ಕನೆಕ್ಟ್ ಬೆಂಗಳೂರು : ಸಿಟಿ ಗೈಡ್
ರಕ್ತಬೀಜಾಸುರನಂತೆ ಕ್ಷಣಕ್ಷಣಕ್ಕೂ ಬೆಳೆಯುತ್ತಿರುವ ಮಹಾನಗರ ಬೆಂಗಳೂರು. ಈ ಊರಿನ ಮರ್ಮಗಳನ್ನು ಬಿಡಿಬಿಡಿ ವಿವರಗಳನ್ನು ಮುಷ್ಟಿಯಲ್ಲಿ ಹಿಡಿದು ತದೇಕ ಚಿತ್ತದಿಂದ ಗಮನಿಸಿ, ಆರಿಸಿ, ಶೋಧಿಸಿ, ಉಪಯೋಗಿಸುವುದಕ್ಕೆ ಎಲ್ಲರಿಗೂ ಇಷ್ಟ ಆದರೆ ಕಷ್ಟಸಾಧ್ಯ.
ಬೆಂದಕಾಳೂರಿನ ಭವ್ಯ ಇತಿಹಾಸ, ಎಡಬಿಡಂಗಿ ಜನಜೀವನ, ಡೊನೆಷನ್ ಶಿಕ್ಷಣ, ಹದಗೆಟ್ಟ ಆರೋಗ್ಯ, ಚೀಪಾದ ಮನರಂಜನೆ, ಅಧ್ವಾನ ಸಾರಿಗೆ ಸಂಪರ್ಕ, ಮಧ್ಯವರ್ತಿಗಳ ಕಪಿಮುಷ್ಟಿಯಲ್ಲಿ ವ್ಯಾಪಾರ ವಹಿವಾಟು, ದುರಾಡಳಿತ, ಕಲುಷಿತ ಆಹಾರ, ಹೋಪ್‌ಲೆಸ್ ರಾಜಕೀಯ, ಅಪರಾಧ, ಕೊಲೆ ಸುಲಿಗೆ, ವಂಚನೆ, ಕೆಟ್ಟ ಆಸ್ಪತ್ರೆ, ತೂಕಡಿಸುವ ಆಫೀಸು, ಖಂಡಿತವಾದಿ ಶವಾಗಾರ, ಓಣಿ, ಗಲ್ಲಿ, ರಸ್ತೆ, ರಿಂಗ್‌ರಸ್ತೆ, ಹೈವೆ, ಫ್ಲೈ ಓವರ್, ಬಸ್ಸು, ಆಟೊ, ರೈಲು, ಏರೋಪ್ಲೋನು.. ಬೀಡಿ ಹಚ್ಚಲೊಂದು ಪೆಟ್ಟಿಗೆ ಅಂಗಡಿ, ಎಲ್ಲರ ಕಿವಿಗಳಲ್ಲೊಂದು ಮೊಬೈಲ್ ಫೋನು, ಕನೆಕ್ಟೇ ಬ್ಯಾಂಡ್ ವಿಡ್ತ್, ಎಡವಿಬಿದ್ದರೊಂದು ಬಾರು, ಮೇಡ್ ಇನ್ ಹೆವೆನ್ ಕಲ್ಯಾಣ ಮಂಟಪ, ದುಬಾರಿ ಮಾಲು, ಏನಿದು ಇ-ಮೇಲು, ಫ್ರಾಡು ಬ್ಯಾಂಕು, ಬೋಗಸ್ ಸೈಟು, ನೆಮ್ಮದಿ ಇಲ್ಲದ ಮನೆ, ಪಿಜನ್ ಹೋಲ್ ಫ್ಲ್ಯಾಟು, ಸೆಕೆಂಡ್ ಹ್ಯಾಂಡ್ ಕಾರು, ಮೂರು ಗಾಲಿಯ ಸೈಕಲ್ಲು, ಅನ್‌ರಿಯಲ್ ಎಸ್ಟೇಟು, ನೀವು ನೋಡದ ಕರಗ, ಸರ್ಜಾಪುರದ ಹಣ್ಣು ತರಕಾರಿ, ಅಂಡರ್ ವರ್ಲ್ಡ್, ಬಾಲವಿಹಾರ, ವೃದ್ಧಾಶ್ರಮ ....ಅದೆಷ್ಟು ಕಾರ್ಖಾನೆ, ಕಸವಿಲೇವಾರಿ ..
ಒಂದು ಮಹಾನಗರ ಒಳಗೊಳ್ಳುವ ಸಂಕೀರ್ಣತೆಗಳು ಕೈಬೆರಳಿಗೆ ಎಟುಕದಷ್ಟಿರುತ್ತವೆ. ಹಿಮಾಲಯ ಹತ್ತುವುದು ಸವಾಲೆನಿಸಬಹುದು, ಆದರೆ, ಮೊದಲು ಬೆನ್ನಿಗೆ ಒಂದು ಚೀಲ ಹಾಕಿಕೊಂಡು ಹೊರಡೋಣ...
