Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ
Bengaluru: ನಗರಕ್ಕೂ ಹಳ್ಳಿಗೂ ಗಾಢವಾದ ಗೆರೆಯೊಂದಿದೆ. ಹಳ್ಳಿಗಳಲ್ಲಿರುವ ಮಾನವೀಯತೆ - ಕೊಡುಕೊಳ್ಳುವಿಕೆ ನಗರಗಳಲ್ಲಿ ಇಲ್ಲ ಎನ್ನುವ ಮಾತಿದೆ. ಈ ಮಾತುಗಳಿಗೆ ಮತ್ತೊಂದು ಸಾಕ್ಷಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಅಮಾನವೀಯ ಲಿಫ್ಟ್ ಸಂಸ್ಕೃತಿ. ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಅಮಾನವೀಯ ಲಿಫ್ಟ್ ಸಂಸ್ಕೃತಿವಾಗಲಿ ಎಂದು ರಾಘವೇಂದ್ರ ಕೃಷ್ಣರಾಜ ಟಿ. ಅವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ.
ನಗರಗಳಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿರುವ ಶ್ರೀಮಂತರು ಸ್ವಿಗ್ಗಿ, ಜೊಮ್ಯಾಟೋ ಮೊದಲಾದ ಆನ್‌ಲೈನ್ ಮೂಲಕ ಆಹಾರ ವಿತರಿಸುವ " ಕಂಪೆನಿಗಳ ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ನಿಷೇಧ ಎಂಬ ಬೋರ್ಡ್‌ಗಳನ್ನು ಹಾಕಿರುವುದು ಕಂಡು ಬಂದಿದ್ದು, ಇದು ಶ್ರೀಮಂತರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಒಂದೆಡೆ ಕಟ್ಟಡದ ಮಾಲೀಕರ ಅಮಾನವೀಯ ನಿಯಮಗಳು, ಇನ್ನೊಂದೆಡೆ ಹೇಗಾದರೂ ಮಾಡಿ ಮೇಲೆ ಬನ್ನಿ ಎಂದು ಹಠ ಹಿಡಿಯುವ ಕಲ್ಲು ಹೃದಯದ ಗ್ರಾಹಕರು.
ಹಸಿದವನಿಗೆ ಅನ್ನ ನೀಡುವವನನ್ನು ಮೆಟ್ಟಿಲು ಹತ್ತಿಸುವುದು ಯಾವ ನ್ಯಾಯ, ನಾವು ತಾಂತ್ರಿಕವಾಗಿ ಮುಂದುವರಿದಿರಬಹುದು, ಆದರೆ ಸಾಂಸ್ಕೃತಿಕವಾಗಿ ಅಧಃಪತನ ಹೊಂದುತ್ತಿದ್ದೇವೆ. ಇಂತಹ ಶೋಷಣೆಯ ವಿರುದ್ಧ ಧ್ವನಿ ಎತ್ತದಿದ್ದರೆ, ನಮ್ಮದು ನಾಗರಿಕ ಸಮಾಜ ಎಂದು ಕರೆದುಕೊಳ್ಳಲು ಅನರ್ಹರು. ಇಂದೇ ಈ ಅಮಾನವೀಯ ಲಿಫ್ಟ್ ಸಂಸ್ಕೃತಿ ಅಂತ್ಯವಾಗಲಿ ಎಂದು ರಾಘವೇಂದ್ರ ಕೃಷ್ಣರಾಜ ಟಿ. ಅವರು ಹೇಳಿದ್ದಾರೆ.

Bengaluru: ನೆಟ್ಟಿಗರು ಹೇಳಿದ್ದೇನು
ಬೆಂಗಳೂರು ನಗರದ ಅಮಾನವೀಯ ಲಿಫ್ಟ್ ಸಂಸ್ಕೃತಿ ಅಂತ್ಯವಾಗಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಲೇಖಕಿ ಭಾರತಿ ಬಿ.ವಿ ಅವರು, ಸಂಕಟವಪ್ಪ. ಎಷ್ಟೋ ಹೋಟೆಲ್‌ಗಳಲ್ಲಿ ಅಷ್ಟೇ... ಸರ್ವ್ ಮಾಡುವವರು ಮಹಡಿ ಹತ್ತಿಯೇ ತರ್ತಾರೆ. ನಾವು ಹೊಟ್ಟೆಬಿರಿಯ ತಿನ್ನುವವರಿಗೆ ಮಾತ್ರ ಲಿಫ್ಟು. ಅದೆಷ್ಟು ಸಲ ಹತ್ತಿ ಇಳಿತಾರೋ ಪಾಪ ಅನ್ನಿಸುತ್ತೆ ಎಂದಿದ್ದಾರೆ.
