ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಗೆ ಹಾರಿಸೋದು ಅಂದ್ರೆ ಏನು, ನಿಮಗೇನಾದ್ರೂ ಗೊತ್ತಾ?

By ಮಪ
|
Google Oneindia Kannada News

ಕಾಗೆ ಹಾರಿಸೋದು ಅಂದ್ರೆ ಏನು? ಒಂದು ವಾಕ್ಯದಲ್ಲಿ ಉತ್ತರ ಹೇಳಲು ಸಾಧ್ಯವಿಲ್ಲ. ಮೋಸ ಮಾಡುವುದು, ವಂಚನೆ ಮಾಡುವುದು, ಕೈ ಕೊಡುವುದು, ಮಾತಿಗೆ ತಪ್ಪುವುದು....ಹೀಗೆ ನಾನಾ ಕಾರಣಕ್ಕೆ ಕಾಗೆ ಈ ವಾಕ್ಯ ಬಳಕೆ ಮಾಡಿಕೊಳ್ಳಲಾಗುತ್ತದೆ. ಕಾಗೆಗಳೇನಾದರೂ ಸುಪ್ರೀಂ ಕೋರ್ಟ್ ಗೆ ಮಾನನಷ್ಟ ಹಾಕಿದರೆ ಕತೆ ಮುಗಿದಂತೆ!

ಸಿದ್ದರಾಮಯ್ಯ ಕಾರು ಚಾಲಕರು ಮತ್ತು ಸಿಬ್ಬಂದಿ ಇವತ್ತು ಪಕ್ಕಾ ಕಾಗೆ ಹಾರಿಸಲು ಯತ್ನ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಆದರೆ ಬಡ್ಡಿ ಮಗಂದು ಕಾಗೆ ಹಾರಲೆ ಇಲ್ಲ! ಅದೂ ಸುದ್ದಿಯಾಯಿತು.[ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!]

crow

ಕಾಗೆ ಕಂಡರೆ ಯಾವ ಶಕುನ ಗೊತ್ತಿಲ್ಲ. ನಾವು ಹುಟ್ಟಿ ಬೆಳೆದಿದ್ದು ಮಲೆನಾಡಲ್ಲಿ. ನಮಗೆ ಗೊತ್ತಿದ್ದದ್ದು ಎರಡೇ ಪ್ರಕಾರದ ಕಾಗೆ. ಒಂದು ನಮ್ಮ ಮನೆಗಳ ಸುತ್ತ ಕಂಡುಬರುವುದು. ಇನ್ನೊಂದು ಪೇಟೆ ಕಾಗೆ. ಮನೆಯ ಸುತ್ತ ಕಂಡುಬರುವವು ಪಕ್ಕಾ ಕಪ್ಪು. ಪೇಟೆ ಕಾಗೆಗಳ ಕುತ್ತಿಗೆ ಬಳಿ ಬಿಳಿಯ ಪಟ್ಟಿ ತರಹದ್ದು ಇರುತ್ತದೆ.

ಕಾಗೆಗಳು ಇಲ್ಲದ ದೇಶ ಯಾವುದೋ ಇದೆ ಎಂದು ಕೇಳಿದ್ದ ನೆನಪು. ಮರೆತು ಹೋಗಿದೆ. ಎಲ್ಲಾ ದೇಶ, ಎಲ್ಲಾ ಖಂಡಗಳಲ್ಲೂ ಕಾಗೆಗಳಿವೆ ಎಂದು ವಿಕಿಪೀಡಿಯಾ ಹೇಳುತ್ತದೆ.[ಸಾಡೇಸಾತಿ ಎಂದರೇನು, ಏನಿದರ ಮರ್ಮ?]

ಪುಣ್ಯ ತಿಥಿ, ಶ್ರಾದ್ಧದ ವೇಳೆ ಕಾಗೆಗಳಿಗೆ ಎಡೆ ಇಡುವ ಪದ್ಧತಿ ಇದೆ. ಕಾಗೆ ಬಂದು ಯಾವ ಕಜ್ಜಾಯವನ್ನು ಆರಿಸಿಕೊಳ್ಳುತ್ತದೆ ಎಂಬ ಆಧಾರದಲ್ಲಿ ಸಾವಿಗೀಡಾದವರು ಸಂತೃಪ್ತರಾದರು ಎಂಬ ಮಾತನ್ನು ಹೇಳುತ್ತಾರೆ.

ಕಾಗೆ ಹಂಚಿ ತಿನ್ನುವ ಪಕ್ಷಿ, ಅನ್ನದ ಅಗುಳು ಒಂದನ್ನು ಕಂಡರೂ ತನ್ನ ಬಳಗವನ್ನು ಕರೆಯುತ್ತದೆ ಎಂಬ ಮಾತುಗಳನ್ನು ಕೇಳಿಕೊಂಡು ಬಂದಿದ್ದೇವೆ. ಈ ಕಾಗೆ ದೊಡ್ಡ ಮರೆಗುಳಿಯಂತೆ, ಆಹಾರವನ್ನು ಕಚ್ಚಿಕೊಂಡು ಹೋಗಿ ಮರದ ಮೇಲಿಟ್ಟು ತನ್ನ ಬಳಗವನ್ನು ಕರೆಯುವ ವೇಳೆಗೆ ಇಟ್ಟ ಜಾಗ ಮರೆತು ಹೋಗುತ್ತದೆ ಎಂಬ ಮಾತು ಇದೆ. [ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?]

ಮಲೆನಾಡಿನಲ್ಲಿ ಹೇರಳವಾಗಿ ಕಾಣುವ "ಶಳ್ಳೆ"( ಒಂದು ಜಾತಿಯ ಮರ, ಬೀಟೆ, ಹಲಸು, ನೇರಳೆ ಇದ್ದಂತೆ) ಮರದ ಮೇಲೆ ಕಾಗೆ ಗೂಡು ಇರುತ್ತದೆ. ಕಾಗೆಗಳ ಮರಿ ಮರದಲ್ಲಿದ್ದರೆ ತುಂಬಾ ಡೆಂಜರ್. ಹತ್ತಿರ ಸುಳಿದವರ ಅಟ್ಟಿಸಿಕೊಂಡು ಬಂದು ತಲೆ ಕುಕ್ಕುತ್ತವೆ.

crow

ಕಾಗೆಗೆ ಶನಿದೇವರ ವಾಹನದ ಸ್ಥಾನ ಕೊಟ್ಟಿದ್ದೇವೆ. ಅಪಶಕುನದ ಚಿಹ್ನೆ ಎಂಬ ಕುಖ್ಯಾತಿ ಬೆಕ್ಕಿನ ನಂತರ ಕಾಗೆಗೆ ಸಲ್ಲುವುದು. ಕಾಗೆಗಳು ಮನೆ ಹತ್ತಿರ ಬಂದು ಅರಚುತ್ತಿದ್ದರೆ ಇವತ್ತು ಮನೆಗೆ ನೆಂಟರು ಬರಲಿದ್ದಾರೆ, ಅಥವಾ ಕೇಡು ಏನಾದರೂ ಸಂಭವಿಸಿಲಿದೆ, ಅಥವಾ ಕೆಟ್ಟ ಸುದ್ದಿ ಬರಲಿದೆ ಎಂಬ ಮಾತುಗಳು ಇನ್ನು ತಮ್ಮ ಶಕ್ತಿ ಕಳೆದುಕೊಂಡಿಲ್ಲ.[ಕಾಗೆ ಅಪಶಕುನಕ್ಕೆ ಹೆದರಿ ಇಂಜಿನಿಯರ್ ಆತ್ಮಹತ್ಯೆ!]

ಕಪ್ಪು, ಕಾಗೆ, ಕೆಟ್ಟದ್ದು ಎಂಬುದಕ್ಕೆ ನಾವೇ ಸಂಬಂಧ ಕಲ್ಪಿಸಿ ಬಂಧಿಸಿ ಬಿಟ್ಟಿದ್ದೇವೆ. ಕಾಗೆಗೆ ವೈಜ್ಞಾನಿಕವಾಗಿ Corvus Brachyrhynchos (ಉಚ್ಚಾರಣೆ ಕಷ್ಟ ಮಾರಾಯರೆ) ಎಂದು ಕರೆಯಲಾಗುತ್ತದೆ. ಸಾಮಾನ್ಯ ಕಾಗೆ 10-15 ವರ್ಷ, ಅಮೆರಿಕದ ಕಾಗೆ 7-8 ವರ್ಷ, ಆಸ್ಟ್ರೇಲಿಯಾದ ಕಾಗೆ 22 ವರ್ಷ ಬದುಕುತ್ತವೆ.

ಕಾಗೆಯನ್ನು ಹೆಚ್ಚು ಬಳಕೆ ಮಾಡಿಕೊಂಡ ಖ್ಯಾತಿ ನವರಸ ನಾಯಕರಿಗೆ ಅವರನ್ನು ಬಿಟ್ಟರೆ......ನಮ್ಮನ್ನು ಆಳುವವರಿಗೆ ಮುಖ್ಯಮಂತ್ರಿ ಗಳ ವಾಹನದ ಮೇಲೆ ಶನಿ ದೇವರ ವಾಹನ ಕೆಲ ಕಾಲ ವಿಶ್ರಾಂತಿ ಪಡೆದಿತ್ತು ಎಂಬ ಕಾರಣಕ್ಕೆ ಇದೊಂದು ಕಾಕಾ ಪುರಾಣ...

English summary
A Baby Crow Sits on CM Siddaramaiah's Car on Thursday, June 2 Morning. And refuses to Budge by Delaying for over 10 mins . After this incident a debate was started in television Media. A crow is a bird of the genus Corvus. The term "crow" is used both as part of the common name of many species, and collectively for all of Corvus. Here is a Crow story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X