ಟ್‌ ಆಗುತ್ತೆ. ಆಮೇಲೆ ಇನ್ನೊಂದು ಇಂತಹದ್ದೇ ಸಂಶೋಧನೆ ಶುರುವಾಗಿಬಿಡುತ್ತೆ ಅಲ್ಲವಾ?!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+