Mining Properties: "ಕರ್ನಾಟಕದ ಗಣಿ ಸಂಪತ್ತು ಕೇರಳಂಗೆ; ಈ 'ಕಲೆಕ್ಷನ್' ಹಣ ಯಾರ ಜೇಬಿಗೆ"

Mining Properties: ಕರ್ನಾಟಕದ ಗಣಿ ಸಂಪತ್ತನ್ನು ಕೇರಳಂಗೆ ಗುಳುಂ ಮಾಡುವ ಪ್ರಯತ್ನ ನಡೆದಿದೆ ಎನ್ನುವ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದ್ದು, ಇದಕ್ಕೆ ಮುಖ್ಯ ಕಾರಣವಾಗಿರುವುದು ಕರ್ನಾಟಕದ ಗಡಿ ಭಾಗದಿಂದ ಕೇರಳಂಗೆ ಗಣಿ ಸಂಪತ್ತು ಸಾಗಾಣಿಕೆ ಅವ್ಯಾಹತವಾಗಿದೆ ಎನ್ನುವುದು. ಕರ್ನಾಟಕದಿಂದ ನಿತ್ಯವೂ ಅಂದಾಜು 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ ಎಂ ಸ್ಯಾಂಡ್, ಜಲ್ಲಿ ಸೇರಿದಂತೆ ವಿವಿಧ ಸಂಪತ್ತುಗಳನ್ನು ಕೇರಳಂಗೆ ಸಾಗಿಸಲಾಗುತ್ತಿದೆ ಎನ್ನುವ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡುರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಕಮಿಷನ್ ಆಸೆಗೆ ಕರ್ನಾಟಕದ ಗಣಿ ಸಂಪತ್ತನ್ನು ಕೇರಳಂಗೆ ಗುಳುಂ ಮಾಡಲು ಹೊರಟಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ. ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ ಅಕ್ರಮವಾಗಿ ಕೇರಳಂ ರಾಜ್ಯಕ್ಕೆ ಸಾಗಣೆಯಾಗುತ್ತಿದೆ ಎಂದು ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಗಂಭೀರ ಆರೋಪ ಮಾಡಿದ್ದಾರೆ.

Mining Properties

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂಡೀಪುರದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಬೇಕಾದ ಅಧಿಕಾರಿಗಳು ಪ್ರತಿ ಲಾರಿಗೆ 300 ರೂ. 'ವಸೂಲಿ' ಮಾಡಿಕೊಂಡು ಕಳ್ಳಸಾಗಣೆಗೆ ಸಹಕರಿಸುತ್ತಿರುವ ಅಧಿಕಾರಿಗಳು ಡ್ಯೂಟಿ ಮಾಡುತ್ತಿದ್ದರೋ ಅಥವಾ ನಿಮ್ಮ ಲೂಟಿಗೆ ಸಹಕರಿಸುತ್ತಿದ್ದಾರೋ. ಆರ್‌ಟಿಒ ಮತ್ತು ಪೊಲೀಸ್ ಇಲಾಖೆಯ ಆಶೀರ್ವಾದ ಇಲ್ಲದೆಯೇ ಟಿಪ್ಪರ್‌ಗಳು, ನಿಯಮ ಉಲ್ಲಂಘಿಸಿ ಓವರ್‌ಲೋಡ್ ತುಂಬಿಕೊಂಡು ಹೋಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.

ಈ ವ್ಯವಸ್ಥಿತ ದಂಧೆ ಕೆ.ಸಿ ವೇಣುಗೋಪಾಲ್ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆಯೇ, ಈ ಕಳ್ಳ ದಂಧೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೂ ಪಾಲು ಇದೆಯೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕಕ್ಕೆ ಸಿಗಬೇಕಾದ ಸಂಪನ್ಮೂಲಗಳನ್ನ, ರಾಜಧಾನವನ್ನ ನೆರೆ ರಾಜ್ಯಕ್ಕೆ ಧಾರೆ ಎರೆಯಲು ಹೊರಟಿರುವ ನಿಮ್ಮನ್ನ "ಕನ್ನಡ"ರಾಮಯ್ಯ ಎನ್ನಬೇಕೋ ಅಥವಾ "ಕಳ್ಳ"ರಾಮಯ್ಯ ಅನ್ನಬೇಕೋ, ಮುಖ್ಯಮಂತ್ರಿಗಳೇ, ನಿಮ್ಮ ಮೂಗಿನ ನೇರಕ್ಕೇ ಈ ಮಾಫಿಯಾ ನಡೆಯುತ್ತಿದ್ದರೂ ನೀವು ಮೌನವಾಗಿರುವುದು ನೋಡಿದರೆ, ಈ 'ಕಲೆಕ್ಷನ್' ಹಣ ಯಾರ ಜೇಬು ಸೇರುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.

Karnataka Mining Row: ಕನ್ನಡಿಗರ ತೆರಿಗೆ ಹಣ

ಕನ್ನಡಿಗರ ತೆರಿಗೆ ಹಣ ಮತ್ತು ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲು ಬಿಡುವುದಿಲ್ಲ. ತಕ್ಷಣವೇ ಆಕ್ರಮ ಸಾಗಾಣಿಕೆಯನ್ನು ನಿಲ್ಲಿಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+