ಒಸಾಮಾ ಬಿನ್ ಲಾಡೆನ್ ಮರಣೋತ್ತರ ಪರೀಕ್ಷೆ ಫಲಿತಾಂಶ

Osama Bin Laden
ಉಗ್ರ ಪ್ರತಾಪಿ ಲಾಡೆನ್ ಅಸುನೀಗಿದ ಘಟನೆಯ ಹಿನ್ನೆಲೆಯಲ್ಲಿ ದಟ್ಸ್ ಕನ್ನಡ ಒಂದು ಸಮೀಕ್ಷೆ ನಡೆಸಿತು. ಲೋಕೋಭಿನ್ನರುಚಿಃ ತತ್ವವನ್ನು ಗಮನದಲ್ಲಿಟ್ಟು ಸಮೀಕ್ಷೆಗೆ ಪ್ರಶ್ನೆಗಳನ್ನು ಆಯ್ದುಕೊಳ್ಳಲಾಗಿತ್ತು. ಒಂದು ಗುಂಡಿ ಒತ್ತುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಎಲ್ಲ ಮತಬಾಂಧವರಿಗೆ ಧನ್ಯವಾದಗಳು.

ಪ್ರಶ್ನೆ 1) ಅವನ ಆತ್ಮಕ್ಕೆ ಶಾಂತಿ ದೊರಕಲಿ. ಸಾವು ಬದುಕಿನ ಆಚೆ ನೋಡುವ ಓದುಗರಿಗಾಗಿ ಪ್ರಶ್ನೆ ಮುಡಿಪಾಗಿತ್ತು. ಈ ದೃಷ್ಟಿಕೋನವನ್ನು ಬೆಂಬಲಿಸಿದವರ ಪ್ರಮಾಣ ಶೇಕಡ 11.5

ಪ್ರಶ್ನೆ 2) ಅವನನ್ನು ಜೀವಂತ ಸೆರೆ ಹಿಡಿಯಬೇಕಾಗಿತ್ತು. ಒಬ್ಬ ವ್ಯಕ್ತಿ ಎಷ್ಟೇ ಕ್ರೂರಿ ಆಗಿರಲಿ, ಕೊಲ್ಲುವುದು ಪಾಪ. ಆತನನ್ನು ಸೆರೆಹಿಡಿದು ವಿಚಾರಣೆಗೆ ಗುರಿ ಮಾಡಬೇಕಾಗಿತ್ತು ಎನ್ನುವುದು ಇನ್ನೊಂದು ದೃಷ್ಟಿಕೋನ. ಇದನ್ನು ಬೆಂಬಲಿಸಿದವರ ಪ್ರಮಾಣ ಶೇಕಡ 36.1

ಪ್ರಶ್ನೆ 3) ಪರಮ ಪಾಪಿಗಳನ್ನು ಹಾಗೆ ಬಿಡಬಾರದು. ಗುಂಡಿಟ್ಟು ಕೊಂದು ಚಿಂದಿ ಮಾಡಬೇಕು. ಅಂಥವರು ಈ ಭೂಮಿಮೇಲೆ ಬದುಕಿ ಉಳಿಯಬಾರದು ಎನ್ನುವುದು ಮತ್ತೊಂದು ಅನಿಸಿಕೆ ಆಗಿತ್ತು. ಈ ಅಭಿಪ್ರಾಯವನ್ನು ಬೆಂಬಲಿಸಿದವರ ಪ್ರಮಾಣ ಶೇಕಡ 52.5ಫಲಿತಾಂಶದಲ್ಲಿ ಸೂಚಿತವಾಗಿರುವ ಶೇಕಡಾವಾರು ಅಂಕಿಅಂಶಗಳು ಜನಮನವನ್ನು ಬಿಂಬಿಸುತ್ತಿವೆ. ಜಾಗತಿಕ ವಿದ್ಯಮಾನವೊಂದು ಕನ್ನಡಿಗರ ಕಣ್ಣಲ್ಲಿ ಹೇಗೆ ಬಿಂಬಿತವಾಗತ್ತೆ ಎನ್ನುವುದರ ಸೂಚ್ಯಂಕವನ್ನು ಫಲಿತಾಂಶ ಹೇಳುತ್ತದೆ. ಒಟ್ಟಿನಲ್ಲಿ, ಲಾಡೆನ್ ಅನ್ನು ಸಾಯಿಸಿದ್ದೇ ಸರಿ ಎಂದು ವಾದಿಸುವವರ ಗುಂಪಿನಲ್ಲಿ ಜನ ಹೆಚ್ಚಾಗಿ ಕಂಡುಬಂದಿರುವುದರಿಂದ ಅವರಿಗೇ ಜೈ ಹೇಳೋಣವೇ?

ಇವತ್ತಿನ ಸಮೀಕ್ಷೆಗೆ ಭಾಷಾ ಪ್ರಕರಣವನ್ನು ಆಯ್ದುಕೊಳ್ಳಲಾಗಿದೆ. ಅದರ ಉದ್ದೇಶ ಹೀಗಿದೆ.

ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬಂಗಾಲಿ ಮುಂತಾದ ಪರಭಾಷೆಗಳಿಗೆ ಕನ್ನಡನಾಡಿನಲ್ಲಿ ಹೆಚ್ಚು ಮನ್ನಣೆ ಕಂಡುಬರುತ್ತದೆ. ಅದರಲ್ಲೂ ಬೆಂಗಳೂರಿನಲ್ಲಿ ಇಂಗ್ಲಿಷ್, ತಮಿಳು ಮತ್ತು ಹಿಂದಿಯ ದರ್ಬಾರು ಹೆಚ್ಚು. ಕನ್ನಡಿಗರ ಮನೆ ಮತ್ತು ಮಾತೃಭಾಷೆ ಮನೆ ಬಳಕೆಗೆ ಮಾತ್ರ ಸೀಮಿತ. ಮನೆಯಾಚೆ ಬಳಕೆಯಾದರೆ ಅದು ಹೀಗಿರುತ್ತದೆ. ಕ್ಯಾಂಟೀನಿನಲ್ಲಿ ಬೈ ಟು ಕಾಫಿಗೆ ಹೋಗೋಣ ಬರ್ತೀಯಾ, ಫುಲ್ ಬಾಡಿ ಚೆಕ್ ಅಪ್ಪಿಗೆ ಅಪಾಯಿಂಟ್ ಮೆಂಟ್ ತೊಗೊಂಡಿದೀನಿ, ಮಣಿಪಾಲ್ ಹಾಸ್ಪಿಟಲ್ ಗೆ ಹೋಗಿ ಬಂದಮೇಲೆ ಸಿಕ್ತೀನಿ.

ಬೆಂಗಳೂರಿನ ಸರಕಾರಿ ಕಚೇರಿಗಳು, ವಿಮಾನ ನಿಲ್ದಾಣಗಳು, ಅಂಗಡಿ, ಮಾಲು, ಐಟಿ ಕಚೇರಿಗಳಲ್ಲಿ ನಿಮ್ಮ ವ್ಯವಹಾರಗಳು ನಡೆಯಬೇಕಾದರೆ ಈ ಕೆಳಗೆ ನಮೂದಿಸಿರುವ ನಾಲಕ್ಕು ಪ್ರಭಾವಶಾಲಿ ಭಾಷೆ ತಿಳಿದಿರಬೇಕು. ಇದರಲ್ಲಿ ಅತ್ಯಂತ ಪ್ರಭಾವಶಾಲಿ ಭಾಷೆ ಯಾವುದು ಎನ್ನುವುದರ ಇತ್ಯರ್ಥ ಆಗಲಿ. ನಿಮ್ಮ ಅಭಿಪ್ರಾಯ ತಿಳಿಸಿರಿ.

ಇದಾವ ಭಾಷೆಯೂ ಅಲ್ಲ, ಕನ್ನಡವೇ ಬೆಂಗಳೂರಿನಲ್ಲಿ ಪ್ರಭಾವಶಾಲಿ ಭಾಷೆ ಅನ್ನುವವರು ಅಥವಾ ಪ್ರಭಾವಶಾಲಿ ಭಾಷೆ ಆಗಬೇಕು ಎಂದು ಎದೆತಟ್ಟಿ ಹೇಳುವವರು ನಮಗೆ ತಮ್ಮ ಅಭಿಪ್ರಾಯ ಬರೆದು ತಿಳಿಸಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+