ಇವರಿಗೆ ನೋಟು ಬೇಡ, ನೋಟಿನ ಮೇಲಿನ ಫೋಟೋ ಸಾಕು!

Posted By: ಶಾಮ್
Subscribe to Oneindia Kannada

Dr. H.Narasimhaiah (1920-2005) was the President of the National Education Society of Karnataka which is founded being inspired by nationalistic ideals - ಹೀಗೆ ಆರಂಭವಾಗುವ ಅವರ ವ್ಯಕ್ತಿ ವಿವರಗಳನ್ನು ವಿಕಿಪೀಡಿಯದಲ್ಲಿ ಈಗ ಓದುತ್ತಿದ್ದೆ.

ಪ್ರೊ. ಎಚ್ ಎನ್ ಅವರು ಗೌರಿಬಿದನೂರಿನ ಸರಕಾರಿ ಶಾಲೆಯಲ್ಲಿ ಕಲಿಯುತ್ತಾ ಕಲಿಯುತ್ತಾ ಕೊನೆಗೆ ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ ಪಿಎಚ್ ಡಿ ಪಡಕೊಂಡ್ರು. ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಅದೆಷ್ಟೋ ವಿದ್ಯಾರ್ಥಿಗಳಿಗೆ ವಿಷ್ಯ ತಿಳಿಸಿಕೊಟ್ರು. ಜತೆ ಜತೆಗೆ, ನ್ಯಾಷನಲ್ ಎಜುಕೇಷನ್ ಸೊಸೈಟಿಯನ್ನು ಕಟ್ಟಿದರು, ಬೆಳೆಸಿದರು, ಪಾಲಿಸಿದರು, ಪೋಷಿಸಿದರು.

ಪಾಠಮಾಡುವಾಗ ಪ್ರಾಧ್ಯಾಪಕ, ಪ್ರವಚನ ಮಾಡುವಾಗ ಮೂಢನಂಬಿಕೆಗಳ ವಿರೋಧಿ, ಮಲಗುವಾಗ ಚಾಪೆ, ತಿನ್ನುವಾಗ ಉಪ್ಪಿಟ್ಟು, ನಂಗೆ ಇಷ್ಟ.

ಇವತ್ತು ಅವರ ಹುಟ್ಟಿದ ದಿನವೂ ಅಲ್ಲ, ಜಯಂತಿಯೂ ಅಲ್ಲ. ಅನೇಕರ ಬಾಯಲ್ಲಿ, ಮನದಲ್ಲಿ ಗಾಂಧೀ ನೋಟುಗಳೇ ಇರುವಾಗ ಇವರ ಕೈಯಲ್ಲಿ ಮಹಾತ್ಮಾ ಗಾಂಧೀ ಫೋಟೋ ಕಂಡು ನಿಮಗೂ ತೋರಿಸಬೇಕೆನಿಸಿತು. [ಹೀಗಿದ್ದರು ನಮ್ಮ ಎಚ್ಚೆನ್ ಮೇಷ್ಟ್ರು]

Gandhian H Narasimhaiah remembered on Facebook

***

ಫೇಸ್ ಬುಕ್‌ನಲ್ಲಿ ಬಂದಿರುವ ಕಾಮೆಂಟುಗಳು ಒಂದಕ್ಕಿಂತ ಒಂದು ಆಸಕ್ತಿದಾಯಕವಾಗಿವೆ. ಕೆಲವನ್ನು ಹೆಕ್ಕಿ ಇಲ್ಲಿ ನೀಡಿದ್ದೇವೆ, ಮುಂದೆ ಓದಿಕೊಳ್ಳಿ. ಉಳಿದವನ್ನು ಫೇಸ್ ಬುಕ್ಕಿನಲ್ಲಿ ಓದಿರಿ.

Anand Ramamurthy : Thank you for sharing. I am a student of National High School & National College. We used meet him regularly on school & college premises. He was always happy to stop and talk to us. He was also my father's hostel mate during their college days in the 40s. Even now my father remembers those days where poverty was kind of the norm. But, they all looked forward to a bright future.

Prathibha Nandakumar : ಗಾಂಧಿಯವರು ಬೆಂಗಳೂರಿಗೆ ಬಂದಿದ್ದಾಗ "ಇಲ್ಲಿ ಯಾರಿಗಾದರೂ ಹಿಂದಿ ಬರುತ್ತದೆಯೇ ?" ಎಂದು ಕೇಳಿದರು. ಆಗ ಬಾಲಕ ನರಸಿಂಹಯ್ಯ "ತೋಡಾ ತೋಡಾ ಆತಾ ಹೈ" ಅಂದಿದ್ದಕ್ಕೆ ಅವನನ್ನು ಪಕ್ಕಕ್ಕೆ ಕರೆಸಿಕೊಂಡು ಹೆಗಲ ಮೇಲೆ ಕೈ ಹಾಕಿ ಮಾತಾಡಿಸಿದರಂತೆ... ಆ ಫ಼ೋಟೋ ಇದು. ಎಚ್ ಎನ್ ಬಗ್ಗೆ ಟಿ ಎಸ್ ರಂಗ ಮಾಡಿದ ಸಾಕ್ಷ್ಯ ಚಿತ್ರಕ್ಕೆ ಚಿತ್ರಕಥೆ ನಿರೂಪಣೆ ಬರೆದು ಜೊತೆಗೆ ರಂಗನಿಗೆ ಅಸಿಸ್ಟೇಂಟ್ ಆಗಿ ಕೆಲಸ ಮಾಡಿದೆ ನಾನು.

