ಟ್ರೇಡಿಂಗ್ ಹೂಡಿಕೆ ಮಾಡಿಸಿ ಟೆಕ್ಕಿಗಳಿಗೆ ಮೋಸ : ಮೂವರು ವಂಚಕರು ಸಿಸಿಬಿ ಬಲೆಗೆ

ಬೆಂಗಳೂರು, ಜನವರಿ 22: ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ನಂಬಿಸಿ ಸಾಫ್ಟ್ ವೇರ್ ಉದ್ಯೋಗಿಗಳಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಇಬ್ಬರು ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಎಂಟು ಕೋಟಿ ರೂಪಾಯಿ ಮೌಲ್ಯದ ಐಶರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊತ್ತನೂರು ನಿವಾಸಿ ಸ್ಟೀಪನ್, ಕಲ್ಕೆರೆ ನಿವಾಸಿ ರಾಘವೇಂದ್ರ, ಹಾಗೂ ವಿದ್ಯಾರಣ್ಯಪುರ ನಿವಾಸಿ ಮಂಜುನಾಥ್ ಬಂಧಿತರು. ಇವರಿಂದ ಆಡಿ, ಬಿಎಂಡಬ್ಲೂ ಕಾರುಗಳು ಸೇರಿದಂತೆ ಎಂಟು ಕೋಟಿ ಮೌಲ್ಯದ ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೀಪನ್ ತನ್ನ ಸ್ನೇಹಿತ ರಾಘವೇಂದ್ರ ಜೆ ಸೇರಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭಾಂಶ ಮಾಡಿಕೊಡುವುದಾಗಿ ನಂಬಿಸುತ್ತಿದ್ದರು. ಇದಕ್ಕಾಗಿ ಜೋಸೆಫ್ ಕೆಲವು ಕಂಪನಿಗಳನ್ನು ಕೂಡ ತೆರೆದಿದ್ದ. ಒಂದು ಲಕ್ಷಕ್ಕೆ ತಿಂಗಳಿಗೆ 20 ಸಾವಿರ ಲಾಭ ಮಾಡಿಕೊಡುವುದಾಗಿ ನಂಬಿಸಿದ್ದರಿಂದ ಸಾಫ್ಟ್ ವೇರ್ ಇಂಜಿನಿಯರ್ ಗಳು ಮರುಳಾಗಿದ್ದರು. ವಂಚಕರ ಮಾತು ನಂಬಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಗಳು ಹೂಡಿಕೆ ಮಾಡಿದ್ದರು. ಬಹುತೇಕರ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿಸಿ ಆ ಹಣವನ್ನು ಆರೋಪಿತರ ಮಾಲಿಕತ್ವದ ಕಂಪನಿಗಳಲ್ಲಿ ಹೂಡಿಕೆ ಮಾಡಿಸಿ ಮೋಸ ಮಾಡಿದ್ದಾರೆ.

Bengaluru: Three People arrested for cheating software engineers

ಹೂಡಿಕೆ ಮಾಡಿದ ಹಣವನ್ನು ತನ್ನ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಟು ಕೋಟ್ಯಂತರ ರೂಪಾಯಿ ಹಣ ಮೋಸ ಮಾಡಿದ್ದರು. ಕುರಿತು ನೂರಾರು ದೂರುಗಳು ಕೇಳಿ ಬಂದಿದ್ದವು. ಸತೀಶ್ ಎಂಬುವರು ಚಂದ್ರಾ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ಚಂದ್ರಾ ಬಡಾವಣೆ ನಿವಾಸಿ ಸತೀಶ್ ಎಂಬುವರು ಸಾಫ್ಟ್‌ ವೇರ್ ಇಂಜಿನಿಯರ್ ಆಗಿದ್ದು, ಆರೋಪಿ ರಾಘವೇಂದ್ರನಿಗೆ ಸ್ನೇಹಿತನಾಗಿದ್ದ. ಸ್ಟೀಪನ್ ನನ್ನು ಪರಿಚಯ ಮಾಡಿಸಿದ್ದ ರಾಘವೇಂದ್ರ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ನಂಬಿಸಿದ್ದ. ತನ್ನ ಬಳಿ ಹಣ ಇಲ್ಲ ಎಂದು ಹೇಳಿದ ಸತೀಶ್ ಗೆ ರಾಘವೇಂದ್ರ ಹಾಗೂ ಸ್ಟೀಪನ್ ಬ್ಯಾಂಕ್ ನಲ್ಲಿ ಸಾಲ ಮಾಡಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ಬ್ಯಾಂಕ್ ಸಿಬ್ಬಂದಿ ಸತೀಶ್ ಅವರ ದಾಖಲೆ ಪಡೆದು 1,62 ಕೋಟಿ ರೂಪಾಯಿ ಸಾಲ ಕೊಡಿಸಿದ್ದರು. ಈ ಹಣಕ್ಕೆ ಪ್ರತಿ ತಿಂಗಳು 4. 20 ಲಕ್ಷ ರೂ. ಕೊಡುವುದಾಗಿ ಹೇಳಿದ್ದರು. ಹೀಗಾಗಿ ಲೋನ್ ಮೊತ್ತವನ್ನು ಸ್ಟೀಪನ್ ಹೆಸರಿನಲ್ಲಿ ತೆರೆದಿದ್ದ ಸ್ಟೀಪನ್ ಜಾನ್ ವೆಲ್ತ್ ಮ್ಯಾನೇಜ್ ಮೆಂಟ್ ಪ್ರೆ. ಲಿ. ಕಂಪನಿ ಖಾತೆಗೆ ವರ್ಗಾಯಿಸಿದ್ದ. ಮೊದಲೆರಡು ತಿಂಗಳು 4.20 ಲಕ್ಷ ರೂ. ಕೊಡುತ್ತಿದ್ದ. ಆನಂತರ ಹಣ ಕೊಡದೇ ಮೋಸ ಮಾಡಿದ್ದರು. ಹೀಗೆ ನೂರಾರು ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಮೋಸ ಮಾಡಿ ಆರೋಪಿಗಳು ಐಶರಾಮಿ ಜೀವನ ನಡೆಸುತ್ತಿದ್ದರು. ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಎಂಟು ಕೋಟಿ ಮೌಲ್ಯದ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮೋಸ ಮಾಡಿರುವ ಇಂಜಿನಿಯರ್ ಗಳ ವಿವರಗಳನ್ನು ಸಿಸಿಬಿ ಪೊಲೀಸರು ಸಂಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+