ಶ್ವೇತಾಭವನದಲೀ..ಹೂವಿಗೆ ಬಣ್ಣತಂದವನೆ..ಒಲವೆ ಮಿಸ್‌ಮಯಾ!

Mungaru Male and America President George Bush couples!ಸರಿ ಮತ್ತೆ, ಇನ್ನೊಂದಿನ ಈ ನಿನ್ ಫಿಲಮ್ಮೂ ಅದೇ ಟಿವಿಯಲ್ಲಿ ಬರ್‍ತದೆ, ಅದ್ರಲ್ಲೇ ನೋಡಿದ್ರಾಯ್ತು!"

ಛೇ ಛೇ. ದೊಡ್ಡ ಸ್ಕ್ರೀನಲ್ಲಿ ನೋಡ್ಬೇಕ್ರೀ... ವಾಟರ್‌ಫಾಲ್ಸ್ ಎಲ್ಲ ಎಷ್ಟು ಚೆನ್ನಾಗಿ ತೋರ್‍ಸಿದ್ದಾರಂತೆರೀ ಐ ಡೋನ್ ವಾನ್ನಾ ಮಿಸ್ಸಿಟ್..."

ವಾಟರ್‌ಫಾಲ್ಸ್ ನೋಡೋದಕ್ಕೆ ಮೂವಿಗ್ ಯಾಕ್‌ಹೋಗ್ತೀ? ಮೊನ್ನೆ ತಾನೆ ಹೋಗಿದ್ವಲ್ಲ ಮಕ್ಳನ್ನೂ ಕರ್ಕೊಂಡು ನಯಾಗರಾ ಫಾಲ್ಸ್‌ಗೆ?"

ಅಲ್ಲಾರೀ ನಮ್ಮ ನಯಾಗರಾಕ್ಕಿಂತಲೂ ಚಂದದ ಜೋಗ್‌ಫಾಲ್ಸ್ ಅಂತ ಇಂಡಿಯಾದಲ್ಲಿದೆ ಅದನ್ನು ಬ್ಯೂಟಿಫುಲ್ಲಾಗಿ ತೋರಿಸಿದ್ದಾರಂತೆರೀ..."

ಅಷ್ಟೊತ್ತಿಗೆ ಬುಶ್‌ಗೆ ಲೈಟಾಗಿ ಸ್ವಲ್ಪ ತೀರ್ಥಸೇವನೆ ಆಗಬೇಕೆಂದು ನೆನಪಾಗಿ ತನ್ನ ಫೇವೊರಿಟ್ ಡ್ರಿಂಕ್ ವೋಡ್ಕಾವನ್ನು (ರಷ್ಯಾಧ್ಯಕ್ಷ ಪುಟಿನ್ ಇತ್ತೀಚೆಗೆ ಸ್ವಲ್ಪ ಹೆಚ್ಚೇ ಪುಟಿದು ಕಿರಿಕಿರಿಮಾಡುತ್ತಿರುವುದನ್ನು ನೆನೆದು ಕಸಿವಿಸಿಯಾದರೂ) ಗ್ಲಾಸಿಗೆ ಬಗ್ಗಿಸಿ ಗುಟುಕಷ್ಟೇ ಹೀರಿ,

ಕುಡಿದಾಗ ನೀನು ಯದ್ವಾತದ್ವಾ ಬ್ಯೂಟಿಫುಲ್ಲಾಗಿ ಕಾಣಿಸ್ತೀಯಾ..." ಎಂದ!

ಬೇಕಂತಲೇ ಟಾಪಿಕ್ ಬದಲಾಯಿಸುವ ಹುನ್ನಾರ ಬುಶ್‌ನದು. ಆದರೆ ಲಾರಾಳದ್ದು ಒಂದೇ ಹಟ. ಮುಂಗಾರು ಮಳೆ ನೋಡ್ಬೇಕು, ಮಳೆಯಲ್ಲಿ ನೆನೀಬೇಕು... ಅಂತ, ಮಕ್ಕಳ ಹಾಗೆ. ಬೈಗಿನ ಹೊತ್ತಲ್ಲಿ ಕಥೆ ಹೇಳಿ ಕಥೆ ಹೇಳಿ ಎಂದು ಮುದ್ದಣನನ್ನು ಆ ಮನೋರಮೆ ಎಂತು ಪೀಡಿಸಿದ್ದಳೋ ಅದೇ ಮಾದರಿಯಲ್ಲಿ ಬುಶ್‌ನನ್ನು ತಿವಿಯುತ್ತಿದ್ದಾಳೆ ಲಾರಾ.

ನೋಡೀ, ಮೂವೀ ನೋಡದೇನೆ ಆವಾಗ್ಲೇ ಅದರದೊಂದು ಡಯಲಾಗೂ ಉದುರಿತಲ್ಲ ನಿಮ್ಮ ಬಾಯಿಂದ! ದಟ್ ಮೀನ್ಸ್ ಯು ಆಲ್ಸೊ ವಾಂಟ್ ಟು ಸೀ ದ ಫಿಲಂ..."

ಹೋಗಲಿ, ಯಾರಂತೆ ಹೀರೊಯಿನ್ನು...?" - ಬುಶ್‌ಗೆ ಸಹಜವಾಗಿಯೇ ಹೀರೊಯಿನ್ ಯಾರು, ಆಕೆ ಎಷ್ಟು ಚಂದದ ಫಿಗರ್ರು ಎಂಬ ಕುತೂಹಲ.

ಸಂಜನಾ ಗಾಂಧಿ ಅನ್ನೋವ್ಳು ಯಾರೊ..."

ಓಹ್ ಗಾಂಢಿ ಗೊತ್ತು ನನಗೆ. ಮಹಾಟ್ಮಾ ಗಾಂಢಿ, ಇಂಡಿರಾ ಗಾಂಢಿ... ಗ್ರೇಟ್ ಪರ್ಸನಾಲಿಟೀಸ್! ಅವರ ಬಗ್ಗೆ ಕೇಳಿ/ಓದಿ ಗೊತ್ತು. ಅವರ ಪೈಕಿಯವ್ಳೇ ಇರ್ಬಹುದು ಈಕೇನೂ... ಮತ್ತೆ ಈ ಗಾಂಢಿಗೂ ಆಸ್ಕರ್ ಅವಾರ್ಡ್ ಬರುತ್ತಾ ಹೇಗೆ?"

ಗಾಂಢಿ ಅಲ್ಲಾರೀ ಅದು ಗಾಂಧಿ. ಇರಲಿ, ಅವ್ಳೇನೂ ಚೆನ್ನಾಗಿಲ್ಲಾ ಅಂತೆ. ಹೀರೋ ಗಣೇಶ್ ವೆರಿ ಸ್ಮಾರ್ಟ್ ಅಂತೆ. ಅದಕ್ಕೇ ಅದು ಮುಂಗಾರು male! ನನ್ನ ಕನ್ನಡಫ್ರೆಂಡ್ ಹೇಳ್ತಿದ್ರು... ಅದಲ್ದೇ ಫಿಲಂಸ್ಟೋರೀಲಿ ರಿಟೈರ್ಡ್ ಕರ್ನಲ್ಲು, ಮದುವಣಿಗ ಸೋಲ್ಜರು ಎಲ್ಲ ಇದ್ದಾರಂತೆ. ನಿಮ್ಮ ಇರಾಕ್ ವಾರ್ ಸ್ಟ್ರಾಟೆಜಿಗೆ ಸ್ವಲ್ಪ ಐಡಿಯಾಸ್ ಸಿಗಬಹುದು ಅವರನ್ನು ನೋಡಿ..."

ಅಷ್ಟೊತ್ತಿಗೆ ಟೆಲಿಫೋನ್ ಗಂಟೆ ಬಾರಿಸಿತು. ಫೋನೆತ್ತಿದ ಬುಶ್‌ನಿಂದ ರೈಸ್!" ಎಂದು ಉದ್ಗಾರ.

ಹೌದು, ಕುಕ್ಕರ್‌ನಲ್ಲಿ ಅನ್ನಕ್ಕಿಡ್ತೇನೆ. ನಿನ್ನೆಯದ್ದೇ ಹುಳಿ ಹೇಗೂ ಇದೆ. ಬೇಕಿದ್ರೆ ಕರ್ಡ್‌ರೈಸ್ ಮಾಡ್ತೇನೆ, ಬಾಳ್ಕಮೆಣ್ಸು ಕರೀತೇನೆ..." ಲಾರಾ ಎಂದಳು ಕಿಚನ್ ಕಡೆ ನಡೆಯುತ್ತ.

ರೈಸ್ ಅಂದ್ರೆ ಅದಲ್ವೇ, ಕಾಂಡಲೀಸಾ ರೈಸ್ ಫೋನ್‌ಲೈನಲ್ಲಿರೋದು. ಸೆಕ್ರೆಟರಿ ಆಫ್ ಸ್ಟೇಟ್. ಇಂಪಾರ್ಟೆಂಟ್ ವಿಷಯ ಮಾತಾಡೋದಿದೆ. ಮಂಗರುಮೇಲ್‌ಗೆ ನೀನು ಹುಡುಗಿಯರಿಬ್ರನ್ನೂ ಕರ್ಕೊಂಡ್ ಹೋಗು. ನೆಕ್ಸ್ಟ್ ಇಯರ್ ಹೇಗೂ ರಿಟೈರ್ ಆಗಿರ್ತೇನೆ. ಮಂಗರು ಫಿಮೇಲ್ ಮೂವಿ ಬಂದ್ರೆ ಆಗ ನೋಡ್ತೇನೆ..." ಎಂದ ಬುಶ್ ಫೋನ್ ಸಂಭಾಷಣೆ ಮುಂದುವರಿಸಿದನು.

ಲಾರಾ ಬುಶ್ ತನ್ನಿಬ್ಬರು ಅವಳಿಮಕ್ಕಳಾದ ಜೆನ್ನಾ ಮತ್ತು ಬಾರ್ಬರಾರನ್ನು ಕರಕೊಂಡು ಥಿಯೇಟರ್‌ಗೆ ಹೋದಳು. ಪ್ರಪ್ರಥಮಬಾರಿಗೆ ಕನ್ನಡ ಸಿನೆಮಾ ಮುಂಗಾರುಮಳೆ ವೀಕ್ಷಿಸಿ ಅವರೆಲ್ಲ ಅತ್ಯಂತ ಖುಶಿಪಟ್ಟರು... ಮಳೆಯಲ್ಲಿ ತೊಯ್ದುತೊಪ್ಪೆಯಾದರು... ಹಾಡುಗಳನ್ನು ಗುನುಗಿದರು... ವನ್‌ಲೈನರ್ ಡಯಲಾಗುಗಳನ್ನು ಉದುರಿಸತೊಡಗಿದರು...

ಅದ್ರಲ್ಲಿರೋ ವ್ಹೈಟ್ ರಾಬಿಟ್ ದೇವದಾಸನಂಥದ್ದು ನಮಗೂ ಬೇಕು! ಕೊರಳಲ್ಲಿ ಬೆಲ್ ಕಟ್ಟಿದ್ದೂ ಇರಬೇಕು!" ಎಂಬ ಜೆನ್ನಾ-ಬಾರ್ಬರಾ ಹಟವನ್ನು ನಿಭಾಯಿಸುವ ಸರದಿ ಈಗ ಲಾರಾ ಬುಶ್‌ಳದು! ಅವಳು ಅದಕ್ಕೆ "ಶ್ರೀ ಗಣೇಶಾಯನಮಃ" ಎಂದುಬಿಟ್ಟಿದ್ದಾಳೆಂದು ತಡವಾಗಿ ಬಂದ ವರದಿ ತಿಳಿಸಿದೆ.

*

ಈ ಪ್ರಹಸನವು ನಿಮ್ಮ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ ಇದರಲ್ಲಿನ ಯಾವ ಸಂಭಾಷಣೆ/ಸನ್ನಿವೇಶ/ವಿವರಣೆ ಅತಿಹೆಚ್ಚು ನಗೆಯುಕ್ಕಿಸಿತು ಎನ್ನುವುದನ್ನು ಬರೆದು ತಿಳಿಸಿ.

ವಿಳಾಸ - [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+