RBI New Rule: ಇನ್ಮುಂದೆ ಆನ್‌ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ
RBI New Rule: ದೇಶದಲ್ಲಿ ಆನ್‌ಲೈನ್ ವಹಿವಾಟಿನಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI - ಆರ್‌ಬಿಐ) ಮಹತ್ವದ ಕಾನೂನು ರೂಪಿಸುವುದಕ್ಕೆ ಮುಂದಾಗಿದೆ. ಈಗಾಗಲೇ ಹಿರಿಯ ನಾಗರಿಕರು ಮತ್ತು ವಿಕಲಚೇತನರರು ಸೇರಿದಂತೆ ಕೆಲವು ನಿರ್ದಿಷ್ಟ ಸಮೂಹವನ್ನು ರಕ್ಷಿಸುವ / ಹಣ ವಂಚನೆಗೆ ಒಳಗಾಗದಂತೆ ತಡೆಯುವ ಉದ್ದೇಶದಿಂದ ಆರ್‌ಬಿಐ 50,000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ ಹೆಚ್ಚುವರಿ ದೃಢೀಕರಣ ವ್ಯವಸ್ಥೆ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಆನ್‌ಲೈನ್ ಮೂಲಕ ಯಾವುದೇ ನಿರ್ದಿಷ್ಟ ಖಾತೆಯಿಂದ ಮತ್ತೊಂದು ಖಾತೆಗೆ 10,000 ರೂಪಾಯಿಗಿಂತಲೂ ಹೆಚ್ಚಿನ ಪಾವತಿಗಳಿಗೆ ಒಂದು ಗಂಟೆ ವಿಳಂಬವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸ್ತಾಪಿಸಿದೆ. ಗ್ರಾಹಕರು ಡಿಜಿಟಲ್ ವಹಿವಾಟಿನಲ್ಲಿ ಮೋಸ ಹೋಗದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಇದನ್ನು ಪರಿಚಯಿಸಲಾಗುತ್ತಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ವಂಚನೆ ಹಾಗೂ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಮಾದರಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ರೀತಿ ಹಣ ವಹಿವಾಟಿನಲ್ಲಿ ವಿಳಂಬ ಮಾಡುವುದರಿಂದ ಸೈಬರ್ ವಂಚನೆಗಳನ್ನು ಕಡಿಮೆ ಮಾಡಬಹುದು ಅಥವಾ ಸಾರ್ವಜನಿಕರು ಹೆಚ್ಚು ಹಣ ಕಳೆದುಕೊಳ್ಳದಂತೆ ತಡೆಯಬಹುದು ಎನ್ನುವುದು ಇದರ ಉದ್ದೇಶವಾಗಿದೆ. ವಿಳಂಬವು ಅಧಿಕೃತ ಪುಶ್ ಪೇಮೆಂಟ್ (APP) ವಂಚನೆಗಳನ್ನು ಗುರಿಯಾಗಿಸುತ್ತದೆ. ಗ್ರಾಹಕರು ಸುಳ್ಳು ನೆಪದಲ್ಲಿ ಹಣವನ್ನು ವರ್ಗಾಯಿಸುವಂತೆ ಮೋಸ ಹೋಗುತ್ತಾರೆ. ಕೂಲಿಂಗ್-ಆಫ್ ಅವಧಿಯು ಗ್ರಾಹಕರಿಗೆ ವಹಿವಾಟುಗಳನ್ನು ರದ್ದುಗೊಳಿಸಲು ಅನುವು ಮಾಡಿಕೊಡುತ್ತದೆ ಮತ್ತು ಹಣವನ್ನು ಹಿಂಪಡೆಯುವ ಮೊದಲು ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಲು ಬ್ಯಾಂಕುಗಳಿಗೆ ಅನುವು ಮಾಡಿಕೊಡುತ್ತದೆ ಎಂದೂ ಹೇಳಲಾಗಿದೆ.
ಆರ್‌ಬಿಐ 50,000 ರೂ.ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಹೆಚ್ಚುವರಿ ದೃಢೀಕರಣ ವ್ಯವಸ್ಥೆಯನ್ನು ಸಹ ಸೂಚಿಸಿದೆ. ಈ ಕ್ರಮವು ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇರಿದಂತೆ ಕೆಲವು ನಿರ್ದಿಷ್ಟ ಗುಂಪು ಹೆಚ್ಚಿನ ಹಣ ವರ್ಗಾವಣೆ ತಪ್ಪಿಸಬಹುದು ವಿಶ್ವಾಸಾರ್ಹ ವ್ಯಕ್ತಿಯಿಂದ ಪರಿಶೀಲನೆಗೂ ಸಮಯಾವಕಾಶ ಸಿಗಲಿದೆ ಎಂದು ಹೇಳಲಾಗಿದೆ.
RBI New Rule: 25 ಲಕ್ಷ ರೂ. ನಿರ್ಬಂಧ
ಇನ್ನು ದೊಡ್ಡ ಮೊತ್ತದ ವಹಿವಾಟಿಗೂ ಕೆಲವೊಂದು ನಿರ್ಬಂಧಗಳನ್ನು ವಿಧಿಸುವುದಕ್ಕೂ ಆರ್‌ಬಿಐ ಮುಂದಾಗಿದೆ. ಕೆಲವು ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಕ್ರೆಡಿಟ್‌ಗಳನ್ನು 25 ಲಕ್ಷ ರೂ. ಸೀಮಿತಗೊಳಿಸಲು ಆರ್‌ಬಿಐ ಹಂತದಲ್ಲಿ ಚರ್ಚೆ ನಡೆದಿದೆ. ಈ ಮಿತಿಯನ್ನು ಮೀರಿದ ವಹಿವಾಟುಗಳನ್ನು ಬಿಡುಗಡೆ ಮಾಡುವ ಮೊದಲು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಡಿಜಿಟಲ್ ಪಾವತಿ ಚಾನೆಲ್‌ಗಳಲ್ಲಿ ಗ್ರಾಹಕ-ನಿಯಂತ್ರಿತ ವೈಶಿಷ್ಟ್ಯಗಳನ್ನು ವಿಸ್ತರಿಸಲು ಶಿಫಾರಸು ಮಾಡುತ್ತದೆ. ಇವುಗಳಲ್ಲಿ ವಹಿವಾಟು ಮಿತಿಗಳು, ಆನ್/ಆಫ್ ನಿಯಂತ್ರಣಗಳು ಮತ್ತು ವಂಚನೆ ಶಂಕಿತವಾದರೆ ಬಳಕೆದಾರರು ಡಿಜಿಟಲ್ ವಹಿವಾಟುಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲು ಅನುಮತಿಸುವ "ಕಿಲ್ ಸ್ವಿಚ್" ಒಳಗೊಂಡಿದೆ ಎಂದು ಹೇಳಲಾಗಿದೆ.
ದೊಡ್ಡ ಮಟ್ಟದಲ್ಲಿ ಸೈಬರ್ ವಂಚನೆ
ಇನ್ನು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಸೈಬರ್ ವಂಚನೆ ನಡೆಯುತ್ತಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೆಲವೊಂದು ನಿಯಮಗಳನ್ನು ರೂಪಿಸುವುದಕ್ಕೆ ಮುಂದಾಗಿದೆ. ಇದೀಗ ಈಗ ಆರ್‌ಬಿಐ ರೂಪಿಸುತ್ತಿರುವ ನಿಯಮವೂ ಸಹ ಇದಕ್ಕೆ ಪೂರಕವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications