Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election
Vijay: ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ನಟ ಹಾಗೂ ರಾಜಕಾರಣ ವಿಜಯ್ ಅವರು ವಿಶೇಷ ಟ್ವೀಟ್‌ವೊಂದನ್ನು ಮಾಡಿದ್ದಾರೆ. ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷರೂ ಆಗಿರುವ ನಟ ವಿಜಯ್ ಅವರು, ಅವರ ಅಭಿಮಾನಿಗಳಿಗೆ ವಿಶೇಷ ಸಂದೇಶವೊಂನ್ನು ನೀಡಿದ್ದಾರೆ. ನನ್ನ ಹೃದಯದಲ್ಲಿ ನೆಲೆಸಿರುವ ಎಲ್ಲಾ ಸಹೋದರರಿಗೆ ಹಾರ್ದಿಕ ಶುಭಾಶಯಗಳು.
ಈ ಮಹತ್ವದ ಪ್ರಯಾಣದಲ್ಲಿ ನಿಮ್ಮ ಪ್ರತಿಯೊಬ್ಬರ ಪಾತ್ರ ಅಮೂಲ್ಯವಾಗಿದೆ. ನಾವು ಬದಲಾವಣೆಗೆ ಮುಖ್ಯ ಶಕ್ತಿಯಾಗಿದ್ದು, ಜಯದ ದಾರಿಯಲ್ಲಿ ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಈಗ ಚುನಾವಣೆ ದಿನ ಸಮೀಪಿಸುತ್ತಿರುವ ಸಮಯದಲ್ಲಿ ನನ್ನ ಒಂದು ವಿನಂತಿ ಇದೆ. ಮತಗಟ್ಟೆ ಕಾರ್ಯಕರ್ತರು, ನಮ್ಮೊಂದಿಗೆ ಸೇರಿರುವ ಎಲ್ಲಾ ಸದಸ್ಯರು, ಸ್ನೇಹಿತರು-ಎಲ್ಲರೂ ಕಾರ್ಯಕ್ಷೇತ್ರಕ್ಕೆ ಇಳಿಯಿರಿ. ಮುಂದಿನ ಹತ್ತು ದಿನಗಳಲ್ಲಿ ನಿಮಗೆ ಅನುಕೂಲವಾದ ಸಮಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ನಿಮ್ಮ ಪ್ರದೇಶದ ಮನೆ ಮನೆಗೆ ಹೋಗಿ ಜನರನ್ನು ನೇರವಾಗಿ ಭೇಟಿ ಮಾಡಿ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ 'ವಿಸಿಲ್' ಗುರುತಿಗೆ ಮತ ಹಾಕುವಂತೆ ವಿನಂತಿಸಿ. ಈ ಕಾರ್ಯದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಲು ನಾನು ಮನವಿ ಮಾಡುತ್ತೇನೆ.

ರಾಜ್ಯ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ನಾಯಕರೂ ಅಭ್ಯರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಚುನಾವಣಾ ಕೆಲಸ ಮಾಡಬೇಕು. ಇದು ಕೇವಲ ನಮ್ಮಗಾಗಿ ಮಾತ್ರವಲ್ಲ, ದೊಡ್ಡ ಬದಲಾವಣೆಯಿಗಾಗಿ ನಡೆಯುವ ಚುನಾವಣೆಯಾಗಿದೆ ಎಂದು ಜನರಿಗೆ ತಿಳಿಸಿ. ನಿಸ್ವಾರ್ಥ ಮನಸ್ಸಿನಿಂದ ದುಡಿದು ನಮ್ಮ ಜಯಯಾತ್ರೆಗೆ ಬಲ ನೀಡಿರಿ. ಈ ಪ್ರಜಾಪ್ರಭುತ್ವದ ಹೋರಾಟದಲ್ಲಿ, ಸಂಪೂರ್ಣ ತಮಿಳುನಾಡು ಒಟ್ಟಾಗಿ ಜಯ ಸಾಧಿಸಿ ನಿಜವಾದ ಜನರ ಆಡಳಿತವನ್ನು ಸ್ಥಾಪಿಸುತ್ತದೆ.
ಇತಿಹಾಸ ಮತ್ತೆ ಮಹಿಮೆಪೂರ್ಣವಾಗಿ ತಿರುಗುತ್ತಿದೆ! ಒಳ್ಳೆಯದೇ ಆಗುತ್ತದೆ! ಜಯ ಖಚಿತ! ಎಂದು ನಟ ವಿಜಯ್ ಅವರು ಹೇಳಿಕೊಂಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ 2026ಕ್ಕೆ ಕ್ಷಣಗಣನೆ ಪ್ರಾರಂಭವಾಗಿರುವಾಗ ನಟ ವಿಜಯ್ ಅವರ ಟ್ವೀಟ್ ಮಹತ್ವ ಪಡೆದುಕೊಂಡಿದೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಸಂದೇಶ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್‌ನಿಂದ ಯಾವುದೇ ಬೆಂಬಲವಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ನಟ ಹಾಗೂ ರಾಜಕಾರಣಿ ವಿಜಯ್ ಅವರು ಅಪ್ರಬುದ್ಧ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ತಮಿಳುನಾಡಿನ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರುವ ಅವರು, ಕಾಂಗ್ರೆಸ್‌ನ ಕೆಲವು ನಾಯಕರು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎನ್ನುವ ವಿಜಯ್ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ನಮ್ಮಲ್ಲಿರುವುದು ಒಂದೇ ಕಾಂಗ್ರೆಸ್, ನಾವು ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷಕ್ಕೆ ಬೆಂಬಲ ಕೊಟ್ಟಿದ್ದಾವೆ. ಇಬ್ಬರು ಒಂದಾಗಿ ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದೇವೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ವಿಜಯ್ ಅವರಿಗೆ ಇನ್ನೂ ಪ್ರಬುದ್ಧತೆ ಬಂದಿಲ್ಲ, ಅವರು ತಮಿಳುನಾಡಿನ ರಾಜಕೀಯದಲ್ಲಿ ಒಬ್ಬ ಅಪ್ರಬುದ್ಧ ರಾಜಕಾರಣಿ ಎಂದು ಹೇಳಿದ್ದಾರೆ. ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ವಿಜಯ್ ಅವರು ಅಂತಿಮ ಹಾಗೂ ಮಹತ್ವದ ಸಂದೇಶವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications