ಲಕ್ಷ್ಮೀ ಬಾರಮ್ಮಾ.. ಭಾಗ್ಯ ಲಕ್ಷ್ಮೀ ಬಾರಮ್ಮ..

ದುಡ್ಡೇ ದೊಡ್ಡಪ್ಪ. ದುಡ್ಡಿಲ್ಲದೇ ಇಂದು ಏನೂ ಇಲ್ಲ. ತಿಂಗಳಿಗೆ ಕೋಟಿ ಕೋಟಿ ದುಡಿಯುತ್ತಿರುವವನೂ ದುಡ್ಡು ಮಾಡಲು ಮತ್ಯಾವುದೇ ದಾರಿಯಿದೆಯಾ ಎಂದು ನೋಡುತ್ತಿರುತ್ತಾನೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದಷ್ಟು ದಿವಸ, ಬದುಕಲ್ಲಿ ಲವಲವಿಕೆ. ಇಷ್ಟಕ್ಕೂ ದುಡ್ಡು ಸಂಪಾದಿಸುವುದು ಹೇಗೆ? ಈ ಪ್ರಶ್ನೆಯನ್ನಿಟ್ಟುಕೊಂಡು ಸಾವಿರಾರು ಪುಸ್ತಕಗಳು ಬಂದಿವೆ. ಉತ್ತರ ಮಾತ್ರ ಯಾರಿಗೂ ಗೊತ್ತಿಲ್ಲ. ಗೊತ್ತಾಗುವಂತಿದ್ದರೇ,ಬಡವರು ಎಲ್ಲಿರುತ್ತಿದ್ದರು?
ದೀಪಾವಳಿಯ ಈ ಶುಭ ಸಂದರ್ಭದಲ್ಲಿ, ಲಕ್ಷ್ಮಿ ನಿಮ್ಮ ಮನೆಗೆ ಬರಲಿ.. ಬಂದು ಕಾಲು ಮುರಿದುಕೊಂಡು ಜೊತೆಯಲ್ಲಿ ಕೂರಲಿ.. ನೀವು ದುಡ್ಡುವಂತರಾಗಿ.. ದುಡ್ಡಿಗೆ ಸಂಬಂಧಿಸಿದ ನಿಮ್ಮ ಎಲ್ಲಾ ಕಷ್ಟಗಳು ತೀರಲಿ.. ಆಗಲೂ ನಿಮ್ಮಕಾಲುಗಳು ನೆಲದ ಮೇಲೆಯೇ ಇರಲಿ..
ಸಂಪಾದಕ












Click it and Unblock the Notifications