ಸೋಫಿಯಾ ಲಾರೆನ್‌ : ಆರಾಧಿಸುವೆ ಮದನಾರಿ


‘ದ್ರಾಕ್ಷಾರಸದಂತೆ ಸೋಫಿಯಾ ಮಾಗಿದಂತೆಲ್ಲ ಮೋಹಕಳಾಗುತ್ತಿದ್ದಾಳೆ’ ಎಂದು ಪತ್ರಿಕೆಯಾಂದು ಬಣ್ಣಿಸಿದೆ. ಈ ಮಾತಿಗೆ ನಿಮ್ಮದೇನು ತಕರಾರಿಲ್ಲ ತಾನೇ?

Like a fine wine, Sophia Loren simply gets better with age‘ನನ್ನ ಬಿಟ್ಟರೆ ಮೂರು ಲೋಕದಲ್ಲಿ ಇನ್ನಾರೂ ಸುಂದರಿಯರಿಲ್ಲ’ ಎಂದು ಬೀಗುವ ನಾರಿಮಣಿಯರೆಲ್ಲ ಹೊಟ್ಟೆಕಿಚ್ಚುಪಟ್ಟುಕೊಂಡು ಸಾಯಬೇಕು!

ಮತ್ತಿನ್ನೇನು? 71 ವರ್ಷದ ಮುದುಕಿಯನ್ನು ‘ಆರಾಧಿಸುವೆ ಮದನಾರಿ’ ಎಂದು ರಸಿಕ ಜನಸ್ತೋಮ ಹಾಡಿಹೊಗಳಿದರೆ ಪಕ್ಕದ ಮನೆಯ ಪಂಕಜಾ, ಎದುರೆ ಮನೆ ಮೀನಾ, ಔಟ್‌ಹೌಸ್‌ ಕೋಕಿಲಾ ಮತ್ತು ಮಂಜನ ಮಡದಿ ಮಂಡೋದರಿಗೆ ಸಿಟ್ಟು ಬರದೆ ಇನ್ನೇನಾಗತ್ತೆ?ಹೆಂಗಸರಿಗೆ ಸಿಟ್ಟು ಬರಲು ಇಷ್ಟು ಕಾರಣ ಸಾಕು.

ಅಪ್ರತಿಮ ಸುಂದರಿ, ಮನೋಜ್ಞ ಕಲಾವಿದೆ ಸೋಫಿಯಾ ಲಾರೆನ್‌ಳನ್ನು Most Naturally Beautiful Person ಎಂದು ಇಂಗ್ಲೆಂಡಿನ ಜನ ಠಸ್ಸೆ ಹೊಡೆದು ಸಾರಿದ್ದಾರೆ. ಈ ಕುರಿತು ಅಲ್ಲಿ ನಡೆದ ಒಂದು ಜನಮತಗಣನೆಯಲ್ಲಿ ಲಾರೆನ್‌ಗೆ ಅತಿಹೆಚ್ಚು ಅಂದರೆ 1500 ಮತಗಳು ಬಿದ್ದಿವೆ ಎಂದು ಬ್ರಿಟನ್ನಿನ ಟೆಲಿಗ್ರಾಫ್‌ ಪತ್ರಿಕೆ ವರದಿ ಮಾಡಿದೆ. ‘ದ್ರಾಕ್ಷಾರಸದಂತೆ ಸೋಫಿಯಾ ಮಾಗಿದಂತೆಲ್ಲ ಮೋಹಕಳಾಗುತ್ತಿದ್ದಾಳೆ’ ಎಂದು ಪತ್ರಿಕೆ ತಾನೆ ಪರವಶವಾಗಿ ವರ್ಣಿಸಿದೆ.

‘ಜೀವನಪ್ರೀತಿಯೇ ನನ್ನ ಬಳಕುವ ದೇಹ ಮತ್ತು ಬಾಡದ ಸೌಂದರ್ಯದ ಒಳಗುಟ್ಟು’ ಎಂದಿದ್ದಾಳೆ ಸೋಫಿಯಾ. ಸೋಫಿಯಾಗೆ ಸ್ಪಾಗೆಟ್ಟಿ ಇಷ್ಟ ವಂತೆ ಮತ್ತು ಆಲಿವ್‌ ಎಣ್ಣೆ ಹಚ್ಚಿಕೊಂಡು ಅಭ್ಯಂಜನ ಮಾಡುವುದೆಂದರೆ ಆಹ್ಲಾದಕರವಂತೆ.

ಈ ಸುದ್ದಿ ಬರೆಯುವಾಗ ನನಗೊಂದು ಅನುಮಾನ ಬಂತು. Most Naturally Beautiful Person ಅನ್ನುವುದಕ್ಕೆ ಕನ್ನಡದಲ್ಲಿ ಏನಂತಾರೆ? ನನ್ನ ಗೆಳತಿಯಾಬ್ಬಳಿಗೆ ಫೋನು ಮಾಡಿ ಕೇಳಿದೆ. ‘ಹೋಗೋ! ಸಡನ್‌ಆಗಿ ಹಿಂಗೆ ಕೇಳಿದರೆ ಯಾವಳಿಗೆ ಗೊತ್ತಿರತ್ತೆ ’ ಅಂತ ರೇಗಿದಳು. ಆಮೇಲೆ ಮಾತು ಮುಂದುವರೆಸಿ ‘ಯಾರೋ ಆ ಪರ್ಸನ್‌’ ಎಂದಳು. ‘ಸೋಫಿಯಾ ಲಾರೆನ್‌ ಕಣೆ’ ಅಂದೆ. ಅದಕ್ಕೆ ಅವಳಿದ್ದವಳು ಇಮ್ಮೀಡಿಯಟ್‌ ಆಗಿ ‘ನಿನಗಷ್ಟೆ ಅವಳು ಸುಂದರಿ ಹೋಗೋ’ ಅಂತ ಮತ್ತೆ ಬೈಯ್ದು ಫೋನು ಕುಕ್ಕಿದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+