• search

ರಂಗಭೂಮಿ ದಿನವೇ ರಾಜಕೀಯ ಬೃಹನ್ನಾಟಕಕ್ಕೆ ವೇದಿಕೆ ಸಿದ್ಧ!

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮಾರ್ಚ್ 27 : 'ವಿಶ್ವ ರಂಗಭೂಮಿ ದಿನ'ದಂದೇ ಕಾಕತಾಳೀಯವಾಗಿ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಿಸಿದೆ. ಜೊತೆಗೆ, ಕರ್ನಾಟಕ ವಿಧಾನಸಭೆ ಚುನಾವಣೆಯೆಂಬ ರಾಜಕೀಯ ಬೃಹನ್ನಾಟಕಕ್ಕೆ ವೇದಿಕೆ ಕಲ್ಪಿಸಿದೆ.

  ಬಹು ದೃಶ್ಯಗಳ ಈ ಬೃಹನ್ನಾಟಕದ ಅಂಕಪರದೆ ಮೇ 12ರಂದು ಮೇಲೇಳುತ್ತದೆ ಮತ್ತು ರಾಜ್ಯದ ಜನರೇ ರಾಜಕಾರಣಿಗಳೆಂಬ ಪಾತ್ರಧಾರಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ನಂತರ, ಮೇ 15ರಂದು ನಾಟಕಕ್ಕೆ ತೆರೆಬೀಳಲಿದ್ದು, ಫಲಿತಾಂಶವೂ ಹೊರಬೀಳಲಿದೆ.

  ಚುನಾವಣೆ ದಿನಾಂಕ ಕರ್ನಾಟಕದ ಭವಿಷ್ಯ ಸೂಚಿಸಿದೆ: ಜ್ಯೋತಿಷಿ ಅಮ್ಮಣ್ಣಾಯ

    ಕರ್ನಾಟಕ ಚುನಾವಣಾ 2018ಕ್ಕೆ ರೋಚಕ ತಿರುವು | ಸಂಪೂರ್ಣ ಮಾಹಿತಿ ಇಲ್ಲಿದೆ | Oneindia Kannada

    ಈ ನಾಟಕದಲ್ಲಿ ಪ್ರತಿಯೊಂದು ಪಕ್ಷಗಳಿಗೂ ಪ್ರತ್ಯೇಕ ಸೂತ್ರಧಾರಿಗಳು, ನಿರ್ದೇಶಕರು ಬೇರೆಬೇರೆ ಇರಲಿದ್ದು, ಅವರೇ ಪಾತ್ರಧಾರಿಗಳನ್ನು ಆಯ್ಕೆ ಮಾಡಲಿದ್ದಾರೆ. ಯಾರ್ಯಾರಿಗೆ ಈ ನಾಟಕದಲ್ಲಿ ಭಾಗವಹಿಸಲು, ನಟಿಸಿ ಮಿಂಚಲು ಅವಕಾಶ ಸಿಗುತ್ತದೋ ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.

    Stage set for Karnataka assembly election on World theatre day

    ಪಾತ್ರಧಾರಿಗಳು ತಮಗೆ ತಾವೇ ಬಣ್ಣಹಚ್ಚಿಕೊಳ್ಳಲಿದ್ದು, ನಾಟಕವಾಡಲು ಪ್ರತಿನಿತ್ಯ ನಿಮ್ಮ ಮುಂದೆ ಬರಲಿದ್ದಾರೆ. ಬೃಹತ್ ಸಮಾವೇಶಗಳಲ್ಲಿ, ಜಾಥಾಗಳಲ್ಲಿ, ಇಂಟರ್ನೆಟ್ಟುಗಳಲ್ಲಿ, ಟಿವಿಗಳಲ್ಲಿ, ಕಡೆಗೆ ಒಂದು ದಿನ ನಿಮ್ಮ ಮನೆಯ ಮುಂದೆಯೇ ಭರ್ಜರಿ ಅಭಿನಯವನ್ನು ನೀಡಲಿದ್ದಾರೆ.

    ಏನೇನು ಡೈಲಾಗುಗಳನ್ನು ಹೊಡೆಯುತ್ತಾರೆ ಕಿವಿಗೊಟ್ಟು ಕೇಳಿರಿ. ಡೈಲಾಗುಗಳನ್ನು ಮರೆತರೆ, ಮರೆತಂತೆ ನಟಿಸಿದರೆ, ಹೇಳಬೇಕಾದುದನ್ನು ಬಿಟ್ಟು ಬೇರೆನನ್ನಾದರೂ ಹೇಳಿದರೆ, ತಿದ್ದಿ ಸರಿಯಾದ ಡೈಲಾಗು ಹೊಡೆಯಿಸಲು ಅಥವಾ ರಂಗದಿಂದಲೇ ಕೆಳಗಿಳಿಸಲು ಪ್ರೇಕ್ಷಕರಾದ ನೀವಂತೂ ಇದ್ದೇ ಇರುತ್ತೀರಿ.

    ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು

    ರಾಜಕಾರಣಿಗಳು ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆ ಒದಗಿಸುವಲ್ಲಿ ನಿಸ್ಸೀಮರು. ಇನ್ನು ನಟನೆಯಲ್ಲಂತೂ ಒಬ್ಬರನ್ನೊಬ್ಬರು ಮೀರಿಸುವವರಿದ್ದಾರೆ. ಅವರ ಹಾವಭಾವ, ಸನ್ನಿವೇಶಕ್ಕೆ ತಕ್ಕಂಥ ನಟನೆಯನ್ನು ಆಧರಿಸಿ ಅಂಕಗಳನ್ನು ನೀಡಿ, ಅತ್ಯುತ್ತಮ ನಟ, ನಟಿ, ನಿರ್ದೇಶಕ ಪ್ರಶಸ್ತಿಗಳನ್ನು ನೀಡಲು ಸಿದ್ಧರಾಗಿ.

    ಕೆಲವರು ಅವಶ್ಯತೆ ಇಲ್ಲದಿದ್ದರೂ ಉದ್ದುದ್ದ ಡೈಲಾಗು ಹೊಡೆಯುವವರಿದ್ದಾರೆ, ಕೆಲವರು ಬರೆದುಕೊಟ್ಟ ಡೈಲಾಗನ್ನೂ ಸರಿಯಾಗಿ ಉಚ್ಚರಿಸಲು ಬರದವರಿದ್ದಾರೆ, ಕೆಲವರು ಮೌನದಿಂದಲೇ ತಮ್ಮ ಅಭಿನಯವನ್ನು ಪ್ರಚುರಪಡಿಸುವವರಿದ್ದಾರೆ, ಇನ್ನು ಕೆಲವರಿಗಂತೂ ಹಾವವೂ ಇಲ್ಲ, ಭಾವವಂತೂ ಇಲ್ಲವೇ ಇಲ್ಲ.

    ಏನೇನು ಸನ್ನಿವೇಶಗಳು ಇರಲಿವೆ, ಯಾವ್ಯಾವ ಪಾತ್ರಧಾರಿಗಳು ಎಂಥ ಪಾತ್ರ ಮಾಡಲಿದ್ದಾರೆ, ಎಂತೆಂಥ ಸಂದರ್ಭಗಳು ಸೃಷ್ಟಿಯಾಗಲಿವೆ, ಸೂತ್ರಧಾರಿಗಳು ಯಾವಾಗ ಎಂಟ್ರಿ ತೆಗೆದುಕೊಳ್ಳುತ್ತಾರೆ, ಹಿನ್ನೆಲೆ ಸಂಗೀತ ಹೇಗಿರಲಿದೆ, ಎಂತೆಂಥ ಸೆಟ್ಟಿಂಗ್ ಗಳು ನಿರ್ಮಾಣವಾಗಲಿವೆ ನಿಮಗೆ ಊಹಿಸಲೂ ಸಾಧ್ಯವಿಲ್ಲ. ಎಲ್ಲವನ್ನೂ ಕಾದುನೋಡಬೇಕು.

    ನಾಟಕಕ್ಕಾಗಿ ಕಾಸ್ಟ್ಯೂಮ್ ಗಳು ಈಗಾಗಲೆ ಸಿದ್ಧವಾಗಿವೆ. ಮೇಕಪ್ ಗಾಗಿ ಈಗಾಗಲೆ ಎಲ್ಲ ಪಾತ್ರಧಾರಿಗಳು ಬೇಸ್ ಹಚ್ಚಿಕೊಂಡು ಸಿದ್ಧರಾಗಿದ್ದಾರೆ. ಅಲ್ಲಲ್ಲಿ ಸ್ಟಾರ್ ಪ್ರಚಾರಕರಿಂದ ಐಟಂ ಸಾಂಗ್ ಗಳೂ ಇರಲಿವೆ. ಕೆಲವರು ಸನ್ನಿವೇಶಕ್ಕೆ ತಕ್ಕಂತೆ ಗ್ಲಿಸರಿನ್ ಬಳಸಿ ಕಣ್ಣೀರು ಸುರಿಸಿದರೂ ಅಚ್ಚರಿಯಿಲ್ಲ.

    ರಾಮಾಯಣದ ನಡುವೆ ಮಹಾಭಾರತ, ಮಹಾಭಾರತದ ನಡುವೆ ರಾಮಾಯಣ, ಸ್ಕ್ರಿಪ್ಟೇ ಇಲ್ಲದಂಥ ನೀರಸ ನಾಟಕ, ಭೀಕರ ಡೈಲಾಗುಗಳಿರುವ ಅತ್ಯಾಧುನಿಕ ನಾಟಕ ನಿಮ್ಮ ಮುಂದೆ ಮುಂದಿನ ದಿನಗಳಲ್ಲಿ ತೆರೆದುಕೊಳ್ಳಲಿವೆ. ಮಾತಿಗೆ ಮಾತು, ನಟನೆಗೆ ನಟನೆ, ಪ್ರೇಕ್ಷಕರಾಗಿರುವ ಮತದಾರರಿಗೆ ಭರ್ಜರಿ ಮನರಂಜನೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Drama Stage set for Karnataka assembly elections 2018 on World theatre day. What a coincidence! Many political leaders play many roles, act according to the situation, and enact wonderful drama altogether. But, you are the one who are going to decide who the best artist is.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more