• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೇಳೇ ಗೆಳತಿ, ನಿನ್ನ ಹೆಸರು ನೆನಪಿದೆಯಾ?

By Staff
|

ನಾವುಗಳೆಲ್ಲ ಅವರ ಮಗಳು, ಇವರ ಪತ್ನಿ, ಇಂತಹವರುಗಳ ತಾಯಿ. . . .ಇತ್ಯಾದಿ., ಇತ್ಯಾದಿ., ಆಗಿಯೇ ಇರುತ್ತೇವಲ್ಲಾ, ನಾವು ನಾವಾಗುವುದು ಬೇಡವೇ?

ಗಗನ ಸಖಿ

ನನಗೊಂದು ಪತ್ರ ಬಂದಿದೆ. ಆತ 'ಈ ಕಾಲಂ ಹೆಂಗಳೆಯರಿಗೆ ಮಾತ್ರ ಅಂತಿದೆ ಆದರೂ ನಾನು ಓದಿದೆ. . . . . . ." ಅಂತ ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. 'ನಿಮ್ಮ ಗಗನಸಖಿ ಬರೀತಿರೋದು ಹೆಂಗಳೆಯರಿಗೋ ಅಥವಾ ಹೆಂಗೆಳೆಯರಿಗೋ ದಯವಿಟ್ಟು ನೀವೇ ಹೇಳೀಪ್ಪಾ. . ." ಅಂತ ಅವರನ್ನೇ ಕೇಳೋಣಾ ಅಂದ್ಕೊಂಡಿದ್ದೀನಿ. ನೀವೇನಂತೀರ? ಹೌದು, ಗೆಳೆತನಕ್ಕೆ ಲಿಂಗಬೇಧವಿಲ್ಲ, ಯುೌವನದ ಗುಂಗಿಲ್ಲ, ಮುದಿತನದ ಹಂಗಿಲ್ಲ. ಬೇಕಾದ್ದು ಗೆಳೆತನವಷ್ಟೆ. ಓಹೋ, ನೀವೆಲ್ಲಾ ದುರ್ಗದ ಕೋಟೆ ನೋಡಿಬಂದಮೇಲೆ ಮೇಲುಕೋಟೆ ಅಲಮೇಲು ಮಗನ ಹೆಸರು ಹೇಳ್ತೀನಿ ಅಂತ ಹೇಳಿದ್ದೆ ಅಲ್ಲವಾ?

ಹತ್ತು ವರ್ಷದ ಮೇಲೆ ಅವಳನ್ನು ಭೇಟಿಯಾಗಿದ್ದು ಹಿತವೆನಿಸಿತು. ಗೋಕುಲಾಷ್ಟಮಿ, ಆನೆ ಹಬ್ಬ, ಮೂರು ದೋಸೆ ಹಬ್ಬಕ್ಕೆಲ್ಲಾ ಎರಡೆರಡು ದಿನ ಅವರ ಮನೆಯಲ್ಲೇ ಝಾಂಡ ಹಾಕ್ತಿದ್ದನ್ನೆಲ್ಲಾ ನೆನಪು ಮಾಡಿಕೊಂಡೆವು. ಅಬ್ಬ, ಅವಳಪ್ಪ ಅಮ್ಮನ ಸಂಪ್ರದಾಯ, ಮಡಿ ಎಲ್ಲ ಈಗ ನೆನಸಿಕೊಂಡ್ರೇ ಮೈ ಝ್‌ಂ ಅನ್ನುತ್ತೆ! ಜೊತೆಯಲ್ಲೇ ಇದ್ದ ಅವಳ ಮಗನ ಹೆಸರು ಕೇಳಿದೆ. ಅವನು ಅದೇನೋ ಹೇಳಿದ.

ಸರಿಯಾಗಿ ಕೇಳಿಸಲ್ಲಿಲ್ವೇನೋ ಅಂದ್ಕೊಂಡು ಮತ್ತೊಮ್ಮೆ ಕೇಳಿದೆ ಆಗಲೂ ಅದೇ ತರಹ ಹೇಳಿದ. ನಾನು ಪಾಪ ಎಲ್ಲೋ ನಾಲಿಗೆ ಹೊರಳಲ್ಲವೇನೋ ಅಂದುಕೊಂಡು ಹ್ಯಾಪ್‌ಮೋರೆ ಹಾಕ್ಕೊಳ್ಳೋಷ್ಟರಲ್ಲಿ, ಅಲಮೇಲುನೇ ಹೇಳಿದ್ಲು 'ಅವನ ಹೆಸರು ಅಕಿಕ್ರಾ ಚಿನೋವಾ ಅಖಿಬೆ" ಅಯ್ಯೋ ಆ ಹುಡುಗನದು ಪಕ್ಕಾ ಇಂಡಿಯನ್‌ ಫ‚ೇಸ್‌, ಹೆಸರು ನೋಡಿದ್ರೆ. . . . .! ನನ್ನ ಕಪ್ಪೆ ಬುದ್ಧಿ ಎಲ್ಹೋಗತ್ತೆ ಹೇಳಿ? 'ಏನೂ ಪ್ರಾಬ್ಲಂ ಇಲ್ಲದೆ ನಿಮ್ಮನೆಲಿ ಒಪ್ಪಿಕೊಂಡ್ರಾ?" ನನ್ನ ಮನಸಿನ್ನಲ್ಲಿ ಅವಳು ಯಾರೋ ಜಪಾನೀನೋ ಚೈನೀನೋ ಪ್ರೇಮ ವಿವಾಹ ಮಾಡಿಕೊಂಡಿರಬೇಕು ಅಂತ. . . .ಜೋರಾಗಿ ನಗುತ್ತ ಅವಳೇನಂದ್ಲು ಗೊತ್ತಾ? 'ಅಯ್ಯಯ್ಯೋ ಹಾಗಂದ್ರೇನೆ? ಮೊದಲೇ ಗೊತ್ತಾಗಿದ್ದ ಹಾಗೆ ನಮ್ಮ ಸೋದರತ್ತೆ ಮಗ ಅರ್ಚಕ ರಾಘವನ ಜೊತೆಗೇ ನನ್ನ ಮದುವೆ ಆಗಿರುವುದು. ಹೆಣ್ಣು ಮಗು ಆಗಿದಿದ್ದ್ರೆ ಆಫಿ‚್ರಕಾ ದೇಶದ ಯಾವುದೋ ಹೂವಿನ ಹೆಸರು ಇಡೋದು ಗಂಡಾದ್ರೆ ಈ ಹೆಸರು ಇಡಬೇಕು ಅಂತ ನಮ್ಮೆಜಮಾನ್ರು ಮೊದಲೆ ಅಂದ್ಕೊಂಡಿದ್ದ್ರಂತೆ. ಅಯ್ಯೋ, ಹೆಸರಿನಲ್ಲೇನಿದೆ ಅಂತ ನಾನೇನೂ ಹೇಳಲಿಲ್ಲ " ಅಂದಳು. ಮಾತನಾಡಿದೆವು. . . ನಕ್ಕೆವು. . .ನಮ್ಮ ನಮ್ಮ ಮನೆಯ ದಾರಿ ಹಿಡಿದೆವು.

ಬೇರೆ ಯಾರೇ ಆಗಿದಿದ್ದ್ರೂ ಆ ದಂಪತಿಗಳ 'ವಿಶ್ವಮಾನವತಾ' opinion ಅನ್ನು ಹಾಡಿ ಹೊಗಳ್ತಿದ್ದ್ರೇನೋ, ಆದರೆ ನನ್ನ ಮನಸ್ಸು ಒಂತರಹಾ ರೊಚ್ಚಿಗೆದ್ದಿತ್ತು. ಅವಳಾಡಿದ ಒಂದು ಮಾತು ನನ್ನನ್ನು ಕೊರಿತಾಯಿತ್ತು. 'ಹೆಸರಿನಲ್ಲೇನಿದೆ" ಛೆ, ನಮ್ಮ ಹೆಂಗಸರಿಗೆ ತಮ್ಮ ಹೆಸರಿನ ಬಗ್ಗೆಯೂ ಮಮಕಾರವೇ ಇಲ್ಲವಾ? ಖಂಡಿತವಾಗಿಯೂ ಅವರಿಗೆ ಅವರ ಹೆಸರಿನ ಬಗ್ಗೆ ಆಸ್ಥೆ ಇಲ್ಲ ಅಂತಾನೇ ಅನ್ನಿಸಿತು.

ಮೂರ್ತಿ ಚಿಕ್ಕಪ್ಪನ ಮಗಳು ಶಿಲ್ಪ. ಚಿಕ್ಕವಳಿದ್ದಾಗ ಪುಟ್ಟಿ, ಚಿನ್ನು ಆಗಿದ್ಲು. ಕಾಲೇಜ್‌ಗೆ ಬಂದ ಮೇಲೆ ಮಿಸ್‌.ಮೂರ್ತಿ ಆದ್ಲು. ಮದುವೆ ಗೊತ್ತಾದ ಮೇಲೆ ಗಂಡಿನ ಮನೆಯವರು ರೇಖ ಅಂತ ಹೆಸರು ಬದಲಾಯಿಸಿದರು. ವಿವಾಹದ ನಂತರ ಸ್ವೀಡನ್‌ಗೆ ಹೋಗ್ಬೇಕಾಗಿತ್ತು. ಪಾಸ್‌ ಪೋರ್ಟ್‌ನಲ್ಲಿ ಅವಳ ಗಂಡನ ಹೆಸರಿನ ಜಾಗದಲ್ಲಿ ಮಾವನ ಹೆಸರು ಬಂದು ಈಗ ಅವಳ ಹೆಸರು ಮಿಸೆರ್ಸ್‌.ಸುಬ್ಬಣ್ಣ ಆಗಿದೆ! ಪುಟ್ಟಿ, ಚಿನ್ನು, ಮೂರ್ತಿ, ರೇಖ, ಪ್ರವೀಣ (ಆಕೆಯ ಗಂಡನ ಹೆಸರು) ಏನೂ ಆಗದ ಶಿಲ್ಪ ತನ್ನ ಮೂಲಭೂತ ಪರಿಚಯವನ್ನೇ ಬಿಟ್ಟುಕೊಟ್ಟವಳು.

ಮದುವೆಯಾದ ತಕ್ಷಣ ಯಾವಾಗ್ಲೂ ಖುದ್ದಾಗಿ ನಾವೇ ಶ್ರೀಮತಿ so and so ಆಗಿಬಿಡ್ತೀವಿ ಯಾಕೆ ಹೀಗೆ? ಸಂಸಾರ ಒಂದು team work ಒಪ್ಪಿಕೊಳ್ಳೋಣ, ಆದರೆ ಕಡೇಪಕ್ಷ ಹೆಸರೂ ನಮ್ಮದಲ್ಲವಾ? ಒಂದ್ಸಲಾನಾದ್ರು ನಮ್ಮ ಹೆಸರನ್ನು ನಾವೇ ಕೇಳಿಸಿಕೊಂಡು ಅದರ ಮಾಧುರ್ಯವನ್ನು, ಅದು ನಮಗೆ ಕೊಡುವ ಆತ್ಮ ವಿಶ್ವಾಸವನ್ನು ಅನುಭವಿಸಿದ್ದೇವಾ? ಅವರ ಮಗಳು, ಇವರ ಪತ್ನಿ, ಇಂತಹವರುಗಳ ತಾಯಿ. . . .etc., etc., ಆಗಿಯೇ ಇರುತ್ತೇವಲ್ಲಾ, ನಾವು ನಾವಾಗುವುದು ಬೇಡವೇ?

ನಮ್ಮೂರಿಗೆ ಟೀವಿ ಬಂದ ಹೊಸತು, ಒಬ್ಬ ಇಂಗ್ಲೀಷ್‌ ವಾರ್ತಾ ವಾಚಕಿ ಮಿಸೆರ್ಸ್‌.ಅಯ್ಯರ್‌ ಅಂತ ಇದ್ದರು. ಅವರು ಎರಡು ಬಾರಿ ಮದುವೆಯಾಗಿ ಡೈವೋರ್ಸ್‌ ಆಗಿದ್ದರೂ ಮಿಸೆರ್ಸ್‌.ಅಯ್ಯರ್‌ಆಗೇ ಇದ್ದರು. ಯಾವ ಪುರುಷಾರ್ಥಕ್ಕೊ ಗೊತ್ತಿಲ್ಲ! ನಿಮಗೀಗ ಆಕೆಯ ಹೆಸರು ನೆನಪಾಗುತ್ತಿದೆ ತಾನೆ? ಎಷ್ಟು beautiful ಆಗಿದೆ ಅಲ್ಲವಾ? ನಮ್ಮ ಸಾಮಾಜಿಕ ಸ್ಥಾನ ಮಾನ ನಿರ್ಭರ ಆಗೋದು ನಮ್ಮ ಹೆಸರಿನ ಹಿಂದೆ-ಮುಂದೆ 'ಗಂಡು ಟ್ಯಾಗ್‌" ಇದ್ದರೆ ಮಾತ್ರಾನಾ? ನಮ್ಮ identity ಬರುವುದು ಬರೀ surname ಇದ್ದರೆ ಮಾತ್ರಾನಾ?

ನನಗಂತೂ ನನ್ನ ಹೆಸರು ಬಲು ಅಪ್ಯಾಯಮಾನ. ಬೇರೆಯವರಿಗೆ ಏನೇ ಅನ್ನಿಸಿದರೂ ನನಗೆ ಅದು ಅತಿ ಮಧುರ. ಪ್ರತೀ ಬಾರಿ ಅದು ನನ್ನ ಕಿವಿಗೆ ಬಿದ್ದಾಗ ಹತ್ತು ವರ್ಷಗಳ ಹಿಂದಿನ ಲವಲವಿಕೆ, confidence ಬಂದ್‌ಹಾಗೆ ಅನ್ನಿಸುತ್ತೆ. ಬೇಕಾದ್ರೆ ನೀವು ನಿಮ್ಮ ಹೆಸರನ್ನು ಹೇಳಿಕೊಂಡು ನೋಡಿ, ಕರೆದು ಕೊಂಡು ನೋಡಿ, ಕೇಳಿಕೊಂಡು ನೋಡಿ, ನೀವೆಷ್ಟು ನೀವಾಗ್ತೀರ ಅಂತ ಗೊತ್ತಾಗುತ್ತೆ! 'ನೀನ್ಯಾಕೋ ನಿನ್ನ ಹಂಗ್ಯಾಕೋ. . . ನಿನ್ನ ನಾಮದ ಬಲ ಒಂದಿದ್ದರೆ ಸಾಕೋ" ಅಂತ ಹೊಗಳಿಸಿಕೊಳ್ಳ್ತಾನೆ. ಒಂದ್ಸಲಿ ಅವನ ಹೆಸರು ಹೇಳಿದಕ್ಕೇ ಅಜಾಮಿಳನಿಗೆ ಒಲಿದನಲ್ಲ ಪರಮಾತ್ಮ, ನಿರಾಕಾರನಾದ ಅವನಿಗೇ ಅವನ ಹೆಸರ ಮೇಲೆ ಎಷ್ಟೊಂದು ವ್ಯಾಮೋಹ! ಆಕಾರ ಇರುವ ನಮಗ್ಯಾಕೆ ಇರಬಾರದು?!

ದೊಡ್ದವರು ಬರೆದಿದ್ದಾರೆ, ಹೇಳಿದ್ದಾರೆ, ಹೇಳ್ತಾನೇ ಇರ್ತಾರೆ 'ಹೆಣ್ಣು ತ್ಯಾಗ ಮೂರ್ತಿ, ಅವಳಿರುವುದೇ ಕೊಡುವುದಕ್ಕೆ ಅಂತ" ಇದನ್ನೇ ನಂಬಿಕೊಂಡ ನಾವು ಕೊಡ್ತಾನೇ ಇರ್ತೀವಿ ಕೊನೆಗೆ ನಮ್ಮ ಹೆಸರನ್ನೂ. . . .ನಮಗೆ ಅಪರಿಮಿತವೇ ಮಿತ! ಹೌದು, ನಾವು ಹೆಂಗಸರೇ ಹೀಗೆ!

ನಿಮಗೊಂದು ಗುಟ್ಟು ಹೇಳ್ಲಾ? ನನನ್ನು ಯಾರಾದರು ಹೆಸರು ಹಿಡಿದು ಕರೆದರೆ I just fall in love with him. ಅಂದಹಾಗೆ, ಈ ಗುಟ್ಟು ನಿಮಗಾಗಿ ಮಾತ್ರ! ನಗ್ತಿದ್ದೀರಾ? ಹೀಗೇಯೇ ನಿಮ್ಮ ಹೆಸರಿನ ಜೊತೆ ನಗ್ತಾನೇಯಿರಿ. . . . ನನ್ನ ಒಬ್ಬ ಗೆಳೆಯನ ಪರಿಚಯ ಮಾಡಿಕೊಡ ಬೇಕು ನಿಮಗೆ. Of course ಅವನ ಹೆಸರೂ ಹೇಳ್ತೀನಿ. ಆದರೆ, ನಿಮ್ಮ ಹೆಸರು ನಿಮಗೆಷ್ಟು ಇಷ್ಟವಾಯಿತು ಅಂತ ನೀವು ನನಗೆ ಬರೆದರೆ ಮಾತ್ರ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more