ಭಾರತಕ್ಕಿಂತ ಹತ್ತು ವರ್ಷ ಮುಂದಿರುವ ಚೀನಾ

ತೈವಾನ್ ಮೂಲದ ಸಾಬೂನು ಕಂಪನಿಯ ಮುಖ್ಯಸ್ಥರೊಬ್ಬರು ಟಯಾಂಜಿನ್ ಗವರ್‍ನರ್‌ರನ್ನು ಭೇಟಿ ಮಾಡಿ, ಇಡಿ ಅಮೆರಿಕಕ್ಕೆ ಮುಂದಿನ ಐದು ವರ್ಷಕ್ಕೆ ಸಾಕಾಗುವಷ್ಟು ಸೋಪನ್ನು ಆರು ತಿಂಗಳ ಅವಧಿಯಲ್ಲಿ ತಯಾರಿಸುವುದಾಗಿ ಹೇಳಿದಾಗ, ಕೇವಲ ಎರಡು ತಿಂಗಳ ಅವಧಿಯೊಳಗೆ ಆ ಕಂಪನಿಯ ಮುಖ್ಯಸ್ಥ ಕೇಳಿದ ಎಲ್ಲ ಸೌಕರ್ಯಗಳನ್ನು ಒದಗಿಸುವುದಾಗಿ on the spot ವಾಗ್ದಾನ ಮಾಡಿದರು. ಆ ಪೈಕಿ ಹದಿನೆಂಟು ಕಿ.ಮೀ. ರಸ್ತೆ, ಎರಡು ಸೇತುವೆ ಹಾಗೂ ಪ್ರತ್ಯೇಕ ಸಣ್ಣ ವಿಮಾನ ನಿಲ್ದಾಣ ಕೂಡ ಸೇರಿತ್ತು. ಟಯಾಂಜಿನ್ ಗವರ್‍ನರ್ ಅವೆಲ್ಲವುಗಳಿಗೂ ಓಕೆ ಎಂದಿದ್ದ. ಅಷ್ಟೇ ಅಲ್ಲ ಎರಡು ತಿಂಗಳಲ್ಲಿ ಸೋಪ್ ಕಂಪನಿ ತನ್ನ ಘಟಕ ಸ್ಥಾಪಿಸುವುದಕ್ಕೆ ಕೆಂಪುಗಂಬಳಿಯನ್ನು ಹಾಸಿದ್ದ! ಮುಂದಿನ ನಾಲ್ಕು ತಿಂಗಳೊಳಗೆ ಘಟಕ ಸ್ಥಾಪನೆಯಾಯಿತು. ಆರು ತಿಂಗಳಾಗುವ ಹೊತ್ತಿಗೆ ಅಲ್ಲಿ ತಯಾರಾದ ಸೋಪ್‌ಗಳು ಅಮೆರಿಕದ ಬಚ್ಚಲುಮನೆಗಳಲ್ಲಿ ಕರಗುತ್ತಿದ್ದವು!
ನನಗೆ ಇವೆಲ್ಲಕ್ಕಿಂತ ತಮಾಷೆ ಅನಿಸಿದ್ದು ಈ ಪ್ರಸಂಗದಿಂದ. ಅಮೆರಿಕದ ವಾಗನ್-ಬಸೆಟ್ ಫರ್ನಿಚರ್ ಕಂಪನಿ ಚೀನಾದಲ್ಲಿ ಫರ್ನಿಚರ್ ತಯಾರಿಸಲು ನಿರ್ಧರಿಸಿತು. ಈ ವಿಷಯ ಚೀನಾದ ಸ್ಟಾರ್‌ಕಾರ್ಪ್ ಫರ್ನಿಚರ್ ಕಂಪನಿಗೆ ಹೇಗೋ ಗೊತ್ತಾಯಿತು. ನಾಲ್ಕು ದಿನಗಳಲ್ಲಿ ಸ್ಟಾರ್‌ಕಾರ್ಪ್‌ನ ಮುಖ್ಯಸ್ಥ ಬರ್ಮಾದಲ್ಲಿದ್ದ. ಬರ್ಮಾದಲ್ಲಿ ಉತ್ಪಾದನೆಯಾಗುವ ಟೀಕ್‌ವುಡ್ಡನ್ನು ತನ್ನ ಹೊರತಾಗಿ ಮತ್ತ್ಯಾರಿಗೂ ಕೊಡಬಾರದು ಎಂದು ಒಪ್ಪಂದ ಮಾಡಿಕೊಂಡ. ಅದಕ್ಕಾಗಿ ಲಕ್ಷಾಂತರ ಹೆಕ್ಟೇರ್ ಕಾಡನ್ನು ಖರೀದಿಸಿದ. ಈ ವಿಷಯ ವಾಗನ್-ಬಸೆಟ್ ಫರ್ನಿಚರ್ ಕಂಪನಿಗೆ ಗೊತ್ತಾಯಿತು. ಅವರು ಚೀನಾಕ್ಕೆ ಬರುವ ಯೋಚನೆಯನ್ನೇ ಕೈಬಿಟ್ಟರು. ಚೀನಾದಲ್ಲಿ ಬಿಜಿನೆಸ್ ಮಾಡಲು ತಲೆ, ಕಿಸೆಯಷ್ಟೇ ಮುಖ್ಯ ಅಲ್ಲ, ಅವೆಲ್ಲಕಿಂತ ಮುಖ್ಯವಾಗಿ speed ಬೇಕು. ಅದಕ್ಕಾಗಿ ಚೀನಾ ಕೇವಲ ಹತ್ತು ವರ್ಷಗಳಲ್ಲಿ ಭಾರತಕ್ಕಿಂತ ಇಪ್ಪತ್ತೈದು ವರ್ಷ ಮುಂದೆ ಹೋಗಿರೋದು.
ನಾನು ಸಾಮಾನ್ಯವಾಗಿ ಒಂದೇ ವಿಷಯಕ್ಕೆ ಜೋತುಬಿದ್ದು ಹೀಗೆ ವಾರವಾರ ಬರೆಯುವುದಿಲ್ಲ. ಆದರೆ ನಮ್ಮ ಪಕ್ಕದ ದೇಶದಲ್ಲಾಗುತ್ತಿರುವ ಈ ಪಾಟಿ ಕ್ರಾಂತಿ ನೋಡಿ ಬರೆಯದೇ ಇರುವುದಾದರೂ ಹೇಗೆ? ನಿಮ್ಮಲ್ಲಿ ಒಳ್ಳೆಯ ಐಡಿಯಾ ಹಾಗೂ ವೇಗ ಇದ್ದರೆ ನಿಮಗೂ ಚೀನಾದಲ್ಲಿ ಪುಟ್ಟ ಜಾಗವಿದೆ, ಹಾಗೂ ನಿಮ್ಮನ್ನೂ ಸ್ವಾಗತಿಸುವ ಕೈಗಳಿವೆ ಎಂದು ಹೇಳಲು ಇಷ್ಟೆಲ್ಲ ಬರೆಯಬೇಕಾಯಿತು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications