ಇಸ್ರೋ ಜೊತೆ ಶಬಾನ ಅಜ್ಮಿ ಒಪ್ಪಂದ

ISRO chief Madhavan Nair and Shabana Ajmi sign MOU
ಬೆಂಗಳೂರು,ಡಿ. 01: ಬಾಲಿವುಡ್ಡಿನ ಪ್ರಖ್ಯಾತ ತಾರೆ ಶಬಾನ ಅಜ್ಮಿಯವರು ಇಂದು ಇಸ್ರೋ ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಆ ಒಪ್ಪಂದದ ಪ್ರಕಾರ ಶಬಾನರವರ ಹುಬ್ಬುಗಳನ್ನು ಅಂತರಿಕ್ಷಕ್ಕೇರಿಸುವ ಹೊಣೆ ಇಸ್ರೋ ಪಾಲಿಗೆ ಒದಗಿದೆ.

ಇಸ್ರೋ ಮುಖ್ಯಸ್ಥ ಡಾ.ಮಾಧವನ್ ನಾಯರ್ ಒಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಬಾನರವರು, ತಮ್ಮ ಹುಬ್ಬುಗಳನ್ನು ಮೇಲಕ್ಕೇರಿಸಲು ತಾವು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.

"ನನ್ನ ಹುಬ್ಬುಗಳನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೇರಿಸಬೇಕೆಂದು ನಾನು ಬಹಳ ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ. ಇಸ್ರೋದವರ ಚಂದ್ರಯಾನ-1 ಯಶಸ್ಸಿನ ನಂತರ ನನ್ನ ಪ್ರಯತ್ನಕ್ಕೆ ತಜ್ಞರ ಸಹಾಯಪಡೆಯುವ ಆಲೋಚನೆ ಬಂತು" ಎಂದ ಅವರು ತಮ್ಮ ಹುಬ್ಬುಗಳನ್ನು ಅಂತರಿಕ್ಷಕ್ಕೇರಿಸುವುದರಲ್ಲಿ ಇಸ್ರೋ ವಿಜ್ಞಾನಿಗಳು ಸಫಲರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಅನಂತರ ಮಾತನಾಡಿದ ಡಾ.ನಾಯರ್, "ಇದು ನಾಸಾದವರೂ ಮಾಡಿರದಂತಹ ಒಂದು ಹೊಸ ಪ್ರಯೋಗ. ಆದರೆ, ನಮ್ಮ ವಿಜ್ಞಾನಿಗಳ, ತಂತ್ರಜ್ಞರ ಬಗೆಗೆ ನನಗೆ ಪೂರ್ಣ ವಿಶ್ವಾಸವಿದೆ. ಚಂದ್ರಯಾನದ ಯಶಸ್ಸಿನ ನಂತರ ಯಾವುದೇ ಸವಾಲಿಗೂ ನಮ್ಮ ಸಂಸ್ಥೆ ಸಿದ್ಧ. ಶಬಾನರವರ ಬಲ ಹುಬ್ಬು ಈಗಾಗಲೇ ಅಂತರಿಕ್ಷಕ್ಕೇರಲು ಸಿದ್ಧವಿರುವುದರಿಂದ ಅದನ್ನೇ ಮೊದಲು ಏರಿಸುವ ಯೋಜನೆ ನಮ್ಮದು" ಎಂದರು.

(ಪಿ.ಟಿ.ಹೈ. ಇನ್ ಕೊಲಾಬೊರೇಷನ್ ವಿತ್ ಮಜಾವಾಣಿ.ನೆಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+