ನಿಮಗೂ ಆ ಹೊಲಸ ವಿಡಿಯೋ ಬಂದದೇನ ನೋಡ್ರಿ!
ಯಾಕ್ರೀ ಇಂಥ ಹೊಲಸು ವಿಡಿಯೋನೆಲ್ಲಾ ಕಳಿಸ್ತೀರಾ? ಅಯ್ಯೋ ನಾನು ಕಳಿಸಿಲ್ಲಾ ಇವ್ರೇ, ಅದು ಸ್ಪಾಮ್ ವಿಡಿಯೋ! ಇಂಥದೊಂದು ಮಾತುಕತೆ ಫೇಸ್ ಬುಕ್ ನಲ್ಲೆಲ್ಲಾ ನಡೆಯುತ್ತಿದೆ. ಇದು ಎಬ್ಬಿಸಿರುವ ಹಾವಳಿ ಅನೇಕ ಫೇಸ್ ಬುಕ್ ಸ್ನೇಹಿತರಿಗೆ ಸಾಕಷ್ಟು ತಲೆನೋವು ತಂದಿದೆ. ಸದ್ಯಕ್ಕೆ ಅದನ್ನೆಲ್ಲ ಮರೆತು, ತಲೆನೋವು ಓಡಿರುವ ಈ ಹಾಸ್ಯ ಲೇಖನವನ್ನು ಓದಿರಿ.
***
ಆದರ ಯಾಕೋ ಇತ್ತೀಚಿಗೆ ಒಂದ ಏರಡ ವಾರದಿಂದ ನನ್ನ ಹೆಂಡತಿನೂ ಬಂದ ಬಂದ ನಾ ಫೇಸಬುಕ ಮುಂದ ಕೂತಾಗ ತನ್ನ 'ಫೇಸ್' ತುರಕಲಿಕತ್ತಾಳ. ಮೊನ್ನೆ ಒಂದ ಸರತೆ ಹಿಂಗ ನಡಕ ತಲಿ ಹಾಕಿದಾಗ...
"ನಿನಗ ಇದರಾಗ ಏನ ತಿಳಿತದ ಅಂತ ತಲಿ ಹಾಕತಿ, ಸುಮ್ಮನ ಮಕ್ಕಳ ಸಾಲಿ ಬುಕ್ ತೊಗೊಂಡ ಅವರಿಗೆ ಅಭ್ಯಾಸ ಮಾಡಸ ಹೋಗ, ಪರೀಕ್ಷಾ ಹತ್ತರ ಬಂದದ" ಅಂತ ನಾ ಜೋರ ಮಾಡಿದೆ.

"ರ್ರೀ, ನಂಗೊತ್ತದ. ನೀವು ಸುಮ್ಮನಿರ್ರೀ... ಈ ಸುಡಗಾಡ ಫೇಸಬುಕ ವಾಲ್ ಮ್ಯಾಲೆ ಹೊಲಸೊಲಸ ಚಿತ್ರ ಬರತಾವ ಅಂತ ಅದಕ್ಕ ನೋಡಿದೆ" ಅಂದ್ಲು.
"ಲೇ, ಎರಡ ಮಕ್ಕಳಾಗ್ಯಾವ, ತಿಳಿತದ ಇಲ್ಲೋ, ಇನ್ನೂ ಏನ ಅಸಂಯ್ಯ-ಅಸಂಯ್ಯ ಚಿತ್ರಾ ನೋಡ್ತಿ" ಅಂದೆ.
"ರ್ರೀ, ನೀವ ಏನರ ಹಂತಾವ ನೋಡ್ಲಿಕತ್ತಿರೇನ ಅಂತ ನೋಡಿದೆ. ಹಂತಾವೆಲ್ಲಾ ನೋಡಲಿಕ್ಕೆ ನಂಗೇನ ಹುಚ್ಚ ಹಿಡದದ ಏನ? ಎದಿ ಉದ್ದ ಮಕ್ಕಳಾದರೂ ಹಿಂತಾವೆಲ್ಲಾ ಮಂಗ್ಯಾನಾಟಾ ಮಾಡೋರು ನೀವ, ಗಂಡಸರು" ಅಂತ ತನ್ನ ಗಲ್ಲಾ ಕೆಂಪ ಮಾಡ್ಕೊಂಡ ನನ್ನ ಮಾರಿ ತಿವಿದ ಹೋದ್ಲು.
ಪಾಪ, ಅಕಿ ಇಷ್ಟ ದಿವಸ ಫೇಸಬುಕ್ ಅಂದರ ಬರೆ ಫೇಸಿಯಲ್ activity ಇಷ್ಟ ಇರತಾವ ಅಂತ ತಿಳ್ಕೊಂಡಿದ್ಲು. ಅಕಿಗೆ ಯಾರೋ ಫೇಸಬುಕನಾಗ ಅಶ್ಲೀಲ video/picture tag ಮಾಡೊದರ ಬಗ್ಗೆ ಹೇಳ್ಯಾರ. ಅವಾಗಿಂದ ಭಾಳ ತಲಿ ಕೆಡಿಸಿಕೊಂಡ ನಾ ಏನರ ಹಂತಾವ like ಮಾಡ್ತೇನಿ, ಇಲ್ಲಾ ಯಾರಿಗರ ಹಂತಾವ ಕಳಿಸಿ ಪೋಕ್ ಮಾಡ್ಲಿಕತ್ತೇನಿನೂ ಅಂತ ನೋಡತಿರ್ತಾಳ.
ಅದರಾಗ ಹೋದವಾರ ಅಕಿ ಕಸೀನ ಒಬ್ಬೊಕಿ ಹುಬ್ಬಳ್ಳಿಗೆ ಬಂದಾಗ ನನ್ನ ಹೆಂಡತಿಗೆ "ಮಾಮಾ ಫೆಸಬುಕನಾಗ ಹೆಂತಾ ಅಸಂಯ್ಯ-ಅಸಂಯ್ಯ ವಿಡೀಯೋ ಕಳಸ್ತಾರವಾ, ನೀ ಏನ ಅನ್ನಂಗಿಲ್ಲೆನ?" ಅಂತ ಕೇಳಿ ಹೋಗ್ಯಾಳ, ಅವಾಗಿಂದ ನನ್ನ ಹೆಂಡತಿ ತಲ್ಯಾಗ ಹೊಸ-ಹೊಸಾ ನೋಟಿಫಿಕೇಷನ್ ಬರಲಿಕತ್ತಾವ.
"ಅಲ್ಲಾವಾ, ಅದು ನಾ ಕಳಿಸಿದ್ದಲ್ಲಾ, ಅದಕ್ಕ ಸ್ಪಾಮ್ ವಿಡಿಯೋ ಅಂತಾರ. ಅದು ವೈರಸ್ ಇದ್ದಂಗ, ಅಟೋಮೆಟಿಕ್ ನನಗೂ ಗೊತ್ತಾಗಲಾರದ ನನ್ನ ಅಕೌಂಟನಿಂದ ಎಲ್ಲಾ ಫೇಸಬುಕ್ ಫ್ರೆಂಡ್ಸಗೆ ಹೋಗ್ತದ" ಅಂತ ಎಷ್ಟ ತಿಳಿಸಿ ಹೇಳಿದರು ತಿಳಿವಲ್ತು ಅಕಿಗೆ.
"ಅಲ್ರಿ. ಬುದ್ಧಿ ಎಲ್ಲೆ ಇಟ್ಟೀರಿ, ಮಕ್ಕಳಾಗಿ ಮುದಕರಾದರಿ, ಅದರಾಗ ಪಾಪ ಅಕಿದು ಮೊನ್ನೆ-ಮೊನ್ನೆನ ಮದುವಿ ಆಗೇದ, ಅಕಿ ಗಂಡಾ ಅದನ್ನ ನೋಡಿದ್ರ ಏನ ತಿಳ್ಕೊಬೇಕು ನಿಮ್ಮ ಬಗ್ಗೆ?" ಅಂತ ಅಂದ್ಲು.
ನಂದು ತಲಿ ಕೆಡ್ತ "ಲೇ...ನೀ ಏನ್ ಕಾಳಜಿ ಮಾಡಬ್ಯಾಡಾ, ನನ್ನ ವಿಡೀಯೋ ಅಕಿ ಗಂಡಗೂ ಹೋಗೇದ. ಅಂವಾ ಅದನ್ನ like ಮಾಡಿ ಮತ್ತ ತನ್ನ wall ಮ್ಯಾಲೆ share ಮಾಡ್ಯಾನ. ನೀ ಯಾಕ ತಲಿ ಕೆಡಿಸಿಗೋತಿ ತೊಗೊ" ಅಂತ ಅಂದೆ. ಅಕಿ ನನ್ನ ಮಾರಿ ಒಮ್ಮೆ ನೋಡಿ...
"ಆ ಫೇಸಬುಕ್, ಅದರಾಗಿನ ನಿಮ್ಮ ಅಕೌಂಟ್, ನಿಮ್ಮ ಫೇಸಬುಕ್ ಫ್ರೆಂಡ್ಸ್, ಎಲ್ಲಾರನೂ ಒಂದ ಸರತೆ ಸುಟ್ಟ ಬರ್ತೇನಿ" ಅಂದ್ಲು.
ಏನೋ ಪುಣ್ಯಾ ನನ್ನ ಸುಟ್ಟ ಬರ್ತೆನಿ ಅನ್ನಲಿಲ್ಲಾ ಅಂತ ಸುಮ್ಮನಾದೆ. ಅಲ್ಲಾ, ಯಾರೋ ಮಂದಿ ಸುಮ್ಮ-ಸುಮ್ಮನ ನನ್ನ ಹೆಸರಿಲೆ ಹೊಲಸ ವಿಡಿಯೋ ಕಳಸಿದರ ನಾ ಏನ ಮಾಡ್ಬೇಕರಿಪಾ? ಅಲ್ಲಾ ಆ ವಿಡಿಯೋದಾಗ ಏನ್ ನಾ ಇದ್ದೇನ? ನಂದ ವಿಡಿಯೋ ಅನ್ನಲಿಕ್ಕೆ? ನನ್ನ ಹೆಂಡತಿಗೆ ಈ ಫೇಸಬುಕ್ ಬಗ್ಗೆ ಒಂದು ತಿಳಿಯಂಗಿಲ್ಲಾ- ಬಿಡಂಗಿಲ್ಲಾ ಸುಳ್ಳ ಸುಳ್ಳ ನಮ್ಮ ಜೀವಾ ತಿಂತಾಳ...
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications