ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವೂ ವರದಿಗಾರರಾಗಿರಿ : ದಟ್ಸ್ ಕನ್ನಡ

By Super
|
Google Oneindia Kannada News

You can be a reporter
ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ನೆಲೆಸಿರುವ ದಟ್ಸ್ ಕನ್ನಡದ ನಿಷ್ಠಾವಂತ ಓದುಗರಲ್ಲಿ ಒಂದು ಕೋರಿಕೆ. ನೀವು ನಮ್ಮ ವೆಬ್ ಸೈಟನ್ನು ಓದುವುದಷ್ಟೇ ಅಲ್ಲ; ಆಗಿಂದಾಗ, ಸಂದರ್ಭೋಚಿತವಾಗಿ ದಟ್ಸ್ ಕನ್ನಡ ಅಂತರ್ಜಾಲ ಪತ್ರಿಕೆಯ ವರದಿಗಾರರೂ ಆಗಬಹುದು. ಕಥೆ, ಕವನ ಮುಂತಾದ ಸೃಜನಶೀಲ ಬರಹಗಳು ಇರಲಿ. ಅದರ ಜೊತೆಗೆ, ನಿಮ್ಮ ಹಳ್ಳಿ ಊರು ಪಟ್ಟಣಗಳ ಹಸಿಹಸಿ ವಾರ್ತೆಗಳನ್ನು, ಆಗುಹೋಗುಗಳ ಬಿಸಿಬಿಸಿ ಸುದ್ದಿ ಚಿತ್ರಗಳನ್ನೂ ನಮಗೆ ಬರೆದು ಕಳಿಸಬಹುದು.

ರಾಜ್ಯದ ಪ್ರಮುಖ ಸುದ್ದಿಗಳು ಹೇಗೂ ನಮ್ಮಲ್ಲಿ ಮೂಡಿಬರುತ್ತವೆ. ಆದರೆ, ನಿಮ್ಮ ಊರಿನ ಸುದ್ದಿ ಅಥವಾ ದೇಶದ ಆಗುಹೋಗುಗಳಿಗೆ ನಿಮ್ಮ ಹಳ್ಳಿ ಸ್ಪಂದಿಸುವ ವಿಧಾನವನ್ನು ನೀವು ಸಮಸ್ತ ಕನ್ನಡ ಓದುಗರೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ದಟ್ಸ್ ಕನ್ನಡ ಕಲ್ಪಿಸಲಿದೆ.

ಸಾಮಾಜಿಕ, ಶೈಕ್ಷಣಿಕ, ಕ್ರೀಡಾಲೋಕದ ಸುದ್ದಿ ಸಂಕ್ಷೇಪಗಳು, ಮತ್ತು ನಿರಂತರ ಬದಲಾವಣೆಗೆ ಪಕ್ಕಾಗಿರುವ ಜೀವನಶೈಲಿಯ ಗತಿ ವಿಧಾನಗಳನ್ನು ನೀವು ದಾಖಲಿಸಬಹುದು. ನಿಮ್ಮ ಊರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆ, ಅಧಿಕಾರಿಗಳ ಅಸಡ್ಡೆ, ರಾಜಕಾರಣಿಗಳ ಪಿತೂರಿ, ವೈದ್ಯರ ನಿರ್ಲಕ್ಷ್ಯ, ಉಪಾಧ್ಯಾಯರಿಲ್ಲದ ಶಾಲೆಗಳು, ಕಾಲೇಜು ವಿದ್ಯಾರ್ಥಿಗಳಿಂದ ಸಮಾಜಸೇವಾ ಕಾರ್ಯಕ್ರಮಗಳು, ಯಾರಿಗೂ ಬೇಡವಾದವರ ಬದುಕು ನನ್ನ ಊರಿನಲ್ಲಿ ಹೇಗೆ ಸಾಗುತ್ತಿದೆ? ಎಂದು ಮುಂತಾದ ಮಾನವೀಯ ವರದಿ -ಸಂಗತಿಗಳ ಬಗೆಗೆ ಬರೆಯಿರಿ.

ಉದ್ದುದ್ದ ಮತ್ತು ನಿರರ್ಥಕವಾದ ಸುಳ್ಳುಸುಳ್ಳೇ ಭಾಷಣಗಳ ವರದಿಗಳು ದಯಮಾಡಿ ಬೇಡ. ಅದರಲ್ಲೂ ರಾಜಕಾರಣಿಗಳ, ಮಠಾಧಿಪತಿಗಳ ಉಪನ್ಯಾಸಗಳು ಸಾಧ್ಯವಾದಷ್ಟೂ ಕಡೆಗಣಿಸಿ. "xxxx ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಶ್ರೀಮಾನ್ ಅವರ ಕರೆ", "ಮಿಡಿಗೇಶಿಯಲ್ಲಿ ಸಾಧಕನಿಗೆ ಆತ್ಮೀಯ ಸನ್ಮಾನ", "ಕಲಬುರ್ಗಿಯಲ್ಲಿ ಬಿಸಿಲು ಜಾಸ್ತಿ" ಎಂಬಂತಹ ಸುದ್ದಿಗಳನ್ನು ಕೈಬಿಟ್ಟು ಬಿಸಿಲ ಝಳ ತಪ್ಪಿಸಿಕೊಳ್ಳಲು ನೀವು (ಅಥವಾ ಇನ್ನೊಬ್ಬರು) ಕಂಡುಕೊಂಡ ಉಪಾಯ ಯಾವುದು? ಅಂಥ ವಿಷಯಗಳನ್ನು ಹೆಕ್ಕಿ ಬರೆಸಿರಿ.