ಧರ್ಮಶ್ರೀ ಅಯ್ಯಂಗಾರ್ ಅವರು, Delivery app ನವರು ರೂಲ್ಸ್ ಮಾಡಬೇಕು.. ಅಪಾರ್ಟ್ಮೆಂಟ್‌ಗಳಿಗೆ ಡೆಲಿವರಿ ಮಾಡೋವಾಗ ಕೆಳಗೆ ಒಂದು ಕಲೆಕ್ಟಿಂಗ್ ಪಾಯಿಂಟ್ ಅಲ್ಲಿ ಇಟ್ಟು ಹೋಗ್ತೀವಿ.. ಆರ್ಡರ್ ಮಾಡಿದವರು ಲಿಫ್ಟ್ ಅಲ್ಲಿ. ಇಳಿದು ಬಂದು ತೊಗೊಂಡು ಹೋಗಲಿ ಅಂತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೌಮ್ಯಾ ರಾಣಿ ಎನ್.ವಿ ಎನ್ನುವವರು, ಒಂದು ಅಪಾರ್ಟ್‌ಮೆಂಟ್‌ಗಳಲ್ಲಿರೋ ರಾಕ್ಷಸರು ಮತ್ತೊಂದು ಕಡೆ ಅವರಿಗೆ ಕೆಲಸ ಕೊಡೋ ಕಂಪನಿಗಳು ಇಬ್ರೂ ಸೇರಿ ದೌರ್ಜನ್ಯ ಮಾಡ್ತಿದಾರೆ. ಲಿಫ್ಟ್ ವ್ಯವಸ್ಥೆ ಇಲ್ದೆ ಇರೋ ಕಡೆ ನಾವು ಫುಡ್ ಸಪ್ಲೆ ಮಾಡಲ್ಲ ಅಂತ ಹೇಳೋಕೆ ಕಂಪನಿಗಳು ತಯಾರಿಲ್ಲ, ಯಾರು ಎಷ್ಟು ಶೋಷಣೆಗೆ ಒಳಗಾದ್ರೆ ಇವ್ರಿಗೇನು ಆಗ್ಬೇಕು, ಬರೋ ದುಡ್ಡು ಬಂದ್ರೆ ಸಾಕು, ರಾಕ್ಷಸರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂದ್ರಕಲಾ ಮಂಜುನಾಥ್ ಎನ್ನುವವರು, ವರ್ಷಗಳ ಹಿಂದೆ ಸ್ವಿಗ್ಗಿಮೆಂಟ್ ಬಗ್ಗೆ ತಾವು ಡೆಲಿವರಿ ಬಾಯ್ ಡೆಲಿವರಿ ಕೊಡಲು ಹೋಗಿದ್ರು. ಅಲ್ಲಿ ಅವರಿಗೆ ಲಿಫ್ಟ್ ಬಳಸದೆ ಇದ್ದಾಗ ಮೆಟ್ಟಿಲು ಹತ್ತಿ ಬಂದ ನಂತರ ಅವರ ಅನುಭವ ಹಂಚಿಕೊಂಡಿದ್ದು ವೈರಲ್ ಆಗಿದೆ. ಆಗ ಅಪಾರ್ಟ್‌ಮೆಂಟ್‌ನ ಮುಂದೆ ಕ್ಷಮೆ ಕೋರಿ ಇನ್ನು ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಸರ್ವೀಸ್ ಕೊಡುವುದಾಗಿ ಆಶ್ವಾಸನೆ ಕೊಟ್ಟಿದ್ರು. ಸ್ವಿಗ್ಗಿ, ಜೊಮ್ಯಾಟೋ ಅವರ ಸಿಬ್ಬಂದಿ ಹಿತ ರಕ್ಷಣೆಗೆ ನಿಬಂಧನೆಗಳನ್ನು ಜಾರಿಗೊಳಿಸಬೇಕು.
ನಾವು ಇರುವ ಏರಿಯಾದಲ್ಲಿ ಮೂರು, ನಾಲ್ಕನೇ ಅಂತಸ್ತಿನಲ್ಲಿ ಇರುವವರು ಪಾರ್ಸಲ್ ಬಂದಾಗ ತಮ್ಮ ಮಹಡಿಯಿಂದ ಒಂದು ಬ್ಯಾಗಿಗೆ ಹಗ್ಗ ಕಟ್ಟಿ ಕೆಳಗೆ ಬಿಡುತ್ತಾರೆ. ಅದರೊಳಗೆ ಹಾಕಿದರೆ ಮತ್ತೆ ಬಾವಿಯಿಂದ ನೀರು ಸೇದುವಂತೆ ಎಳೆದುಕೊಳ್ಳುತ್ತಾರೆ. 2-3-4 ಅಂತಸ್ತಿನ ಮನೆಯವರು ಇಂತಹ ಸುಲಭದ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಇದಕ್ಕೆ ಪರಿಹಾರ ಮಾರ್ಗಗಳನ್ನು ಹುಡುಕಬೇಕು ಎಂದು ಹೇಳಿದ್ದಾರೆ.












Click it and Unblock the Notifications