ಆಗ ಎಚ್ ಎನ್ ತಮ್ಮ ವಿಲ್ ಪ್ರಕಾರ ತಾವು ಹೇಳಿದ ಹಾಗೆ ಶವ ಯಾತ್ರೆಯನ್ನೂ ಶೂಟ್ ಮಾಡಿ ನನ್ನ ಶವಯಾತ್ರೆಯನ್ನು ನಾನೇ ನೋಡಬೇಕು ಅಂತ ಹಠ ಮಾಡಿದರು. ರಂಗ ಮಾಡಲ್ಲ ಅಂದಿದ್ದಕ್ಕೆ ಆ ಬಗ್ಗೆ ಜಗಳ ಆಡಿ ಒಂದು ವಾರ ಎಚ್ ಎನ್ ರಂಗನ ಜೊತೆ ನನ್ನ ಜೊತೆ ಮಾತಾಡಲಿಲ್ಲ. ಆಮೇಲೆ ನಾನೇ ಗೋಗರೆದ ಮೇಲೆ ಸರಿ ಹೋದರು. ಸಾಕ್ಷ್ಯ ಚಿತ್ರಕ್ಕೆ ಅವರ ಆತ್ಮಕಥೆ " ಹೋರಾಟದ ಹಾದಿಯಲ್ಲಿ" ಅಂತಾನೇ ಶೀರ್ಷಿಕೆ ಇಟ್ಟೆವು. ರಂಗ ಅದನ್ನು ನಿಜವಾಗಿ ಹೋರಾಟದ ಹಾದಿಯಲ್ಲಿ - ಎಚ್ ಎನ್ ಜೊತೆ - ಅಂತ ತಮಾಷೆ ಮಾಡ್ಟಿದ್ರು.

Kannappa Shetty Mudiyanuru : Thanks for remembering him. I am happy to be part of his school ( National high school-Mudiyanuru branch, Mulbagal, Kolar district ). Dr.HN was a great philosopher and inspiration to many rural Kannada medium students.

Haleyur Venkatagiriyappa Venugopal : ಈ ಚಿತ್ರ ಕ್ಲಿಕ್ ಮಾಡಿದ್ದು ನಾನು, 2003 ರಲ್ಲಿ ನನ್ನ ಕೊಡೆಕ್ ಕ್ಯಾಮರಾದಲ್ಲಿ. ಇದೊಂದು ಕಾಲೇಜು ವಾರ್ಷಿಕೋತ್ಸವದ ದಿನ, ಅಂದು ಹೆಚ್.ಎನ್. ಒಂದುಕಾಲು ಗಂಟೆ ಮಾತಾಡಿದ್ರು. ನಿಜವಾಗಿ ಅವರ ಕೈಲಿವುದು ಆ ಸಭೆಗೆ ಸಂಬಂಧಪಟ್ಟ ಕಾರ್ಯಕ್ರಮದ ಪಟ್ಟಿ ಇರುವ ಕಾಗದ. ಆನಂತರ ನಾನು ಅದನ್ನು ಫೋಟೋ ಷಾಪ್ (5) ನಲ್ಲಿ ಎಡಿಟ್ ಮಾಡಿ. ಗಾಂಧಿ ಚಿತ್ರವನ್ನು ಕಾಗದದ ಬದಲು ಸೇರಿಸಿ ಪ್ರಚುರ ಪಡಿಸಿದೆ.

ಅವರು ತೀರಿಕೊಂಡ ನಂತರ ಈ ಚಿತ್ರವನ್ನು ನೂರಾರು ಪ್ರತಿಗಳನ್ನು ಮಾಡಿಸಿ ಶ್ರದ್ಧಾಂಜಲಿಯದಿನ ಎಲ್ಲರಿಗೂ ಹಂಚಿದ್ದೆ, ಈಗ ಎಚ್.ಎನ್ ರವರ ಈ ಚಿತ್ರ ಎಲ್ಲರ ಪ್ರೀತಿಯನ್ನು ಪಡೆದಿರುವುದು ನನಗೆ ಸಾವಿರಾರು ಆನಂದಗಳು ಒಟ್ಟಿಗೇ ಬಂದಂತೆ ಆಗಿದೆ. ಇದನ್ನು ಬಳಸುತ್ತಿರುವ ಎಲ್ಲರಿಗೂ ಧನ್ಯವಾದಗಳು. ಡಾ|| ಹೆಚ್.ವಿ.ವೇಣುಗೋಪಾಲ್, ನಿವೃತ್ತ ಪ್ರಾಂಶುಪಾಲರು, ನ್ಯಾಷನಲ್ ಕಾಲೇಜು ಬಸವನಗುಡಿ, ಬೆಂಗಳೂರು,

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gandhian in word and spirit, architect of National Education Society Karnataka, Prof of Physics, Principal of National College, Basavagudi Bengaluru Prof H Narasimhaiah fondly remembered. He led a noble life as cashless king and darling of millions of students, as few of them paying tributes to HN on Facebook.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