ಸಮಸ್ಯೆಗಳು ಎಲ್ಲ ಕಡೆ ಇರುತ್ತವೆ, ನಿಜ. ಆದರೆ ಒಂದು ಹಳ್ಳಿ ಅಥವಾ ಒಂದು ತಾಲೂಕು ಅಥವಾ ಒಬ್ಬ ವ್ಯಕ್ತಿ, ಒಂದು ಸಂಸ್ಥೆಯು ಸಮಸ್ಯೆಯ ಪರಿಹಾರಕ್ಕೆ ಆಯ್ದುಕೊಂಡ ಮಾರ್ಗೋಪಾಯಗಳೇನು? ಅಂಥದ್ದನ್ನು ಬರೆಯುವ ಆಸಕ್ತಿ ಇರಲಿ. ನಿಮ್ಮ ಬರಹಗಳು ದೂರು ದುಮ್ಮಾನಗಳಿಗೆ ಮಾತ್ರ ಸೀಮಿತವಾಗದಿರಲಿ. ನಿಮ್ಮ ಊರಿನ ವಿಶೇಷಗಳ ಬಗೆಗೆ ಬರೆಯುವುದನ್ನು ಯಾವತ್ತೂ ಮರೆಯದಿರಿ. ಸ್ಥಳೀಯ ಪ್ರೇಕ್ಷಣಿಯ ತಾಣಗಳು, ಕೆರೆಕಟ್ಟೆಯ ಚಿತ್ರಗಳು, ಐತಿಹಾಸಿಕ ಮಹತ್ವ, ಊರಿನ ವಿಚಿತ್ರ ಸಾಹಸಿಗಳು, ನಿಮ್ಮೂರಿಗೆ ಮಾತ್ರ ವಿಶೇಷವೆನಿಸಿರುವ ತಿಂಡಿ, ತೀರ್ಥ ಅಡುಗೆ ರುಚಿಗಳನ್ನು ಓದುಗರೊಂದಿಗೆ ಹಂಚಿಕೊಳ್ಳಿರಿ. ನಿಮ್ಮ ಊರು ಕುರಿತ ಮಾಹಿತಿಗಳನ್ನು ಜಾಗತಿಕ ಮಟ್ಟದ ಕನ್ನಡ ವೇದಿಕೆ ದಟ್ಸ್ ಕನ್ನಡದಲ್ಲಿ ಸ್ಥಾಪಿಸಿರಿ.

ಬರವಣಿಗೆಗಳು ದಯವಿಟ್ಟು ಚಿಕ್ಕದಾಗಿರಲಿ ಚೊಕ್ಕವಾಗಿರಲಿ, ಕರಾರುವಾಕ್ಕಾಗಿರಲಿ. ನಿಮ್ಮ ಟಿಪ್ಪಣಿಗೆ ಸರಿಹೊಂದುವ ಚಿತ್ರವನ್ನೂ ಕಳಿಸಿದರೆ ಒಳಿತು. ವರದಿಗಳನ್ನು ಬರೆಯಲು ಉಚಿತವಾಗಿ ಸಿಗುವ ಬರಹ, ನುಡಿ ಸಾಫ್ಟ್ ವೇರ್ ಬಳಸಿ ವರ್ಡ್ ಮುಖಾಂತರ ಲಗತ್ತಿಸಿ ರವಾನಿಸಿ. ಇಂಗ್ಲಿಷ್ ಬೇಡ. ಪಿಡಿಎಫ್ ಕೂಡದು. ಇಮೇಲ್ ಅಲ್ಲದೆ ಅಂಚೆ ಮೂಲಕ ಕಳುಹಿಸುವ ಲೇಖನಗಳನ್ನು ಪ್ರಕಟಣೆಗೆ ಪರಿಗಣಿಸಲಾಗುವುದಿಲ್ಲ.

ಇಂಥ ಬರಹ ಕಾಣಿಕೆಗಳನ್ನು ಕಳುಹಿಸುವುದಕ್ಕೆ ಆಸಕ್ತಿ ಇರುವವರು ತಮ್ಮ ಹೆಸರು, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಇ-ಮೇಲ್ ನಲ್ಲಿ ಸ್ಪಷ್ಟವಾಗಿ ಬರೆದಿರತಕ್ಕದ್ದು. ನಿಮ್ಮ ಇ-ಮೇಲ್ ಗಳನ್ನು ದಟ್ಸ್ ಕನ್ನಡದ ಈ ಕೆಳಗಿನ ಇ-ವಿಳಾಸಕ್ಕೆ ರವಾನಿಸಿ. ವಂದನೆಗಳು.

English summary
You can be a reporter. Thatskannada welcomes news bytes, social reporting from your towns and cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X