ಬೆಂಗಳೂರನ್ನು ಕೆಲವು ವಿವರಗಳಲ್ಲಿ, ಅಂದರೆ ನಾವು ನೀವು ನಿತ್ಯ ಉಪಯೋಗಿಸುವ ಸಂಪರ್ಕ ವಿವರ ಮಾಹಿತಿಯ ರೂಪದಲ್ಲಿ ಅಡಕ ಮಾಡುವ ಪ್ರಯತ್ನ ಆರಂಭಿಸಿದ್ದೇವೆ. ಆನ್‌ಲೈನ್ ಪತ್ರಿಕೆಯ ಕಸುಬು ಮತ್ತು ಜವಾಬ್ದಾರಿಗಳ ಒಟ್ಟೊಟ್ಟಿಗೆ ಇಂಟರ್‌ನೆಟ್ಟಿನ ಅನನ್ಯ ಸಾಧ್ಯತೆಗಳಲ್ಲಿ ಕೆಲವಾದರೂ ಕನ್ನಡದ ತೆಕ್ಕೆಯಲ್ಲಿ ದಕ್ಕಲಿ ಎಂಬ ಆಶಯದಿಂದ ಈ ವಿಭಾಗವನ್ನು ಆರಂಭಿಸಲಾಗಿದೆ. ಪುಟಪುಟಗಳಲ್ಲಿ ಅಡಕವಾಗಿರುವ ಪುಟ್ಟಪುಟ್ಟ ಮಾಹಿತಿಗಳು ಬೆಂಗಳೂರನ್ನು ಬಳಸುವವರಿಗೆ ಯಾವತ್ತಿಗಾದರೂ ಪ್ರಯೋಜನಕ್ಕೆ ಬಂದೀತೆಂಬ ಆಶಯ - ನಂಬಿಕೆ ನಮ್ಮದು.
ಈ ಪುಟಗಳನ್ನು ಮಾಹಿತಿ ಸಂಪನ್ನ ಮಾಡುವುದರಲ್ಲಿ ಓದುಗರ ಪಾತ್ರವೂ ಇದೆ. ಕರಾರುವಾಕ್ಕಾದ, ಎಲ್ಲರಿಗೆ ಪ್ರಯೋಜನವಾಗುವ ಮಾಹಿತಿಗಳಿಗೆ ಸ್ವಾಗತ. ಒಟ್ಟುಮಾಡಿ ಕಳಿಸಿಕೊಟ್ಟರೆ ಸೂಕ್ತವಾಗಿ ಬಳಸಿಕೊಳ್ಳಲಾಗುವುದು..
ದಟ್ಸ್‌ಕನ್ನಡ ಜಾಲತಾಣವನ್ನು ಪ್ರತಿನಿತ್ಯ ಬಳಸುವ ಜಾಗತಿಕ ಕನ್ನಡಿಗರ ವರ್ಗ ಹಿರಿದಾದದ್ದು ಮತ್ತು ವಿಶಾಲವಾದದ್ದು. ವಿವಿಧ ಅಭಿರುಚಿಗಳನ್ನು ಮೈಗೂಡಿಸಿಕೊಂಡ ಸುಸಂಸ್ಕೃತ ಓದುಗರಲ್ಲದೆ ಕನ್ನಡ ಪ್ರೀತಿಯನ್ನು ಹೆಗಲಿಗೇರಿಸಿಕೊಂಡ ಚಾರಣಿಗರು ನಮ್ಮನ್ನು ಆಗಿಂದಾಗ್ಯೆ ಕೋರುವ ಮಾಹಿತಿಗಳ ಕ್ಯಾನವಾಸ್ ತುಂಬ ದೊಡ್ಡದಿದೆ. ಕೆಲವನ್ನಾದರೂ ಕೊಡುವುದಕ್ಕೆ ನಮಗೆ ಸಂತೋಷವಾಗುತ್ತದೆ.
ಈ ವಿಭಾಗದಲ್ಲಿ ನೀವು ಕಾಣುತ್ತೀರಿ :
- ಬೆಂದಕಾಳೂರಿನ ಸಂಕ್ಪಿಪ್ತ ಇತಿಹಾಸ
- ಹಳೆಯ ಬೆಂಗಳೂರು ನೆನಪುಗಳು..
- ಬೆಂಗಳೂರಿನ ಕಲ್ಯಾಣ ಮಂಟಪಗಳು
- ಕಾರು ಟ್ಯಾಕ್ಸಿ
- ಆಸ್ಪತ್ರೆ
- ಚಿತ್ರಮಂದಿರಗಳು
- ರಂಗಮಂದಿರ
- ಬ್ಯೂಟಿ ಪಾರ್ಲರ್
- ಶಾಲೆ-ಕಾಲೇಜು
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್‌ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications