• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಚಿತ್ರಾನ್ನ - ತುತ್ತು 1

By Staff
|
ಲೈಟಾಗಿರೋದನ್ನು

ಬಯಸುವವರ

ವಾರಾನ್ನ !!

Sampige marada hasirele naduve... *ಎಸ್ಕೆ.ಶಾಮಸುಂದರ

Srivathsa Joshi Thatskannada columnistಅಂತರ್‌ಜಾಲದಲ್ಲಿ ಕನ್ನಡ ಓದುವವರಿಗೆ ಚೆನ್ನಾಗಿ ಪರಿಚಿತರಾದ ಹೊಸ ಪೀಳಿಗೆಯ ಲೇಖಕರಲ್ಲಿ ಶ್ರೀವತ್ಸ ಜೋಶಿ ಎದ್ದು ಕಾಣುವ ಹೆಸರು. ಕನ್ನಡ ಮನಸ್ಸಿನ ಆಗುಹೋಗುಗಳಿಗೆ ಕನ್ನಡಿಯಾಗುವ ಅವರ ಬರಹಗಳ ಮುಖ್ಯ ಸೆಳಕು ಓದಿಸಿಕೊಳ್ಳುವ ಗುಣ. ಯಾವುದೇ ಒಂದು ಕಾರ್ಯಕ್ರಮದ ವರದಿ ಅಥವಾ ಟಿಪ್ಪಣಿ ಅಥವಾ ಒಂದು ವಿಡಂಬನೆಯ ಧಾಟಿಯಲ್ಲಿ ಅವರ ಬರಹಗಳು ಕಾಣಿಸಿಕೊಂಡರೂ ಅವುಗಳ ಒಟ್ಟೂ ಉದ್ದೇಶ ಮಾಹಿತಿ ಸರಬರಾಜು ಮಾಡುವುದೇ ಆಗಿರುವುದೊಂದು ವೈಶಿಷ್ಟ್ಯ. ಮಾಹಿತಿಯಲ್ಲಿ ಮನೋರಂಜನೆಯನ್ನು, ಮನೋರಂಜನೆಯ ಮೂಲಕ ಮನೋವಿಕಾಸವನ್ನೂ ಹುಡುಕುವ ಅವರ ಭಾಷೆಯ ನೆಲೆಗಟ್ಟು ಹಾಸ್ಯ. ಅಲ್ಲಿ ಲವಲವಿಕೆ ಇದೆ, ವ್ಯಂಗತರಂಗಗಳಿವೆ, ವಿಡಂಬನೆಯ ಮುಖವಾಡದಲ್ಲಿ ಸಮಾಜದ ಓರೆಕೋರೆಗಳತ್ತ ಚಾಟಿ ಬೀಸುವ ಸಾತ್ವಿಕ ಕೋಪವೂ ಬಚ್ಚಿಟ್ಟುಕೊಂಡಿದೆ. ಮೇಲ್ನೋಟಕ್ಕೆ ಈ ಸಂಗತಿಗಳು ನಿಮಗೆ ಕಾಣಿಸಲಿಕ್ಕಿಲ್ಲ. ಯಾಕೆಂದರೆ ಭಾಷೆಯನ್ನು ದುಡಿಸಿಕೊಳ್ಳುವಾಗಿನ ಚುರುಕುತನ, ಓಘ, ಶ್ಲೇಷೆ , ತಮಾಷೆ, ಚತುರೋಕ್ತಿ, ಮತ್ತು ಸಾಂದರ್ಭಿಕ ವಿಲಾಸಗಳು ಎಡಬಿಡದೆ ಕೆಲಸ ಮಾಡುತ್ತಾ ನಿಮ್ಮ ಗಮನವನ್ನು ಹೈಜಾಕ್‌ ಮಾಡುತ್ತವೆ !

