ನಮ್ಮ ಓದುಗರಿಗೆ ಕೋಟಿಗಟ್ಟಲೆ ವಂದನೆ-ಶಾಮ್

ಪ್ರಿಯ ಓದುಗ, ಸಸ್ನೇಹ ನಮಸ್ಕಾರ.

ಫಿಲ್ಮಿಬೀಟ್! ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲವೇ. ಹೌದು. ನಮ್ಮ ಒನ್ ಇಂಡಿಯ ಅಂತರ್ಜಾಲದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪುಟಿದೆದ್ದು ಬಂದ ಸಿನಿ ವಾಹಿನಿಯ ಹೆಸರು ಫಿಲ್ಮಿಬೀಟ್. ಕಳೆದ ಒಂದು ತಿಂಗಳಿನಿಂದ ನೀವು ನೋಡುತ್ತಿದ್ದೀರಿ, ಓದುತ್ತಿದ್ದೀರಿ, ಪ್ರತಿಕ್ರಿಯಿಸುತ್ತಿದ್ದೀರಿ.

ಈ ಪತ್ರ ಬರೆಯಲು ಕಾರಣ, ಬಿಡುಗಡೆಗೊಂಡ ಮೊದಲ 30 ದಿನದಲ್ಲಿ ಫಿಲ್ಮಿಬೀಟ್ ವೆಬ್ ಸೈಟ್ ಗಳಿಸಿದ ಅಭೂತಪೂರ್ವ ಬೆಂಬಲದ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು, ನಿಮಗೆ ಧನ್ಯವಾದಗಳನ್ನು ಹೇಳುವುದು. ಒನ್ ಇಂಡಿಯದ ವಿವಿಧ ಭಾಷೆಯ ತಾಣಗಳ ಸಿನಿ ಮನರಂಜನೆಯ ವಿಭಾಗಗಳು ಒಟ್ಟಾಗಿ ಮೈದಾಳಿದ ಫಿಲ್ಮಿಬೀಟ್ ತಾಣದಲ್ಲಿ ಮಹಾಜನತೆ ವೀಕ್ಷಿಸಿದ ಪುಟಗಳ ಒಟ್ಟು ಸಂಖ್ಯೆ ನೂರು ದಶಲಕ್ಷ. ಬರೋಬ್ಬರಿ 10 ಕೋಟಿ.

S.K. Shama Sundara, Editor
ಫಿಲ್ಮಿ ಬೀಟ್ ನಲ್ಲಿ ಎಂದಿನಂತೆ ಪ್ರಧಾನವಾಗಿ ಕನ್ನಡ ಸಿನಿ ಸಮಾಚಾರಗಳು, ಚಲನಚಿತ್ರ ವಿಮರ್ಶೆಗಳು, ಚಿತ್ರರಂಗದ ಆಗುಹೋಗುಗಳು, ಹಗರಣಗಳು, ಪ್ರಕರಣಗಳು, ಹುಟ್ಟುಹಬ್ಬಗಳು, ಸಂದರ್ಶನಗಳು ಹಾಗೂ ನೀವು ತಪ್ಪದೆ ನೋಡುವ ಕಿರುತೆರೆಗಳಲ್ಲಿ ಕಾಣುವ ಕಲರವಗಳು! [ಫಿಲ್ಮಿಬೀಟ್ ಚಿತ್ರಲಹರಿ]

ಇದೆಲ್ಲ ಇದ್ದದ್ದೇ, ಮುಖ್ಯವಾಗಿ ನಮ್ಮ ಓದುಗರ ಕಣ್ಣು ಗಾಸಿಪ್ಪುಗಳ ಮೇಲೆ ನೆಟ್ಟಿರುತ್ತದೆ. ಅದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿ, ಸ್ವಲ್ಪ ಗಾಳಿಸುದ್ದಿಗಳು ಇರ್ತವೆ. ಪ್ರಮುಖವಾಗಿ ಗಾಳಿ ಸುದ್ದಿಗಳು ಬಾಲಿವುಡ್ ಸಿನಿಮಾಗಳ ಜೀವಾಳವಾಗಿರ್ತವೆ. ಕೆಲವು ಸಿನಿಮಾಗಳು ನೋಡುವುದಕ್ಕೆ ಚೆನ್ನಾಗಿರ್ತವೆ, ಇನ್ನು ಕೆಲವು ಹಾಗಲ್ಲ. ಅದರ ನಿರ್ಮಾಣದ ಬಗ್ಗೆ ಓದುವುದೇ ಒಂದು ಮಜಾ.

ಮೂವತ್ತು ದಿನಗಳಲ್ಲಿ ಕೋಟ್ಯಂತರ ವೀಕ್ಷಕರು ನಮ್ಮ ಚಿತ್ರ ಸುದ್ದಿ ಬಿಂಬಗಳನ್ನು ಕಂಡು ಆನಂದಿಸಿದ್ದಾರೆ, ಟೀಕಿಸಿದ್ದಾರೆ. ಅವಿರತವಾಗಿ ಸುದ್ದಿ ಸದ್ದುಗಳನ್ನು ಸರಬರಾಜು ಮಾಡುತ್ತಿರುವ ನಮ್ಮ ಬೆನ್ನು ತಟ್ಟಿದ್ದಾರೆ. ಓದುಗರ ಅಭಿಮಾನಕ್ಕೆ, ಮೆಚ್ಚುಗೆ ವ್ಯಕ್ತಪಡಿಸಿದ ಕಲಾವಿದರಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ, ಛಾಯಾಚಿತ್ರಕಾರರಿಗೆ, ಸಾರ್ವಜನಿಕ ಸಂಪರ್ಕ ವೀರರಿಗೆ ನಮ್ಮ ವೆಬ್ ಬಳಗದ ವತಿಯಿಂದ ಕೋಟಿಗಟ್ಟಲೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. ನಿಮ್ಮ ವಿಶ್ವಾಸಿ - ಶಾಮ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+