ಇಸವಿ 2002. ಅಕ್ಟೋಬರ್‌ 15ರ ವಿಜಯದಶಮಿ ದಿನದಿಂದ ಜೋಶಿ ಅವರು ನಿಮ್ಮ ಅಂತರಜಾಲ ತಾಣಕ್ಕೆ ನಿಯಮಿತವಾಗಿ ಅಂಕಣವೊಂದನ್ನು ಬರೆಯುತ್ತಾರೆ. ನವಿರು ಧಾಟಿಯಲ್ಲಿ ಬರೆಯಿಸಿಕೊಳ್ಳುವ , ಕಚಗುಳಿಯಿಡುವ ಹಾಸ್ಯ ಲೇಖನ, ಒಗಟು, ತಮಾಷೆ, ಮತ್ತು ದೈನಂದಿನ ಬದುಕಿನಿಂದ ಆಯ್ದು ತಂದ ವೈನೋದಿಕಗಳನ್ನು ಜೋಶಿ ಅವರು ಇಲ್ಲಿ ಉಣಬಡಿಸುತ್ತಾ ಹೋಗುತ್ತಾರೆ. ಸ್ವೀಕರಿಸಿ.

**

Vichitraanna !!ಕನ್ನಡಿಗರ ಆಹಾರ ಪದ್ದತಿಯಲ್ಲಿ ಪರ್ಮನೆಂಟ್‌ ಸ್ಥಾನ ಪಡೆದಿರುವ ಥ್ರೀ ಇನ್‌ ಒನ್‌, ಆಲ್‌ ಇನ್‌ ಒನ್‌ ತಿಂಡಿ-ಊಟ-ಲಘು ಉಪಾಹಾರದ ನಿಜನಾಮಧೇಯ ಚಿತ್ರಾನ್ನ !...ಇದು ಕನ್ನಡ ಸಂಸ್ಕೃತಿಗಷ್ಟೇ ವಿಶೇಷವಾದದ್ದು, ಮೀಸಲಾದದ್ದು ಹಾಗೂ ಸಮಸ್ತ ಕನ್ನಡಿಗರ ಪುಣ್ಯಕ್ಕೆ ಪ್ರತೀಕವೂ ಹೌದು!

ಮೊದಲೇ ಚಿತ್ರಾನ್ನ, ಇನ್ನು ಅದು ವಿಚಿತ್ರಾನ್ನವಾದರೆ ಹೇಗಿದ್ದೀತು ? ಬನ್ನಿ, ನೀವೇ ಆಸ್ವಾದಿಸಿ ಆನಂದಿಸುವಂಥವರಾಗಿ !!

ಇಲ್ಲಿನ ಬರಹಗಳನ್ನು ಓದಿ ಸಂತೋಷಪಟ್ಟವರು, ಬೇಜಾರುಪಟ್ಟುಕೊಂಡವರು ಆದರೆ, ತಮ್ಮದೇ ಆದ ಹಾಸ್ಯ ವಸ್ತು ವಿಶೇಷ ವೈವಿಧ್ಯಗಳನ್ನು ಲೇಖಕರಿಗೆ ಸೂಚಿಸಬಯಸುವವರು ಶ್ರೀವತ್ಸ ಜೋಶಿ ಅವರಿಗೆ ನೇರವಾಗಿ ಪತ್ರ ಬರೆಯಬಹುದು. sjoshim@hotmail.com

ಲೇಖಕರು ಈ ಹೊತ್ತು ವಾಷಿಂಗ್‌ಟನ್‌ ಡಿಸಿ ಮೆಟ್ರೋ ಪ್ರದೇಶದ ಮೇರಿಲ್ಯಾಂಡ್‌ನಲ್ಲಿ ಸಾಫ್ಟ್‌ವೇರ್‌ ಕನ್ಸಲ್‌ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರೂ ಚಿಕಾಗೋದಲ್ಲಿ ಮೂಲ ಉದ್ಯೋಗ ಮತ್ತು ವಾಸ. ಇವೆಲ್ಲವಕ್ಕೂ ಮೂಲ ಕರ್ನಾಟಕ, ಆದಿ ಮೂಲ ಕಾರ್ಕಳ !

ಇದೇ ಲೇಖಕರು ಕಟ್ಟಿಕೊಡುತ್ತಿರುವ ಅಮೆರಿಕಾ ಮಾಹಿತಿ Let us Know US ಪುಟಗಳಿಗೆ ಭೇಟಿಕೊಡಿ

ವಿಚಿತ್ರಾನ್ನ - ತುತ್ತು 1

Thank you for choosing Thatskannada.com

shami.sk@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more